ಜ್ಞಾನವಾಪಿಯ ಖಟ್ಲೆಯು ಮುಂದುವರಿಯಲಿದೆ!

ಜ್ಞಾನವಾಪಿ ಮತ್ತು ಶೃಂಗಾರ ಗೌರಿ ಇಲ್ಲಿ ಪೂಜೆಯನ್ನು ನಡೆಸುವ ಅರ್ಜಿಯ ಬಗ್ಗೆ ಮುಸಲ್ಮಾನ ಪಕ್ಷವು ಆಕ್ಷೇಪವೆತ್ತಿದ ನಂತರ ಈ ಖಟ್ಲೆಯನ್ನು ನಡೆಸಬೇಕೋ ಬೇಡವೋ ಎಂಬ ಬಗ್ಗೆ ಜಿಲ್ಲಾ ನ್ಯಾಯಾಲಯವು ನಿರ್ಣಯ ನೀಡಿದೆ. ೧೨ ಸೆಪ್ಟೆಂಬರ ನಂದು ‘ಈ ಖಟ್ಲೆಯು ಮುಂದುವರಿಕೆಗೆ ಯೋಗ್ಯವಾಗಿದೆ’ ಎಂಬ ಆದೇಶವನ್ನು ನ್ಯಾಯಾಲಯವು ನೀಡಿದೆ.

ಯತಿ ನರಸಿಂಹಾನಂದರಿಂದ ಡಿಸೆಂಬರ ತಿಂಗಳಲ್ಲಿ ಧರ್ಮಸಂಸತ್ತಿನ ಆಯೋಜನೆ

ಇದರಲ್ಲಿ ಸಾಧು-ಸಂತರು ಭಾಗವಹಿಸುವರು. ಇದೇ ವರ್ಷ ಹರಿದ್ವಾರದಲ್ಲಿ ಅವರು ಆಯೋಜಿಸಿದ ಧರ್ಮಸಂಸತ್ತಿನಲ್ಲಿ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದರೆಂದು ಅಪರಾಧವನ್ನು ದಾಖಲಿಸಲಾಗಿತ್ತು.

ಉಡುಪಿ ನಗರಸಭೆಯ ಜಿಲ್ಲಾ ನ್ಯಾಯಾಲಯದ ಹತ್ತಿರದ ವೃತ್ತಕ್ಕೆ ‘ವೀರ ಸಾವರ್ಕರ’ರ ಹೆಸರು ನೀಡುವ ಪ್ರಸ್ತಾವಕ್ಕೆ ಅನುಮೋದನೆ !

ಇಲ್ಲಿಯ ಜಿಲ್ಲಾ ನ್ಯಾಯಾಲಯದ ಹತ್ತಿರ ಇರುವ ವೃತ್ತಕ್ಕೆ ‘ವೀರ ಸಾವರ್ಕರ ವೃತ್ತ’ ಎಂಬ ಹೆಸರು ನೀಡುಲು ಸ್ಥಳೀಯ ಶಾಸಕ ರಘುಪತಿ ಭಟ್ ಇವರು ನಗರಸಭೆಗೆ ಬೇಡಿಕೆ ಸಲ್ಲಿಸಿದ್ದರು. ಅದರ ಪ್ರಕಾರ ಪಾಲಿಕೆಯು ಈ ವೃತ್ತಕ್ಕೆ ‘ವೀರ ಸಾವರ್ಕರ’ ಅವರ ಹೆಸರು ನೀಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ.

ಹಿಂದೂದ್ವೇಷಿ ಮುನ್ನವರ ಫಾರೂಕಿಯ ಕಾರ್ಯಕ್ರಮಕ್ಕೆ ದೆಹಲಿ ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದಾರೆ !

ರಾಷ್ಟ್ರೀಯ ರಾಜಧಾನಿಯಲ್ಲಿ ನಡೆಯಲಿದ್ದ ಹಿಂದೂದ್ವೇಷಿ ಹಾಸ್ಯ ಕಲಾವಿದ ಮುನ್ನವರ ಫಾರೂಕಿಯ ‘ಡೊಂಗರೀ ಟೂ ನೋವ್ಹೇರ’ ಎಂಬ ವಿಶೇಷ ಹಾಸ್ಯ ಕಾರ್ಯಕ್ರಮಕ್ಕೆ ಕಾನೂನು ಹಾಗೂ ಸುವ್ಯವಸ್ಥೆಯ ಕಾರಣವನ್ನು ನೀಡಿ ದೆಹಲಿ ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದಾರೆ. ಕಾರ್ಯಕ್ರಮವನ್ನು ಆಯೋಜಿಸಿದರೆ ಅದನ್ನು ವಿರೋಧಿಸುವುದಾಗಿ ವಿಶ್ವ ಹಿಂದೂ ಪರಿಷತ್ತು ಎಚ್ಚರಿಕೆ ನೀಡಿತ್ತು.

ಸೇಲಂ (ತಮಿಳುನಾಡು) ನಗರದಲ್ಲಿ ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನದ ಜಾಗದಿಂದ ಅತಿಕ್ರಮಣ ತೆರವುಗೊಳಿಸಿ ! – ಮದ್ರಾಸ್ ಉಚ್ಚ ನ್ಯಾಯಾಲಯ

ಸಾಲೆಮ ಇಲ್ಲಿಯ ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನದ ಭೂಮಿಯ ಮೇಲೆನ ಅತಿಕ್ರಮಣ ತೆರವುಗೊಳಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯವು ತಹಸಿನದಾರರಿಗೆ ಆದೇಶ ನೀಡಿದೆ. ಸಾಲೆಮದಲ್ಲಿ ಕಣ್ಣನಕುರಿಚಿಯಲ್ಲಿ ಎ ರಾಧಾಕೃಷ್ಣನ ದೇವಸ್ಥಾನದ ಸಂಪತ್ತಿಯ ಮೇಲೆ ಅತಿಕ್ರಮಣದ ವಿರುದ್ಧ ಅರ್ಜಿ ದಾಖಲಿಸಲಾಗಿತ್ತು.

ಹಿಂದೂಗಳ ವಿರೋಧದ ನಂತರ ಸತ್ಯನಾರಾಯಣ ಕೀ ಕಥ ಚಲನಚಿತ್ರದ ಹೆಸರು ಸತ್ಯಪ್ರೇಮ ಕೀ ಕಥಾ ಎಂದು ಬದಲಾಯಿಸಲಾಗಿದೆ !

ದೆಹಲಿ – ಹಿಂದೂಗಳ ವಿರೋಧದ ನಂತರ ಕಾರ್ತಿಕ ಆರ್ಯನ ಮತ್ತು ಕಿಯಾರಾ ಅಡ್ವಾಣಿ ಇವರು ನಟಿಸಿರುವ ಸತ್ಯನಾರಾಯಣ ಕೀ ಕಥಾ ಎಂಬ ಚಲನಚಿತ್ರದ ಹೆಸರನ್ನು ಬದಲಾಯಿಸಿ ಸತ್ಯಪ್ರೇಮ ಕೀ ಕಥಾ, ಎಂದು ಇಡಲಾಗಿದೆ. ಸಾಜಿದ ನಾಡಿಯಾದವಾಲಾ ನಿರ್ಮಿಸಿರುವ ಚಲನಚಿತ್ರದ ‘ಸತ್ಯನಾರಾಯಣ ಕೀ ಕಥಾ’ ಎಂಬ ಹೆಸರಿನ ಪೋಸ್ಟರ್ ಪ್ರಸಾರ ಮಾಡಲಾಗಿತ್ತು. ಅದರ ನಂತರ ಅನೇಕ ಹಿಂದೂ ಸಂಘಟನೆಗಳಿಂದ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಇದರ ನಂತರ ತಕ್ಷಣ ನಿರ್ದೇಶಕರಾಗಿರುವ ಸಮೀರ್ ವಿದ್ವಾಂಸ ‘ಚಲನಚಿತ್ರದ ಹೆಸರು ಜನರ ಭಾವನೆಗಳಿಗೆ … Read more

ಕರ್ನಾಟಕದ ಮಠಗಳು ಮತ್ತು ದೇವಸ್ಥಾನಗಳಿಗೆ ಭಾಜಪ ಸರಕಾರದಿಂದ ೧೪೨ ಕೋಟಿ ರೂಪಾಯಿಗಳ ಅನುದಾನ ಘೋಷಣೆ !

ಈ ನಿರ್ಧಾರಕ್ಕೆ ಬಸವರಾಜ ಬೊಮ್ಮಾಯಿ ಸರಕಾರಕ್ಕೆ ಅಭಿನಂದನೆಗಳು ! ಇನ್ನು ಭಾಜಪದ ಆಡಳಿತವಿರುವ ಇತರ ರಾಜ್ಯಗಳೂ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು !

ಕಾಶಿ ಯಾತ್ರೆ ಮಾಡಲು ಇಚ್ಚಿಸುವ ಪ್ರತಿಯೊಬ್ಬರಿಗೆ ೫ ಸಾವಿರ ರೂಪಾಯಿ ನೀಡಲಿರುವ ರಾಜ್ಯ ಸರಕಾರ !

ಭಾಜಪದ ರಾಜ್ಯ ಸರಕಾರ ‘ಕಾಶಿ ಯಾತ್ರೆ’ ಎಂಬ ಯೋಜನೆಗೆ ಸ್ವೀಕೃತಿ ನೀಡಿದೆ. ಇದರಡಿಯಲ್ಲಿ ಕಾಶಿಯ ಕಾಶಿ ವಿಶ್ವನಾಥ ದೇವಸ್ಥಾನ ನೋಡಲು ಇಚ್ಚಿಸುವ ೩೦ ಸಾವಿರ ಭಕ್ತರಿಗೆ ತಲಾ ೫ ಸಾವಿರ ರೂಪಾಯಿ ಅನುದಾನ ನೀಡಲಾಗುವುದು. ಅದಕ್ಕಾಗಿ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ೭ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ.

ಪಾವಾಗಡ (ಗುಜರಾತ) ಇಲ್ಲಿಯ ಶ್ರೀ ಕಾಳಿಕಾ ಮಾತಾ ದೇವಸ್ಥಾನದ ಉದ್ಘಾಟನೆ ಪ್ರಧಾನಿ ಮೋದಿಯವರ ಹಸ್ತದಿಂದ ೫೦೦ ವರ್ಷಗಳ ನಂತರ ದೇವಸ್ಥಾನದ ಮೇಲೆ ಧ್ವಜ ಹಾರಾಡಿತು

ಮುಸಲ್ಮಾನ ಆಕ್ರಮಣಕಾರಿಗಳಿಂದ ಇಲ್ಲಿಯ ದೇವಸ್ಥಾನದ ಸ್ಥಳದಲ್ಲಿ ಮಸೀದಿ ಕಟ್ಟಲಾಗಿತ್ತು.

ಉತ್ತರಪ್ರದೇಶದಲ್ಲಿ ಮೊದಲ ಬಾರಿಗೆ ಈದ್ ದಿನದಂದು ರಸ್ತೆಗಳಲ್ಲಿ ನಮಾಜ್ ಆಗಲಿಲ್ಲ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ರಾಜ್ಯದಲ್ಲಿ ಮೊದಲ ಬಾರಿಗೆ ಈದ್ ಮತ್ತು ‘ಅಲ್ವಿದಾ ಜುಮಾ’ (ರಂಜಾನನ ಕೊನೆಯ ದಿನ) ದಂದು ರಸ್ತೆಗಳಲ್ಲಿ ನಮಾಜ್ ಆಗಲಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾಹಿತಿ ನೀಡಿದರು.