ಗುಜರಾತ್‌ನಲ್ಲಿ ಆಯುರ್ವೇದ ಚಿಕಿತ್ಸೆಯ ನಂತರ ಒಂದೂವರೆ ಸಾವಿರಕ್ಕೂ ಹೆಚ್ಚು ರೋಗಿಗಳು ಕೊರೋನಾದಿಂದ ಮುಕ್ತ !

ಕೊರೋನಾದ ಮೇಲಿನ ಲಸಿಕೆ ಜಗತ್ತಿನಲ್ಲಿ ಎಲ್ಲಿಯೂ ಲಭ್ಯವಿಲ್ಲದ ಕಾರಣ ರೋಗಿಗಳ ಮೇಲೆ ಪರಿಣಾಮಕಾರಿ ಚಿಕಿತ್ಸೆಗೆ ಇನ್ನೂ ಮಿತಿಗಳಿವೆ. ಆದ್ದರಿಂದ ಭಾರತದ ಗುಜರಾತ ಸರಕಾರವು ಕೊರೋನಾ ರೋಗಿಗಳಿಗೆ ಆಯುರ್ವೇದದ ಚಿಕಿತ್ಸೆ ನೀಡುತ್ತಿದೆ. ಗುಜರಾತ ಸರಕಾರ ಮೇ ೧೫ ರಿಂದ ಇಂತಹ ರೋಗಿಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಆಯುರ್ವೇದ ಚಿಕಿತ್ಸೆ ನೀಡಲು ಅನುಮತಿ ನೀಡಿದ ಮೇಲೆ ಉತ್ತಮ ಪರಿಣಾಮ ಕಂಡುಬರುತ್ತಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ.

ಬಿಸಿನೀರಿಗೆ ಉಪ್ಪು ಸೇರಿಸಿ ಬಾಯಿ ಮುಕ್ಕುಳಿಸಿದರೆ ಕೊರೋನದ ಅಪಾಯ ಕಡಿಮೆಯಾಗುತ್ತದೆ ! – ಬ್ರಿಟನ್‌ನಲ್ಲಿನ ಸಂಶೋಧನೆಯ ನಿಷ್ಕರ್ಷ

ಈ ವಿಜ್ಞಾನಿಗಳು ಕೊರೋನಾ ಪೀಡಿತ ೧೨ ರೋಗಿಗಳ ಮೇಲೆ ೧೨ ದಿನಗಳ ಕಾಲ ಈ ಪ್ರಯೋಗವನ್ನು ಮಾಡಿದರು. ಈ ರೋಗಿಗಳಿಗೆ ೧೨ ದಿನಗಳ ಕಾಲ ಬಿಸಿ ನೀರಿನಲ್ಲಿ ಉಪ್ಪು ಹಾಕಿ ಬಾಯಿ ಮುಕ್ಕಳಿಸಲು ಹೇಳಲಾಗಿತ್ತು. ೧೨ ದಿನಗಳ ನಂತರ ಅವರ ಮೂಗಿನ ದ್ರವದ ಮಾದರಿಗಳನ್ನು ತೆಗೆದುಕೊಂಡಾಗ ಅದರಲ್ಲಿ ಕರೋನಾ ಸೋಂಕಿನ ಲಕ್ಷಣಗಳು ತೀರಾ ಕಡಿಮೆ ಎಂದು ಕಂಡುಬಂದಿದೆ.

ಕಾಶ್ಮೀರದಲ್ಲಿ ನುಸುಳುಸುತ್ತಿದ್ದ ೧೩ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಮೆಂಢರ್ ಸೆಕ್ಟರ್‌ನ ನಿಯಂತ್ರಣ ರೇಖೆ ಬಳಿ ಸೈನಿಕರು ನುಸುಳುತ್ತಿದ್ದ ೧೩ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ, ಎಂದು ‘ಅಮರ್ ಉಜಲಾ’ ದಿನಪತ್ರಿಕೆ ವರದಿ ಮಾಡಿದೆ. ಮೆಂಢರ ಸೆಕ್ಟರಿನ ಗಡಿಯಾಚೆಗಿನ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿಖಿಯಾಲ್ ಪ್ರದೇಶದಲ್ಲಿ ಭಯೋತ್ಪಾದಕರ ೩ ‘ಲಾಂಚಿಂಗ್ ಪ್ಯಾಡ್’(ತರಬೇತಿ ಪಡೆದ ಭಯೋತ್ಪಾದಕರನ್ನು ನುಸುಳಲು ಗಡಿಯ ಹತ್ತಿರ ತಾಣದಲ್ಲಿ ಒಟ್ಟಿಗೆ ಸೇರಿಸುತ್ತಾರೆ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಾಧನೆಯಿಂದ ದೇವರು ಬೇಕೆಂದು ಅನಿಸಲಾರಂಭಿಸಿದರೆ ಪೃಥ್ವಿಯ ಮೇಲಿನ ಏನಾದರೂ ಬೇಕು ಎಂದು ಅನಿಸುವುದಿಲ್ಲ. ಇದರಿಂದ ಯಾರ ಬಗ್ಗೆಯೂ ಅಸೂಯೆ, ಮತ್ಸರ ಅಥವಾ ದ್ವೇಷವೆನಿಸುವುದಿಲ್ಲ, ಹಾಗೆಯೇ ಇತರರೊಂದಿಗೆ ವೈಮನಸ್ಸು, ಜಗಳ ಯಾವುದು ಆಗುವುದಿಲ್ಲ.

ಟಿಕ್-ಟಾಕ್ ನಿಷೇಧಿಸಿರಿ !

ಕೆಟ್ಟ ಚಟಗಳ ವಿಡಿಯೋ ತಯಾರಿಸಲು ಬುದ್ಧಿ ಬೇಕಾಗುವುದಿಲ್ಲ, ಆದರೆ ಉತ್ಕೃಷ್ಟ ಕಾರ್ಯವನ್ನು ಮಾಡಿ ತೋರಿಸಲು ಸಾಮರ್ಥ್ಯ ಬೇಕಾಗುತ್ತದೆ. ಅದೇ ನಿಜವಾದ ಪುರಷಾರ್ಥವಾಗಿರುತ್ತದೆ. ಪುಕ್ಕಟೆ ಪ್ರಚಾರಕ್ಕೆ ಹಪಹಪಿಸುತ್ತಿರುವ ‘ಟಿಕ್-ಟಾಕ್ನವರು ಇದನ್ನು ಗಮನಿಸಬೇಕು.

ಭಾವೀ ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸಿದ್ಧತೆ ಮಾಡುವ ಬಗ್ಗೆ ಅಖಿಲ ಮನುಕುಲಕ್ಕೆ ಮಾರ್ಗದರ್ಶನ ಮಾಡುವ ಏಕೈಕರೆಂದರೆ ಪರಾತ್ಪರ ಗುರು ಡಾ. ಆಠವಲೆ !

ಮುಂಬರುವ ಆಪತ್ಕಾಲದ ಬಗ್ಗೆ ಸಂಬಂಧಿಕರಿಗೆ ಮತ್ತು ಮಿತ್ರರಿಗೆ ಹೇಳುವುದು, ಪ್ರಸ್ತುತ ಬರವಣಿಗೆಯನ್ನು ಕಾರ್ಯಾಲಯದ ಸಹೋದ್ಯೋಗಿಗಳಿಗೆ ಓದಲು ಕೊಡುವುದು ಮುಂತಾದ ಹಂತಗಳಲ್ಲಿ ಜನಜಾಗೃತಿ ಮಾಡುವುದು ಆವಶ್ಯಕವಿದೆ. ಹೀಗೆ ಮಾಡುವುದು ಎಂದರೆ ಸಮಾಜ ಋಣವನ್ನು ತೀರಿಸುವುದಾಗಿದೆ. ಹೀಗೆ ಮಾಡುವವರಿಂದ ಸಾಧನೆಯೂ ಆಗಲಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಹಿಂದೂಗಳೇ, ನಿದ್ರೆಯಲ್ಲಿರುವ ಹಿಂದೂಗಳಿಂದಲೇ ಇಡೀ ಜಗತ್ತಿನಲ್ಲಿ ಬಹುಸಂಖ್ಯೆಯಲ್ಲಿರುವ ಭಾರತದಲ್ಲಿಯೂ ಹಿಂದೂಗಳಿಗಾಗಿ ದುಃಖದಾಯಕ ವಾರ್ತೆಗಳು ಹೆಚ್ಚುತ್ತಿದೆ, ಅದರಿಂದ ನಿರಾಶರಾಗದೆ ಸಾಧನೆಯನ್ನು ಮಾಡುತ್ತಲೇ ಇರಿ. ೨೦೨೩ ರಲ್ಲಿ ಹಿಂದೂಗಳಿಗಾಗಿ ಕಾಲವು ಪೂರಕವಾಗಬಹುದು ಮತ್ತು ಅದು ೧೦೦೦ ವರ್ಷ ಪೂರಕವಾಗಿರುವುದು.

ಕೇಂದ್ರ ಸರ್ಕಾರದಿಂದ ‘WeTransfer’ ಮೇಲೆ ನಿಷೇಧ

ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ‘WeTransfer’ ಈ ‘ಫೈಲ್-ಶೇರಿಂಗ್’ ಜಾಲತಾಣವನ್ನು ನಿಷೇಧಿಸಿದೆ. ಇದರ ಹಿಂದಿನ ಕಾರಣವನ್ನು ಸ್ಪಷ್ಟಪಡಿಸದಿದ್ದರೂ, ಸಾರ್ವಜನಿಕ ಹಿತಾಸಕ್ತಿ ಮತ್ತು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನಿಷೇಧವನ್ನು ಹೇರಲಾಗಿದೆ ಎಂದು ಹೇಳಲಾಗುತ್ತಿದೆ. ಜಗತ್ತಿನಾದ್ಯಂತ ಲಕ್ಷಾಂತರ ಜನರು ಈ ಜಾಲತಾಣವನ್ನು ಬಳಸುತ್ತಾರೆ.

ಅಮೇರಿಕಾದಲ್ಲಿಯ ಹಿಂಸಾಚಾರದಿಂದಾಗಿ ೪೦ ನಗರಗಳಲ್ಲಿ ನಿಷೇಧಾಜ್ಞೆ

ಇಲ್ಲಿ ಪೊಲೀಸರ ಹಲ್ಲೆಯಿಂದ ಕಪ್ಪು ವರ್ಣೀಯ ವ್ಯಕ್ತಿಯೊಬ್ಬ ಮೃತಪಟ್ಟ ನಂತರ ಅಮೇರಿಕದಾದ್ಯಂತ ಹಿಂಸಾಚಾರ ಭುಗಿಲೆದ್ದಿತು. ಅಮೇರಿಕಾದ ಸುಮಾರು ೪೦ ನಗರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿವಾಸವಾದ ಶ್ವೇತಭವನದ ಹೊರಗೆ ಕೂಡ ಹೆಚ್ಚಿನ ಸಂಖ್ಯೆಯ ಜನರು ಹಿಂಸಾಚಾರಕ್ಕೆ ಪ್ರಯತ್ನಿಸಿದರು.

ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುವ ೬ ಕಳ್ಳಸಾಗಾಣಿಕೆದಾರರ ಬಂಧನ

ಭದ್ರತಾ ಪಡೆಗಳು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸಹಾಯ ಮಾಡುವವ ಆರು ಜನರನ್ನು ಬಂಧಿಸಿವೆ. ಅವರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಹೆರಾಯಿನ್ ಸಹ ವಶಪಡಿಸಿಕೊಳ್ಳಲಾಗಿದೆ. ಮುದಾಸ್ಸಿರ್ ಫಯಾಜ್, ಶಬೀರ್, ಸಾಗೀರ್ ಅಹ್ಮದ್ ಪೊಸವಾಲ್, ಇಸಾಕ್ ಭಟ್ಟ ಮತ್ತು ಅರ್ಷಿದ್ ಬಂಧಿತರು.