ಮತಾಂಧ ಆರೋಪಿಯೊಂದಿಗೆ ಅವನ ಕುಟುಂಬದವರ ಮೇಲೆ ದೂರು ದಾಖಲು; ಆರೋಪಿಯ ಬಂಧನ !

ಪುಣೆ – ಇಲ್ಲಿ ಮಂಗಳವಾರ ಪೇಠೆಯ `ಯಾರಖಾನ ಕಾಂಪ್ಲೆಕ್ಸ’ನಲ್ಲಿ ವಾಸಿಸುತ್ತಿದ್ದ ಮೀರಾ ಚಿತ್ರಾವಾರ ಈ ಗರ್ಭಿಣಿ ಹಿಂದೂ ಮಹಿಳೆಯ ಮೇಲೆ ಮತಾಂಧರು ಆಕ್ರಮಣ ಮಾಡಿ ಆಕೆಯ ಹೊಟ್ಟೆಗೆ ಒದ್ದರು. ಇದರಿಂದ ಅವಳ ಹೊಟ್ಟೆಯಲ್ಲಿದ್ದ ಭ್ರೂಣ ಮರಣ ಹೊಂದಿತು. ಈ ಪ್ರಕರಣದಲ್ಲಿ ನವಾಜ ಖಾನನನ್ನು ಬಂಧಿಸಲಾಗಿದೆ. ಹಾಗೆಯೇ ರಫಿಯಾ ಖಾನ, ನಾಸಿರ ಖಾನ ಮತ್ತು ಸಲ್ಮಾನ ಉರ್ಫ ಟಿಪು ಶೇಖ ಈ ನಾಲ್ವರ ವಿರುದ್ಧ ಸಮರ್ಥ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಘಟನೆ ಎಪ್ರಿಲ್ 2 ರಂದು ನಡೆದಿದೆ. ರಾಜೂ ಚಿತ್ರಾವಾರ ಈ ಹಲ್ಲೆಯ ವಿರುದ್ಧ ದೂರು ದಾಖಲಿಸಿದ್ದಾರೆ.
ನವಾಜ ಖಾನನು ಮಾರ್ಚ 27 ರಂದು ರಾಜೂ ಇವರ ಮನೆಯ ಬಾಗಿಲಿಗೆ ಒದ್ದಿದ್ದನು. ಈ ಬಗ್ಗೆ ಪ್ರಶ್ನಿಸಲು ದೂರುದಾರ ರಾಜೂ, ಅವನ ಪತ್ನಿ ಮೀರಾ ಮತ್ತು ಗಣೇಶ ಕಾಂಬಳೆ ಹೋಗಿದ್ದರು. ಆಗ ನವಾಜ ಖಾನ ಮತ್ತು ಅವನ ಕುಟುಂಬದವರು ಅವರ ಮೇಲೆ ಹಲ್ಲೆ ಮಾಡಿದರು. ಸಲ್ಮಾನನು ರಾಜೂ ಚಿತ್ರಾವಾರ ಇವರಿಗೆ ಮೊಬೈಲ ಮೂಲಕ ಮಾತನಾಡಿ ‘ಪೊಲೀಸರಲ್ಲಿ ದೂರು ದಾಖಲಿಸಿದರೆ, ನಿನ್ನನ್ನು ಕೊಲ್ಲುತ್ತೇನೆ’ ಎಂದು ಬೆದರಿಕೆ ಹಾಕಿದ್ದನೆಂದು ದೂರಿನಲ್ಲಿ ದಾಖಲಿಸಲಾಗಿದೆ. ಗರ್ಭಿಣಿ ಅವಸ್ಥೆಯಲ್ಲಿ ಹೊಟ್ಟೆಗೆ ಒದ್ದಿದ್ದರಿಂದ ಮೀರಾಳನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಯಿತು. ಆದರೆ ಚಿಕಿತ್ಸೆಯ ಸಂದರ್ಭದಲ್ಲಿ ಅವಳ ಹೊಟ್ಟೆಯಲ್ಲಿದ್ದ ಭ್ರೂಣ ಸಾವನ್ನಪ್ಪಿತು. ತದನಂತರ ಆಕ್ರೋಶಗೊಂಡ ಸಂಬಂಧಿಕರು ಮತ್ತು ಹಿಂದುತ್ವನಿಷ್ಠ ಕಾರ್ಯಕರ್ತರು ಪೊಲೀಸ ಠಾಣೆಗೆ ಧಾವಿಸಿ ಆರೋಪಿಯ ಮೇಲೆ ದೂರು ದಾಖಲಿಸುವಂತೆ ಕೋರಿದರು.
ಭ್ರೂಣ ಸಾಯಬೇಕು ಎಂದು ಉದ್ಧಟತನದಿಂದ ಹಲ್ಲೆ !
ಮೀರಾ ಚಿತ್ರಾವಾರ ಗರ್ಭಿಣಿಯಾಗಿದ್ದಾರೆ ಎಂದು ತಿಳಿದಿದ್ದರೂ, ಅವರ ಹೊಟ್ಟೆಗೆ ಒದ್ದು ಹಲ್ಲೆ ಮಾಡಿದರು. ಅವಳ ಹೊಟ್ಟೆಯಲ್ಲಿದ್ದ ಭ್ರೂಣ ಸಾಯಬಾರದು ಎನ್ನುವ ಅರಿವು ಇರುವಾಗಲೂ ಆರೋಪಿಗಳು ಉದ್ದೇಶಪೂರ್ವಕವಾಗಿ ಥಳಿಸಿದರು ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಸಂಪಾದಕೀಯ ನಿಲುವುಹಿಂದೂ ಬಹುಸಂಖ್ಯಾತವಿರುವ ದೇಶದಲ್ಲಿ ಹೆಚ್ಚುತ್ತಿರುವ ಉದ್ಧಟತನವನ್ನು ಗಮನಿಸಿ ! ಉದ್ದೇಶಪೂರ್ವಕವಾಗಿ ಮಾಡಿದ ಹಲ್ಲೆಯ ಹಿಂದಿರುವ ಮತಾಂಧರ ದುರುದ್ದೇಶಪೂರಿತ ಮನಃಸ್ಥಿತಿಯು ಅಪಾಯದ ಕರೆಗಂಟೆಯಾಗಿದೆ ! ಈ ಮತಾಂಧರ ವಿರುದ್ಧ ಶಿಶುಹತ್ಯೆಯ ಅಪರಾಧವನ್ನು ದಾಖಲಿಸಿ ಅವರಿಗೆ ಕಠೋರ ಶಿಕ್ಷೆಯನ್ನು ನೀಡಬೇಕು ! |
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!