ಮಲಗುವ ಪದ್ಧತಿ

ಸಾಧ್ಯವಿದ್ದರೆ ಪೂರ್ವ ಅಥವಾ ದಕ್ಷಿಣಕ್ಕೆ ತಲೆ ಇಟ್ಟು ಮಲಗಬೇಕು. ‘ಪಶ್ಚಿಮ ಅಥವಾ ಉತ್ತರಕ್ಕೆ ತಲೆಯಿಟ್ಟು ಮಲಗಿದರೆ ಆಯುಷ್ಯ ಕಡಿಮೆಯಾಗುತ್ತದೆ, ಎಂದು ವಿಷ್ಣು ಹಾಗೂ ವಾಮನ ಪುರಾಣಗಳಲ್ಲಿ ಹೇಳಲಾಗಿದೆ. ಮಲಗುವಾಗ ಅತೀ ಹೆಚ್ಚು ಗಾಳಿಯನ್ನು ಸೇವಿಸಬಾರದು; ಏಕೆಂದರೆ ಹಾಗೆ ಮಾಡಿದರೆ ಶರೀರ ಒಣಗುತ್ತದೆ. ಚರ್ಮದ ಆರೋಗ್ಯ ಕೆಡುತ್ತದೆ ಹಾಗೂ ಸಂಧುಗಳಲ್ಲಿ ಘರ್ಷಣೆಯಾಗುತ್ತದೆ.

ಭಾರತೀಯ ಸಂಸ್ಕೃತಿಯಂತೆ ಜನವರಿ ಒಂದಲ್ಲ ಯುಗಾದಿಯೇ ಹೊಸ ವರ್ಷ !

ಜನವರಿ ೧ ರಂದು ವರ್ಷಾರಂಭವನ್ನು ಏಕೆ ಮಾಡಬೇಕು ಎನ್ನುವುದಕ್ಕೆ ಯಾವ ಕಾರಣವೂ ಇಲ್ಲ. ತದ್ವಿರುದ್ಧ ಚೈತ್ರ ಶುಕ್ಲ ಪಾಡ್ಯದಂದು ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸ ವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ ತುಂಬಿರುತ್ತದೆ.

ದಮೋಹ (ಮಧ್ಯಪ್ರದೇಶ) ಗೋವುಗಳ ಕಳ್ಳಸಾಗಣೆಯನ್ನು ತಡೆಯಲು ಪ್ರಯತ್ನಿಸಿದ ಹಿಂದೂ ಯುವಕನ ಹತ್ಯೆಗೈದ ಮತಾಂಧರು !

ಕೆಲವು ಜನರು ಇಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿರುವಾಗ, ಇಬ್ಬರು ಯುವಕರು ತಡೆಯಲು ಪ್ರಯತ್ನಿಸಿದರು. ಆ ಸಮಯದಲ್ಲಿ ಕಟುಕರು ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದರು. ಇದರಲ್ಲಿ ಅಜಯ ಮುಡಾ ಎಂಬ ಯುವ ಶಿಕ್ಷಕನು ಮೃತಪಟ್ಟನು.

ಕರ್ನಾಟಕದ ವಿಧಾನ ಪರಿಷತ್ತಿನ ಉಪಸಭಾಪತಿ ಧರ್ಮೆ ಗೌಡ ಆತ್ಮಹತ್ಯೆ

ರಾಜ್ಯದ ವಿಧಾನ ಪರಿಷತ್ತಿನ ಉಪಸಭಾಪತಿ ಹಾಗೂ ಜನತಾದಳ(ಜಾತ್ಯತೀತ) ಪಕ್ಷದ ನಾಯಕ ಎಸ್.ಎಲ್. ಧರ್ಮೆ ಗೌಡ ಇವರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೃತದೇಹವು ಹಳಿಯ ಮೇಲೆ ಪತ್ತೆಯಾಗಿದೆ. ಜೊತೆಗೆ ಅವರ ಬಳಿ ಮೃತ್ಯುಪತ್ರವೂ ಲಭ್ಯವಾಗಿದೆ.

‘ಅಮೆಜಾನ್’ನ ಆನ್‌ಲೈನ್ ಪುಸ್ತಕದಂಗಡಿ ‘ಕಿಂಡಲ್’ ನಲ್ಲಿ ಲಭ್ಯವಿರುವ ಪುಸ್ತಕಗಳ ಮೂಲಕ ‘ಲವ್ ಜಿಹಾದ್’ಗೆ ಉತ್ತೇಜನೆ !

ಅಮೆಜಾನ್’ ಈ ಆನ್‌ಲೈನ್ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಯ ‘ಕಿಂಡಲ್’ ಈ ‘ಆನ್‌ಲೈನ್’ ಪುಸ್ತಕದ ಕೇಂದ್ರದಲ್ಲಿ ಮುಸ್ಲಿಂ ಪುರುಷರ ಮತ್ತು ಹಿಂದೂ ಮಹಿಳೆಯರ ನಡುವಿನ ಸಂಬಂಧದ ಬಗ್ಗೆ ಅಶ್ಲೀಲ ಬರಹವಿರುವ ಹಲವಾರು ಪುಸ್ತಕಗಳು ಮಾರಾಟಕ್ಕಿವೆ ಎಂದು ‘ಸ್ವರಾಜ್ಯಮ್ಯಾಗ ಡಾಟ್ ಕಾಮ್’ ಈ ಸುದ್ದಿ ಜಾಲತಾಣವು ಮಾಹಿತಿ ನೀಡಿದೆ.

ಮಧ್ಯಪ್ರದೇಶದ ಉಜ್ಜೈನಿಯ ನಂತರ ಇಂದೂರ್‌ನಲ್ಲಿಯೂ ಶ್ರೀರಾಮಮಂದಿರಕ್ಕಾಗಿ ಅರ್ಪಣೆಯನ್ನು ಸಂಗ್ರಹಿಸಲು ನಡೆಸಲಾದ ಮೆರವಣಿಯ ಮೇಲೆ ಮತಾಂಧರಿಂದ ಕಲ್ಲುತೂರಾಟ : ೧೨ ಕ್ಕೂ ಹೆಚ್ಚು ಜನರಿಗೆ ಗಾಯ

ಕೆಲವು ದಿನಗಳ ಹಿಂದೆ ರಾಜ್ಯದ ಉಜ್ಜೈನಿಯಲ್ಲಿ ಅಯೋಧ್ಯೆಯ ಶ್ರೀರಾಮಮಂದಿರಕ್ಕಾಗಿ ನಿಧಿಯನ್ನು ಸಂಗ್ರಹಿಸಲು ನಡೆಸಲಾದ ಮೆರವಣಿಯ ಮೇಲೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಮತಾಂಧರು ಕಲ್ಲುತೂರಾಟ ಮಾಡಿರುವ ಘಟನೆ ನಡೆದಿತ್ತು.

ಗಾಝಿಯಾಬಾದಿನಲ್ಲಿ ನಡುರಸ್ತೆಯಲ್ಲಿ ಯುವಕನ ಮೇಲೆ ದಾಳಿ ಮಾಡಿ ಹತ್ಯೆ

ಇಲ್ಲಿ ನಡು ರಸ್ತೆಯಲ್ಲಿ ೨ ವ್ಯಕ್ತಿಗಳು ಯುವಕನ ಹತ್ಯೆ ಮಾಡಿದರು. ಈ ಸಮಯದಲ್ಲಿ ಜನರು ಹತ್ಯೆಯನ್ನು ತಡೆಯುವ ಬದಲು ಒಬ್ಬರು ಅದರ ಚಿತ್ರೀಕರಣ ಮಾಡಿದರು ಮತ್ತು ಅದರ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದರು. ಯುವಕನ ಮೇಲೆ ದಾಳಿಯಾದ ನಂತರ ಆತ ಗಾಯಗೊಂಡಿರುವ ಸ್ಥೀತಿಯಲ್ಲಿರುವಾಗಲೂ ಆತನನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಲಿಲ್ಲ. ಅಜಯ ಎಂದು ಆ ಯುವಕನ ಹೆಸರು ಇದೆ.

ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿ ಮಾರಾಟ ಮಾಡುತ್ತಿದ್ದ ಮದರಸಾದ ಮೌಲ್ವಿಯ ಬಂಧನ

೧೬ ವರ್ಷದ ಬಾಲಕಿಯ ಅಪಹರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ೪೫ ವರ್ಷದ ಮದರಸಾ ಶಿಕ್ಷಕ ಮೌಲಾನಾ ನೌಶಾದ ಎಂಬವನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಮಾರಾಟ ಮಾಡಲು ತಯಾರಿ ನಡೆಸುತ್ತಿದ್ದಾಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಮೇಲೆ ಉತ್ತರ ಪ್ರದೇಶದ ಹರದೊಯಿಯ ಹಲವಾರು ಬಾಲಕಿಯರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ೧೦ ಕ್ಕೂ ಹೆಚ್ಚು ಆರೋಪಗಳು ಇದೆ.

ಆಂಧ್ರಪ್ರದೇಶದ ಶ್ರೀಶೈಲಂ ದೇವಾಲಯದ ಮೇಲೆ ಮತಾಂಧರು ಹಿಡಿತ ಸಾಧಿಸಿದ್ದಾರೆ ! – ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರ ಆರೋಪ

ಆಂಧ್ರಪ್ರದೇಶದ ಶ್ರೀಶೈಲಂ ದೇವಾಲಯದ ಮೇಲೆ ಮತಾಂಧರು ಹಿಡಿತ ಸಾಧಿಸಿದ್ದಾರೆ ಎಂದು ಗೋಶಾಮಹಲ್ ಕ್ಷೇತ್ರದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಹೇಳಿದ್ದಾರೆ. ಅವರು ‘ಡೆಕ್ಕನ್ ಕ್ರಾನಿಕಲ್’ನ ವರದಿಯ ಬಗ್ಗೆ ಮಾತನಾಡುತ್ತ, ದೇವಾಲಯದ ಸುತ್ತಮುತ್ತಲಿನ ಎಲ್ಲಾ ಅಂಗಡಿಗಳಲ್ಲಿ ಮುಸ್ಲಿಮರ ಏಕಸ್ವಾಮ್ಯತೆ ಸಾಧಿಸಲಾಗಿದೆ. ಇಲ್ಲಿನ ಗೋಶಾಲೆಯ ಹಸುಗಳನ್ನು ಗೋಮಾಂಸಕ್ಕಾಗಿ ಕೊಲ್ಲಲಾಗುತ್ತಿದೆ.

ಚೀನಾದ ಪ್ರಯಾಣಿಕರನ್ನು ಭಾರತಕ್ಕೆ ಕರೆತರಬಾರದು ! – ಭಾರತ ಸರಕಾರದಿಂದ ವಿಮಾನ ಸಂಸ್ಥೆಗಳಿಗೆ ಆದೇಶ

‘ಚೀನಾದ ಪ್ರಯಾಣಿಕರನ್ನು ಭಾರತಕ್ಕೆ ಕರೆತರಬಾರದು’ ಎಂದು ಭಾರತ ಸರಕಾರ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಅನಧಿಕೃತ ಸೂಚನೆಗಳನ್ನು ನೀಡಿದೆ. ಭಾರತೀಯ ಪ್ರಯಾಣಿಕರ ಬಗ್ಗೆ ನವೆಂಬರ್‌ನಲ್ಲಿ ಚೀನಾ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದು, ಭಾರತವು ಅದಕ್ಕೆ ಪ್ರತ್ಯುತ್ತರ ನೀಡಿದೆ.