Muslims Attempted to Vandalize Car : ಅಮರೊಹಾದಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿ ಡ್ಯಾನಿಶ್ ಅಲಿ ಅವರ ಕಾರನ್ನು ಧ್ವಂಸಗೊಳಿಸಲು ಮುಸಲ್ಮಾನರ ಗುಂಪಿನಿಂದ ಪ್ರಯತ್ನ

5 ವರ್ಷಗಳಲ್ಲಿ ಮಾಡಿದ ಕೆಲಸಗಳ ಮಾಹಿತಿ ಕೇಳಿದರು !

ಅಮರೊಹ (ಉತ್ತರ ಪ್ರದೇಶ) – ಇಲ್ಲಿ ಕಾಂಗ್ರೆಸ್ಸಿನ ಸಂಸದ ಡ್ಯಾನಿಶ್ ಅಲಿ ಅವರು ಏಪ್ರಿಲ್ 5 ರಂದು ಸಂಜೆ ನಮಾಜ್ ಮಾಡಲು ಹೋಗುತ್ತಿರುವಾಗ ಮುಸ್ಲಿಮರ ಗುಂಪೊಂದು ಅವರ ಬೆಂಗಾವಲು ಪಡೆಗೆ ಸುತ್ತುವರಿದು ಕಾರನ್ನು ಧ್ವಂಸಗೊಳಿಸಲು ಪ್ರಯತ್ನಿಸಿದೆ. ಈ ಸಂದರ್ಭದಲ್ಲಿ ಗುಂಪು ಡ್ಯಾನಿಶ್ ಅಲಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಗಲಾಟೆ ಮಾಡಿದೆ. ಕೋಪಗೊಂಡ ಜನಸಮೂಹವು ಡ್ಯಾನಿಶ್ ಅಲಿಯಿಂದ ಕಳೆದ 5 ವರ್ಷಗಳಲ್ಲಿ ಕಾಮಗಾರಿ, ವಿಶೇಷವಾಗಿ: ನೌಗಾಂವ್ ಸಾದತ್ ಪಟ್ಟಣದಲ್ಲಿ ಮಾಡಿದ ಅವರ ಕೆಲಸದ ಬಗ್ಗೆ ಉತ್ತರಗಳನ್ನು ಕೇಳಿತು.

(ಸೌಜನ್ಯ: Republic)

ಡ್ಯಾನಿಶ್ ಅಲಿ ಈ ಮೊದಲು ಬಹುಜನ ಸಮಾಜ ಪಕ್ಷದ ಸಂಸದರಾಗಿದ್ದರು; ಆದರೆ ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷ ಅವರಿಗೆ ಅಮರೊಹ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಟಿಕೆಟ್ ನೀಡಿದ್ದಕ್ಕೆ ಸ್ಥಳೀಯ ಮುಸಲ್ಮಾನರು ಆಕ್ರೋಶಗೊಂಡು ಅವರ ವಿರುದ್ಧ ಗಲಾಟೆ ನಡೆಸಿದ್ದಾರೆ. ಪ್ರತಿಭಟನಾಕಾರರು ಸಮಾಜವಾದಿ ಪಕ್ಷದೊಂದಿಗೆ ನಂಟು ಹೊಂದಿದ್ದಾರೆ ಎಂದು ಆರೋಪ ಮಾಡಲಾಗಿದೆ.