ಕೊರೋನಾದಿಂದ ಪಾರಾಗಲು ಗೋಮೂತ್ರ ಸೇವಿಸಿ ! – ಭಾಜಪ ಶಾಸಕರ ಸಲಹೆ

‘ಕೊರೋನಾದಿಂದ ಪಾರಾಗಲು ಗೋಮೂತ್ರ ಸೇವಿಸಿ’, ಎಂದು ಪಶ್ಚಿಮ ಬಂಗಾಲದ ಭಾಜಪ ಶಾಸಕ ಹಾಗೂ ಬಂಗಾಲ ಪ್ರದೇಶಾಧ್ಯಕ್ಷ ದಿಲೀಪ ಘೋಷ ಇವರು ಸಲಹೆ ನೀಡಿದ್ದಾರೆ. ಈ ಬಗ್ಗೆ ಒಂದು ‘ವಿಡಿಯೋ’ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ಈ ‘ವಿಡಿಯೋ’ದಲ್ಲಿ ಶಾಸಕ ಘೋಷ ಇವರು ಒಂದು ಸಭೆಯಲ್ಲಿ ಆರೋಗ್ಯಕ್ಕಾಗಿ ಮನೆಮದ್ದಿನ ಬಗ್ಗೆ ತಿಳುವಳಿಕೆ ನೀಡುತ್ತಿರುವಂತೆ ಕಂಡುಬರುತ್ತಿದೆ.

ಗುಜರಾತ್‌ನಲ್ಲಿ ಸತತ ೪ ವರ್ಷ ಲೈಂಗಿಕ ಶೋಷಣೆಯನ್ನು ಮಾಡಿದ ಮದರಸಾದ ಮೌಲಾನಾನ ಬಂಧನ

ಇಲ್ಲಿಯ ನಖತರಾಣಾ ತಾಲೂಕಿನ ನಾರಾ ಗ್ರಾಮದಲ್ಲಿಯ ಮದರಸಾದ ಶಿಕ್ಷಕ ಮೌಲಾನಾ ಸಮದುದ್ದೀನ ಹಾಜಿ ಸುಲೆಮಾನ ಜಾಟ ಈತನು ಓರ್ವ ವಿದ್ಯಾರ್ಥಿನಿಯನ್ನು ಸತತ ೪ ವರ್ಷಗಳಿಂದ ಲೈಂಗಿಕ ಶೋಷಣೆಯನ್ನು ಮಾಡಿರುವ ಘಟನೆ ನಡೆದಿದೆ.

ತಿರುಪತಿ ಬಾಲಾಜಿ ದೇವಸ್ಥಾನದ ೧೪೦ ಸಿಬ್ಬಂದಿಗಳಿಗೆ ಕೊರೋನಾದ ಸೋಂಕು

ವಿಶ್ವವಿಖ್ಯಾತ ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನದ ಅರ್ಚಕರು ಹಾಗೂ ಸಿಬ್ಬಂದಿಗಳು ಹೀಗೆ ೧೪೦ ಜನರಿಗೆ ಕೊರೋನಾದ ಸೋಂಕು ತಗಲಿದೆ. ಆದರೂ ದೇವಸ್ಥಾನ ಬೋರ್ಡ್‌ನ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿಯವರು ‘ದೇವಸ್ಥಾನದಲ್ಲಿ ದರ್ಶನವನ್ನು ನಿಲ್ಲಿಸುವ ಯಾವುದೇ ವಿಚಾರ ಇಲ್ಲ’, ಎಂದು ಸ್ಪಷ್ಟಪಡಿಸಿದ್ದಾರೆ.

ಶೋಪಿಯಾನಲ್ಲಿ ೩ ಭಯೋತ್ಪಾದಕರ ಹತ್ಯೆ, ಪೂಂಛನಲ್ಲಿ ಪಾಕಿಸ್ತಾನದ ಗುಂಡು ಹಾರಾಟದಲ್ಲಿ ೩ ನಾಗರಿಕರ ಸಾವು

ಇಲ್ಲಿ ಜುಲೈ ೧೮ ರಂದು ಬೆಳಿಗ್ಗೆ ನಡೆದ ಚಕಮಕಿಯಲ್ಲಿ ಸೈನಿಕರು ೩ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ ಹಾಗೂ ಅವರಿಂದ ದೊಡ್ಡಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಜುಲೈ ೧೭ ರಂದು ರಾತ್ರಿ ಕಾಶ್ಮೀರದ ಪೂಂಛನಲ್ಲಿ ಪಾಕಿಸ್ತಾನದ ಸೈನಿಕರು ಮಾಡಿದ ಗುಂಡು ಹಾರಾಟದಲ್ಲಿ ಭಾರತದ ಮಹಮದ ರಫೀಕ್, ಆತನ ಪತ್ನಿ ರಾಫಿಯಾ ಬಿ ಹಾಗೂ ೧೫ ವರ್ಷದ ಮಗ ಇರಫಾನ್ ಈ ಮೂರು ಜನರ ಹತ್ಯೆಯಾಗಿದೆ.

ರೇಲ್ವೆಯಿಂದ ಚೀನಾದ ಕಂಪನಿಗೆ ನೀಡಿದ್ದ ೪೭೧ ಕೋಟಿ ರೂಪಾಯಿಯ ಗುತ್ತಿಗೆ ರದ್ದು

ಭಾರತೀಯ ರೇಲ್ವೆಯು ಸಿಗ್ನಲ್ ಹಾಗೂ ದೂರಸಂಪರ್ಕ ಈ ಕೆಲಸಕ್ಕಾಗಿ ‘ಬೀಜಿಂಗ್ ನ್ಯಾಶನಲ್ ರೇಲ್ವೆ ರೀಸರ್ಚ್ ಆಂಡ್ ಡಿಸೈನಿಂಗ್ ಇನ್‌ಸ್ಟಿಟ್ಯೂಟ್ ಆಫ್ ಸಿಗ್ನಲ್ ಆಂಡ್ ಕಮ್ಯುನಿಕೇಶನ್’ ಈ ಚೀನಾದ ಕಂಪನಿಗೆ ನೀಡಿದ್ದ ೪೭೧ ಕೋಟಿ ರೂಪಾಯಿಯ ಗುತ್ತಿಗೆಯನ್ನು ರದ್ದು ಪಡಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ೨೦ ವರ್ಷದ ಶಿಕ್ಷೆಯನ್ನು ಅನುಭವಿಸುತ್ತಿರುವ ೫೨ ವರ್ಷದ ಪಾದ್ರಿಯಿಂದ ಪೀಡಿತೆಯೊಂದಿಗೆ ಮದುವೆಯಾಗಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ

ಕೇರಳದ ೫೨ ವರ್ಷದ ಪಾದ್ರಿ ರಾಬಿನ್ ವಡಕ್ಕಮಚೆರಿಯನ್ನು ಓರ್ವ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಪ್ರಕರಣದಲ್ಲಿ ೨೦ ವರ್ಷದ ಜೈಲು ಶಿಕ್ಷೆಯನ್ನು ನೀಡಲಾಗಿದೆ. ಆತ ಇದರ ವಿರುದ್ಧ ಕೇರಳದ ಉಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿಯ ಮೂಲಕ ಪೀಡಿತೆಯೊಂದಿಗೆ ವಿವಾಹವಾಗಲು ಅನುಮತಿ ನೀಡಬೇಕು ಎಂದು ಕೋರಿದ್ದಾರೆ.

‘ಹಿಂದೂವಿರೋಧಿ ಬಾಲಿವುಡ್‌ನ ಬಟಾಬಯಲು’ ಎಂಬ ವಿಷಯದ ಬಗ್ಗೆ ಖ್ಯಾತ ವಕ್ತಾರರಿಂದ ಆನ್‌ಲೈನ್ ಸಂವಾದ!

ಕಳೆದ ಹಲವಾರು ವರ್ಷಗಳಿಂದ ಬಾಲಿವುಡ್‌ನ ವಿವಿಧ ಚಲನಚಿತ್ರಗಳು, ವೆಬ್‌ಸರೀಸ್, ಯೂಟ್ಯೂಬ್‌ಗಳ ಮೂಲಕ ಹಿಂದೂ ಧರ್ಮವನ್ನು ನಿರಂತರವಾಗಿ ಗುರಿಪಡಿಸಲಾಗಿದೆ. ಇಲ್ಲಿಯವರೆಗೆ, ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವ ನೂರಾರು ಚಲನಚಿತ್ರಗಳನ್ನು ಪ್ರದರ್ಶಿಸಲಾಗಿದೆ; ಆದರೆ ಇದುವರೆಗೆ ಯಾವುದಕ್ಕೂ ನಿಷೇಧವನ್ನು ಕೋರಿಲ್ಲ.

ಆಪತ್ಕಾಲದಿಂದ ಸುರಕ್ಷಿತವಾಗಿ ಪಾರಾಗಲು ಸಾಧನೆಯನ್ನು ಕಲಿಸುವ ಸನಾತನ ಸಂಸ್ಥೆ !

ಯಾರಾದರೊಬ್ಬರಲ್ಲಿ ಮೊದಲಿನಿಂದಲೇ ಕೊಳವೆಬಾವಿ ಇದೆ ಎಂದಾದಲ್ಲಿ ಅವರು ಕೊಳವೆಬಾವಿಗೆ ವಿದ್ಯುತ್ ಪಂಪ್ ಜೊತೆಗೆ ಸೌರಪಂಪ್ ಮತ್ತು ಕೈಪಂಪ್ ಸಹ ಹಾಕಿಸಬೇಕು ಹೊಸದಾಗಿ ಅಗೆದ ಕೊಳವೆಬಾವಿಗೆ ಅಗೆಯುವಾಗಲೇ ಈ ವ್ಯವಸ್ಥೆ ಮಾಡಿಕೊಳ್ಳಬೇಕು.

ಇಸ್ರೇಲ್ ಮತ್ತು ಭಾರತದ ನಡುವಿನ ವ್ಯತ್ಯಾಸ

ಸಮಾಜವಾದಿ ಮತ್ತು ಸಾಮ್ಯವಾದಿಗಳ ಮನಸ್ಸಿನಲ್ಲಿ ಭಾಜಪ ರಾಷ್ಟ್ರವಾದಿ ಪಕ್ಷವಾಗಿರುವುದರಿಂದ ಅದು ನಮ್ಮ ಅಸ್ತಿತ್ವಕ್ಕೆ ಅಪಾಯವಾಗಿದೆ, ಅದು ನಮ್ಮ ಪಕ್ಷವನ್ನು ನಾಶ ಮಾಡಬಹುದು, ಎನ್ನುವ ಭಯವಿದೆ. ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಮೋದಿಯವರ ಘೋಷಣೆಯಿಂದ ಕಾಂಗ್ರೆಸ್ಸಿನ ಜನರು ಭಾಜಪವನ್ನು ದ್ವೇಷದಿಂದ ನೋಡುತ್ತಾರೆ.

ಔದ್ಯೋಗಿಕರಣದ ಗಂಭೀರ ದುಷ್ಪರಿಣಾಮಗಳ ಮೇಲೆ ಪ್ರಾಚೀನ ಭಾರತೀಯ ಜೀವನಶೈಲಿಯೇ ಉಪಾಯವಾಗಿದೆ !

ಅಮೇರಿಕಾದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ. ಅವರು ಮಾಡಿರುವ ತಪ್ಪು ನಮ್ಮಿಂದ ಆಗಬಾರದು. ಅವರು ಜೀವನಶೈಲಿಯ ಗುಲಾಮರಾಗಿದ್ದರು; ಆದರೆ ನಾವು ಹಾಗಾಗಬಾರದು, ನಮ್ಮ ಅಖಂಡ ಸಂಸ್ಕೃತಿಯನ್ನು ಕಾಪಾಡುವ ಈ ಭಾರತದದಲ್ಲಿ ಮತ್ತು ಉಚ್ಚಭ್ರೂ ಅಮೇರಿಕಾದಲ್ಲಿ ವ್ಯತ್ಯಾಸವೇನು? ಈಗ ನಮಗೆ ಕೊರೋನಾ ಇರುವ ಜಗತ್ತಿನಲ್ಲಿ ಅದರ ಷರತ್ತಿನಲ್ಲಿ ವಾಸಿಸಬೇಕೆನ್ನುವ ಅರಿವು ಇರಬೇಕು.