ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಿಸುಕಲಾಗುತ್ತದೆ ಎನ್ನುತ್ತಿದ್ದ ಅಮೇರಿಕಾದ ಆಯೋಗದ ಸದಸ್ಯರ ವೀಸಾ ನಿರಾಕರಿಸಿದ ಭಾರತ

ಭಾರತ ಸರ್ಕಾರವು ಧಾರ್ಮಿಕ ಸ್ವಾತಂತ್ರ್ಯದಂತಹ ವಿಷಯಗಳ ಬಗ್ಗೆ ಸಲಹೆ ನೀಡುವ ಅಮೇರಿಕಾದ ಸಂಸತ್ತಿನ ಖಾಸಗಿ ಸಂಸ್ಥೆಯಾದ ‘ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್‌ನ್ಯಾನಾಷನಲ್ ರಿಲಿಜಿಯಸ್ ಫ್ರೀಡಂ’ನ ಸದಸ್ಯರಿಗೆ ವೀಸಾ ನಿರಾಕರಿಸಿದೆ. ವಿದೇಶಾಂಗ ಸಚಿವ ಎಸ್. ಜಯಶಂಕರ ಇವರು ಜೂನ್ ೧ ರಂದು ಬಿಜೆಪಿ ಸಂಸದ ನಿಶಿಕಾಂತ ದುಬೆ ಅವರಿಗೆ ಬರೆದ ಪತ್ರದಲ್ಲಿ ಈ ಮಾಹಿತಿ ನೀಡಲಾಗಿದೆ.

ದೇವರ ಕೃಪೆಯಿಂದ ಟಾಂಜಾನಿಯಾ ದೇಶ ಕೊರೋನಾಮುಕ್ತವಾಯಿತು ! – ಟಾಂಜಾನಿಯಾ ರಾಷ್ಟ್ರಾಧ್ಯಕ್ಷರ ಘೋಷಣೆ

ದೇವರ ಕೃಪೆಯಿಂದ ಕರೋನಾ ವಿಷಾಣುವನ್ನು ಮುಗಿಸುವಲ್ಲಿ ದೇಶಕ್ಕೆ ಯಶಸ್ಸು ಸಿಕ್ಕಿದೆ, ಎಂದು ಆಫ್ರಿಕಾ ಖಂಡದ ದೇಶವಾದ ಟಾಂಜಾನಿಯಾದ ರಾಷ್ಟ್ರಾಧ್ಯಕ್ಷ ಜಾನ್ ಮಾಗುಫುಲಿ ಘೋಷಿಸಿದರು. ‘ಹಾಗಿದ್ದರೂ, ಜನರು ಜಾಗರೂಕರಾಗಿರಬೇಕು’, ಎಂದೂ ಅವರು ಸ್ಪಷ್ಟ ಪಡಿಸಿದರು.

ಕುವೈತ್ ಮತ್ತು ಸೌದಿ ಅರೇಬಿಯಾದಲ್ಲಿ ಮುಸಲ್ಮಾನರ ವಿರೋಧದಿಂದ ‘ಪಬ್‌ಜಿ’ಯು ಮೂರ್ತಿಪೂಜೆಯ ಪ್ರಸಂಗ ತೆಗೆಯಿತು !

ಕುವೈತ್ ಮತ್ತು ಸೌದಿ ಅರೇಬಿಯಾ ಈ ದೇಶಗಳಲ್ಲಿನ ಮುಸಲ್ಮಾನರು ಮತ್ತು ಅವರ ಧರ್ಮಗುರುಗಳ ವಿರೋಧದ ಹಿನ್ನೆಲೆಯಲ್ಲಿ, ‘ಆನ್‌ಲೈನ್ ಗೇಮಿಂಗ್ ಆಪ್’ ಆಗಿರುವ ಪಬ್‌ಜಿ ತನ್ನ ಹೊಸ ಆವೃತ್ತಿಯಲ್ಲಿದ್ದ ಮೂರ್ತಿಪೂಜೆಯ ಪ್ರಸಂಗವನ್ನು ತೆಗೆದುಹಾಕಿದೆ. ಮೂರ್ತಿಪೂಜೆಯು ಇಸ್ಲಾಂನ ವಿರುದ್ಧವಾಗಿದ್ದರಿಂದ ಅದಕ್ಕೆ ವಿರೋಧವಾಗಿತ್ತು.

ನಾವು ಗಿಡಮೂಲಿಕೆಯ ಔಷಧಿಯಿಂದ ಆಯುರ್ವೇದ ಲಸಿಕೆಯನ್ನು ತಯಾರಿಸುತ್ತಿದ್ದೇವೆ ! – ಯೋಗಋಷಿ ರಾಮದೇವ ಬಾಬಾ

ಪತಂಜಲಿಯವರಿಂದ ಕರೋನಾ ರೋಗಾಣುಗಳ ಮೇಲೆ ಗಿಡಮೂಲಿಕೆಯ ಔಷಧಿಯಿಂದ ಲಸಿಕೆಯನ್ನು ತಯಾರಿಸಲಾಗುತ್ತಿದೆ. ಅಶ್ವಗಂಧಾ ಮತ್ತು ಗಿಲೋಯ ಮೂಲಕ ಕರೋನಾ ರೋಗಾಣುವಿನ ಮೇಲೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು, ಎಂದು ಯೋಗಋಷಿ ರಾಮದೇವ ಬಾಬಾ ಹೇಳಿದ್ದಾರೆ.

ನಕ್ಸಲರಿಗೆ ಮದ್ದುಗುಂಡುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಪೊಲೀಸರ ಬಂಧನ

ನಕ್ಸಲರಿಗೆ ಮದ್ದು-ಗುಂಡಗಳನ್ನು ಸರಬರಾಜು ಮಾಡಿದ ಪ್ರಕರಣದಲ್ಲಿ ಛತ್ತೀಸಗಡ ಪೊಲೀಸರ ಅಧಿಕ್ಷಕ ಆನಂದ ಜಾಟವ್ ಮತ್ತು ಪೊಲೀಸ ಕಾನ್ಸಟೇಬಲ್ ಸುಭಾಷ್ ಸಿಂಗ್ ಇವರನ್ನು ಬಂಧಿಸಲಾಗಿದೆ. ಅವರೊಂದಿಗೆ ಮನೋಜ ಶರ್ಮಾ ಮತ್ತು ಹರಿಶಂಕರ ಇಬ್ಬರನ್ನೂ ಬಂಧಿಸಲಾಗಿದೆ. ಅವರು ಪೊಲೀಸರಿಂದ ಮದ್ದು-ಗುಂಡುಗಳನ್ನು ಖರೀದಿಸಲು ಬಂದಿದ್ದರು.

ಪಂಗೊಂಗ್ ಸರೋವರ ಪ್ರದೇಶದಲ್ಲಿನ ಪರಿಸ್ಥಿತಿ: ‘ಇದ್ದಂತೆಯೇ’ ಎದುರುಬದುರು ನಿಂತ ಎರಡೂ ದೇಶಗಳ ಸೈನಿಕರು

ಚೀನಾವು ಪೂರ್ವ ಲಡಾಕ್‌ನ ನಿಯಂತ್ರಣ ರೇಖೆ ಬಳಿ, ‘ಗಾಲವಾನ್ ವ್ಯಾಲಿ’, ‘ಪಿಪಿ -೧೫’ ಮತ್ತು ‘ಹಾಟ್ ಸ್ಪ್ರಿಂಗ್ಸ್’ ಹಾಗೂ ‘ಪಾಂಗೊಂಗ್ ಸರೋವರ’ ಈ ನಾಲ್ಕು ಪ್ರದೇಶಗಳಲ್ಲಿ ತನ್ನ ಸೈನ್ಯವನ್ನು ನಿಲ್ಲಿಸಿ ಉದ್ವಿಗ್ನತೆಯನ್ನು ಸೃಷ್ಟಿಸಿದೆ. ಭಾರತ ಕೂಡ ಅದಕ್ಕೆ ತಕ್ಕಂತೆ ತನ್ನ ಸೈನ್ಯವನ್ನು ನೇಮಿಸಿತು. ಈ ೪ ಸ್ಥಳಗಳ ಪೈಕಿ ೩ ಪ್ರದೇಶಗಳಿಂದ ಎರಡೂ ದೇಶಗಳು ತಮ್ಮತಮ್ಮ ಸೇನಾಪಡೆಗಳು ಸ್ವಲ್ಪ ಅಂತರದಲ್ಲಿ ಹಿಂದೆ ಸರಿದಿದೆ.

‘ಗೋಹತ್ಯೆಯನ್ನು ನಿಷೇಧಿಸಲು ಕಠಿಣ ಸುಗ್ರೀವಾಜ್ಞೆ ತಂದ ಉತ್ತರಪ್ರದೇಶದ ‘ಯೋಗಿ ಸರ್ಕಾರ’ಕ್ಕೆಅಭಿನಂದನೆಗಳು!

ಉತ್ತರಪ್ರದೇಶದ ‘ಯೋಗಿ ಸರ್ಕಾರ’ವು ಗೋಹತ್ಯೆಯನ್ನು ತಡೆಗಟ್ಟಲು ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಅದರಂತೆ ಗೋಹತ್ಯೆಯನ್ನು ಮಾಡುವವರಿಗೆ ೧೦ ವರ್ಷ ಶಿಕ್ಷೆ ಮತ್ತು ೫ ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಲಾಗುವುದು. ‘ಯೋಗಿ ಸರ್ಕಾರ’ ತೆಗೆದುಕೊಂಡ ಈ ನಿರ್ಧಾರ ಅತ್ಯಂತ ಶ್ಲಾಘನೀಯವಾಗಿದ್ದು ಹಿಂದೂ ಜನಜಾಗೃತಿ ಸಮಿತಿ ಅದನ್ನು ಸ್ವಾಗತಿಸುತ್ತದೆ !

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪಾಶ್ಚಾತ್ಯ ದೇಶವು ಮಾಯೆಯಲ್ಲಿ ಮುಂದೆ ಹೋಗಲು ಕಲಿಸಿದರೆ ಭಾರತವು ಈಶ್ವರಪ್ರಾಪ್ತಿಯ ಮಾರ್ಗದಲ್ಲಿ ಹೇಗೆ ನಡೆಯುವುದು ಎಂಬುದನ್ನು ಕಲಿಸುತ್ತದೆ

ಕೊರೋನಾದ ನಂತರ ಸವಾಲುಗಳು !

ಮೊದಲ ವರ್ಷದಲ್ಲಿ ಸರಕಾರ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿತು. ತಳಮಟ್ಟಕ್ಕೆ ಹೋಗಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಮಯ ಇದೀಗ ಬಂದಿದೆ. ಮುಂದಿನ ವರ್ಷಗಳಲ್ಲಿ ಆರ್ಥಿಕ ಬಿಕ್ಕಟ್ಟು ದೊಡ್ಡ ಸವಾಲಾಗಿದ್ದರೂ ಅದರ ಸರಣಿಯು ದೊಡ್ಡದಾಗಿದೆ.

ಕೊರೋನಾ ಸಂಕಟದ ನಂತರ ಮೂರನೇ ಮಹಾಯುದ್ಧ ಆರಂಭವಾಗುವುದರ ಬಗ್ಗೆ ೯ ಪ್ರಬಲ ಸಂಕೇತಗಳು !

ಅಮೇರಿಕಾ ಮತ್ತು ಯುರೋಪ್ ರಾಷ್ಟ್ರಗಳು ಕೂಡ ಚೀನಾದ ಈ ಕುಟಿಲ ನೀತಿಯನ್ನು ಗುರುತಿಸಿವೆ; ಆದರೆ ಅವು ಸದ್ಯ ಕೊರೋನಾದೊಂದಿಗೆ ಹೋರಾಡುವುದರಲ್ಲಿವೆ. ಆದ್ದರಿಂದ ಕೊರೋನಾದ ಸಂಕಟ ನಿವಾರಣೆಯಾದ ನಂತರ ಇಡೀ ಜಗತ್ತು ಚೀನಾದ ಮೇಲೆ ದಂಡೆತ್ತಿ ಹೋಗುವವು ಹಾಗೂ ಈ ಸಂಘರ್ಷವು ಮಹಾಯುದ್ಧದಲ್ಲಿ ಪರಿವರ್ತನೆಯಾಗುವುದನ್ನು ಯಾರೂ ತಡೆಯಲಾರರು.