‘ಮದರಸಾ’ ಪದಕ್ಕೆ ಈಗ ಅಂತ್ಯ ಹಾಡಬೇಕು ! – ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ

‘ಮದರಸಾ’ ಎಂಬ ಪದಕ್ಕೆ ಈಗ ಅಂತ್ಯ ಹಾಡಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಎಲ್ಲ ಶಾಲೆಗಳಲ್ಲಿ ಸಾಮಾನ್ಯ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದೂ ಕೂಡ ಅವರು ಹೇಳಿದರು.

ಜ್ಞಾನವಾಪಿ ಮಸೀದಿಯ ಸಂಪೂರ್ಣ ಸಮೀಕ್ಷೆ ಮೆ ೧೭ ಮೊದಲು ಪೂರ್ಣಗೊಳಿಸಿ !

ಜ್ಞಾನವಾಪಿ ಮಸೀದಿ ಮತ್ತು ಶೃಂಗಾರಗೌರಿ ಮಂದಿರ ಇದರ ಸಮೀಕ್ಷೆ ಮತ್ತು ಚಿತ್ರೀಕರಣವು ಬರುವ ಮೆ ೧೭ ರ ಮೊದಲು ಪೂರ್ಣ ಮಾಡುವುದು ಮತ್ತು ಅದರ ವರದಿ ಸಲ್ಲಿಸಿ, ಎಂದು ಇಲ್ಲಿಯ ದಿವಾಣಿ ನ್ಯಾಯಾಲಯ ಮೆ ೧೨ ರಂದು ನಡೆದಿರುವ ವಿಚಾರಣೆಯಲ್ಲಿ ಆದೇಶ ನೀಡಲಾಗಿದೆ.

ಮತಾಂತರ ವಿರೋಧಿ ಮಸೂದೆಗೆ ಕರ್ನಾಟಕ ಮಂತ್ರಿಮಂಡಳದಲ್ಲಿ ಅನುಮೊದನೆ

ಕರ್ನಾಟಕದ ಭಾಜಪ ಸರಕಾರದ ಮಂತ್ರಿಮಂಡಳವು ಮತಾಂತರವಿರೋಧಿ ಮಸೂದೆಯನ್ನು ಅನುಮೋದಿಸಿದೆ. ಈಗ ಈ ಮಸೂದೆ ವಿಧಾನ ಸಭೆಯಲ್ಲಿ ಮಂಡಿಸಲಾಗುವುದು. ಅಲ್ಲಿ ಅಂಗಿಕರಿಸಿದ ನಂತರ ಅದು ಕಾನೂನಾಗಿ ಜಾರಿಗೆ ಬರುತ್ತದೆ; ಆದರೆ ಅಲ್ಲಿಯವರೆಗೆ ಮಸೂದೆ ಸುಗ್ರೀವಾಜ್ಞೆಯಾಗಿ ಜಾರಿಗೆ ಬರಲಿದೆ.

ಅಯೋಧ್ಯೆಯಲ್ಲಿನ ಮಠ-ಮಂದಿರಗಳು ತೆರಿಗೆ ಮುಕ್ತ !

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ತೆಗೆದುಕೊಂಡಿರುವ ಮುಂದಾಳತ್ವದಿಂದ ಅಯೋಧ್ಯೆಯಲ್ಲಿನ ಮಠ-ಮಂದಿರಗಳು ತೆರಿಗೆ ಮುಕ್ತವಾಗಿ ಮಾಡಲಾಗಿದೆ. ಅಯೋಧ್ಯೆ ನಗರಪಾಲಿಕೆಯಿಂದ ಈ ನಿಟ್ಟಿನಲ್ಲಿ ಮಸೂದೆ ಸಮ್ಮತಿಸಲಾಗಿದೆ.

ಮಸೀದಿಗಳ ಮೇಲಿನ ಧ್ವನಿವರ್ಧಕಗಳ ವಿಷಯವಾಗಿ ನ್ಯಾಯಾಲಯದ ಆದೇಶದ ಕಾರ್ಯಾಚರಣೆ ನಡೆಸಲಾಗುವುದು ! – ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ

ಮಸೀದಿಗಳ ಮೇಲಿನ ಧ್ವನಿವರ್ಧಕಗಳಿಂದ ನೀಡಲಾಗುವ ಅಜಾನಿನ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಕೆಲವು ಆದೇಶಗಳಿದ್ದು ಅದು ಎಲ್ಲರಿಗೂ ಅನ್ವಯವಾಗುತ್ತದೆ. ಅವುಗಳ ಕಾರ್ಯಾಚರಣೆಯನ್ನು ಸೌಹಾರ್ದಪೂರ್ಣ ವಾತಾವರಣದಲ್ಲಿ ಮಾಡಬೇಕು.

ಉತ್ತರಪ್ರದೇಶದಲ್ಲಿ ಧಾರ್ಮಿಕ ಸ್ಥಳಗಳ ಮೇಲಿರುವ ೧೧ ಸಾವಿರ ಧ್ವನಿವರ್ಧಕಗಳು ತೆರವು !

ಉತ್ತರಪ್ರದೇಶದ ಧಾರ್ಮಿಕ ಸ್ಥಳಗಳ ಮೇಲೆ ಇರುವ ೧೧ ಸಾವಿರ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಯಿತು. ಹಾಗೂ ೩೫ ಸಾವಿರ ಧಾರ್ಮಿಕ ಸ್ಥಳಗಳ ಮೇಲೆ ಧ್ವನಿವರ್ಧಕದ ಧ್ವನಿಯ ಮಾಪನ ನಿಶ್ಚಯಿಸಿಕೊಡಲಾಗಿದೆ. ಕಳೆದ ೪ ದಿನಗಳಿಂದ ಪೊಲೀಸರು ಈ ಕ್ರಮ ಕೈಗೊಳ್ಳುತ್ತಿದ್ದಾರೆ.

ಚಾರಧಾಮ ಯಾತ್ರೆಯಲ್ಲಿ ಸಹಭಾಗಿಯಾಗುವ ಪ್ರತಿಯೊಬ್ಬರ ತಪಾಸಣೆಯಾಗಲಿದೆ !

ರಾಜ್ಯದ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿಯವರು ಚಾರಧಾಮದ ಯಾತ್ರೆಯನ್ನು ಕೈಗೊಳ್ಳುವ ಪ್ರತಿಯೊಬ್ಬ ಯಾತ್ರಿಕರ ತಪಾಸಣೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ‘ಈ ಯಾತ್ರೆಗಾಗಿ ಬರುವ ಪ್ರತಿಯೊಬ್ಬರ ಮೇಲೆ ತೀವೃ ನಿಗಾ ಇಡಲಾಗುವುದು’ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

ಗೋವಾದಲ್ಲಿ ಪೋರ್ಚುಗೀಸರು ನಾಶ ಮಾಡಿದ ಹಿಂದು ದೇವಾಲಯಗಳನ್ನು ಶೋಧನೆಯ ಪ್ರಕ್ರಿಯೆ ಪ್ರಾರಂಭ

ಹಳೆಗೂಡಿಕೆ ಹಾಗೂ ಪುರಾತತ್ವ ನಿರ್ದೇಶನಾಲಯವು ಪೊರ್ಚುಗೀಸರು ಗೋವಾದಲ್ಲಿ ತಮ್ಮ ಕ್ರೂರ ಅಧಿಕಾರಾವಧಿಯಲ್ಲಿ ನಾಶ ಮಾಡಿದ ಹಿಂದೂಗಳ ದೇವಾಲಯಗಳನ್ನು ಶೋಧನೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ವಾರಣಾಸಿಯಲ್ಲಿ ಆಜಾನ್ ಸಮಯದಲ್ಲಿ ಧ್ವನಿವರ್ಧಕದಿಂದ ಹನುಮಾನ್ ಚಾಲೀಸಾ ಪ್ರಸಾರ

‘ಶ್ರೀಕಾಶಿ ವಿಶ್ವನಾಥ್ ಜ್ಞಾನವಾಪಿ ಮುಕ್ತಿ ಆಂದೋಲನ’ ಸಂಘಟನೆಯು ಧ್ವನಿವರ್ಧಕದಿಂದ ಹನುಮಾನ್ ಚಾಲೀಸಾವನ್ನು ಪ್ರಸಾರ ಮಾಡಲು ಪ್ರಾರಂಭಿಸಿದೆ. ಮಸೀದಿಯಿಂದ ಆಜಾನ್ ಆರಂಭವಾದ ಕೂಡಲೇ ಹನುಮಾನ್ ಚಾಲೀಸಾ ಪಠಿಸಲಾಗುತ್ತಿದೆ.

ಹಿಂದೂ ರಾಷ್ಟ್ರದ ಸ್ಥಾಪನೆಯೇ ನನ್ನ ಎಕೈಕ ಲಕ್ಷ್ಯ ! – ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಹ

ನಾನು ಸಾವಿಗೆ ಹೆದರುವುದಿಲ್ಲ. ನನ್ನ ಏಕೈಕ ಲಕ್ಷ್ಯವೆಂದರೆ ‘ಹಿಂದೂ ರಾಷ್ಟ್ರ’ ಎಂದು ಇಲ್ಲಿನ ಗೋಶಾಮಹಲ ವಿಧಾನಸಭಾ ಕ್ಷೇತ್ರದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕರಾದ ಟಿ. ರಾಜಾ ಸಿಂಹರವರು ಶ್ರೀರಾಮನವಮಿಯ ದಿನ ಪ್ರತಿಪಾದಿಸಿದ್ದಾರೆ.