ಕೊರೋನಾ ನಿಯಮಗಳನ್ನು ಪಾಲಿಸಲು ಮದುವೆಗಳನ್ನೇ ನಿಲ್ಲಿಸಿದ ಜಿಲ್ಲಾಧಿಕಾರಿಯಿಂದ ಕ್ಷಮೆಯಾಚನೆ

ರಾಜ್ಯದ ಪಶ್ಚಿಮ ತ್ರಿಪುರಾದ ಜಿಲ್ಲಾಧಿಕಾರಿ ಶೈಲೇಶ್ ಕುಮಾರ್ ಯಾದವ್ ಇವರು ವಿವಾಹ ಸ್ಥಳಕ್ಕೆ ತೆರಳಿ ಮದುವೆಯನ್ನು ನಿಲ್ಲಿಸಿದರು. ನಂತರ ಅವರು ಟೀಕೆಗೆ ಗುರಿಯಾದಾಗ ಕ್ಷಮೆಯಾಚಿಸಿದ್ದಾರೆ.

ಪೊಲೀಸರು ರಾತ್ರಿಯಿಡೀ ಆಮ್ಲಜನಕ ವಾಹನವನ್ನು ತಡೆ ಹಿಡಿದು ನಿಲ್ಲಿಸಿದುದೇ ಕೊರೋನಾ ರೋಗಿಯ ಮರಣವಾಗಿದೆ ಎಂದು ಹೇಳಿಕೆ.

ಪೊಲೀಸರು ಇಲ್ಲಿ ರಾತ್ರಿಯಿಡೀ ಆಮ್ಲಜನಕವನ್ನು ಸಾಗಿಸುವ ವಾಹನವನ್ನು ನಿಲ್ಲಿಸಿದ್ದರಿಂದ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ಆದರೆ ಪೊಲೀಸರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

ಬಾಗಲಕೋಟೆಯಲ್ಲಿ ಲಂಚ ಸಂಗ್ರಹದ ಪ್ರಕರಣದಲ್ಲಿ ಆರೋಗ್ಯಾಧಿಕಾರಿಯ ಬಂಧನ

ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಮಹಾಂತೇಶ ನಿಡಸನೂರ ಇವರನ್ನು ಲಂಚ ಸಂಗ್ರಹದ ಪ್ರಕರಣದಲ್ಲಿ ಬಂಧಿಸಲಾಗಿದೆ. ಇವರು ಜಿಲ್ಲೆಯಲ್ಲಿರುವ ಆರೋಗ್ಯ ಇಲಾಖೆಯ ವಿವಿಧ ಕಚೇರಿಗಳಿಂದ ಪರ್ಸೆಂಟೇಜ್ ಆಧಾರದಲ್ಲಿ ಲಂಚದ ಹಣ ಸಂಗ್ರಹಿಸುತ್ತಿದ್ದರು.

ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಬೆಲೆಬಾಳುವ ವಸ್ತುಗಳು ಕಳವು

ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿವೊಬ್ಬರಿಂದ ಬೆಲೆಬಾಳುವ ವಸ್ತುಗಳನ್ನು ಆಸ್ಪತ್ರೆಯಲ್ಲಿ ಕಳವು ಮಾಡಿರುವ ಆರೋಪ ಕೇಳಿಬಂದಿದೆ. ಅತ್ತಿಬೆಲೆಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಆಸ್ಪತ್ರೆಯಲ್ಲಿ ಮೂರು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದರು.

ಬೆಂಗಳೂರಿನ ಆಕ್ಸಫರ್ಡ್ ಆಸ್ಪತ್ರೆಯಲ್ಲಿ ಕೊರೋನಾ ಪೀಡಿತ ವ್ಯಕ್ತಿಯ ಮೃತದೇಹದ ಬಗ್ಗೆ ನಿರ್ಲಕ್ಷ್ಯ

ಕೊರೋನಾದಿಂದ​ಮೃತಪಟ್ಟ ವ್ಯಕ್ತಿಯ ಶವವನ್ನು ಆಸ್ಪತ್ರೆಯ ನೆಲದ ಮೇಲೆ ಹಾಗೆಯೆ ಬಿಟ್ಟು ನಿರ್ಲಕ್ಷ್ಯ ತೋರಿರುವ ಘಟನೆ ಇಲ್ಲಿನ ಅತ್ತಿಬೆಲೆ-ಯಡವನಹಳ್ಳಿ ಗೇಟ್​​ ಬಳಿ ಇರುವ ಆಕ್ಸ್​​​​​ಫರ್ಡ್​​​​ ಆಸ್ಪತ್ರೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

‘ಭಾರತದ ಪರಿಸ್ಥಿತಿ ಹದಗೆಟ್ಟಿರುವುದರಿಂದ ಜಗತ್ತು ಸಹಾಯ ಮಾಡಬೇಕು !’(ಅಂತೆ)

ಭಾರತವು ಪ್ರಸ್ತುತ ಕೊರೋನಾ ಸಾಂಕ್ರಾಮಿಕದ ಎರಡನೇ ಅಲೆಯನ್ನು ಎದುರಿಸುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಆಮ್ಲಜನಕ, ಹಾಸಿಗೆಗಳು, ವೆಂಟಿಲೇಟರ್ ಇತ್ಯಾದಿಗಳ ಕೊರತೆಯನ್ನು ಎದುರಿಸುತ್ತಿದೆ.

ಯಾದಗಿರಿಯಲ್ಲಿ ಹಾಸಿಗೆ ಇಲ್ಲದ ಕಾರಣ ಕೊರೋನಾ ಪೀಡಿತನನ್ನು ದಾಖಲಿಸಲು ನಕಾರ!

ಇಲ್ಲಿಯ ಭೀಮೇಶ ಎಂಬ ಹೆಸರಿನ ಕೊರೋನಾ ಪೀಡಿತ ರೋಗಿಗೆ ಹಾಸಿಗೆ ಇಲ್ಲ ಎಂದು ಹೇಳಿ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲು ನಿರಾಕರಿಸಲಾಯಿತು. ‘ಭೀಮೇಶನಿಗೆ ಏನೂ ಆಗಿಲ್ಲ’ ಎಂದು ವೈದ್ಯರು ವಾಪಾಸು ಕಳಿಸಲು ನೋಡಿದರು.

ಕರ್ನಾಟಕದ ದೇವಾಲಯದ ಸಿಬ್ಬಂದಿಯಿಂದಲೇ ಅರ್ಪಣೆ ಪೆಟ್ಟಿಗೆಯಿಂದ ಹಣ ಕಳ್ಳತನ

ಇಲ್ಲಿನ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿರುವ ಜಗದ್ಗುರು ಶ್ರೀ ಮೌನೇಶ್ವರ ದೇವಾಲಯದ ದೇವರ ಹುಂಡಿಯಿಂದ ದೇವಸ್ಥಾನದ ಸಿಬ್ಬಂದಿಗಳೇ ಹಣವನ್ನು ದೋಚುತ್ತಿದ್ದಾರೆ.

ಹಿಂದೂಗಳ ಯಾತ್ರೆಗಳ ಮೇಲಿನ ತೆರಿಗೆಯನ್ನು ತಪ್ಪಿಸಲು ಹಿಂದೂ ರಾಷ್ಟ್ರ ಅಗತ್ಯ ! – ಶ್ರೀ ನೀಲಮಣಿದಾಸ ಮಹಾರಾಜರು

ಸತ್ಸಂಗದ ಮೂಲಕ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡುವುದು ಅವಶ್ಯಕವಾಗಿದೆ. ಎಲ್ಲರಿಗೂ ಧರ್ಮ ಶಿಕ್ಷಣವನ್ನು ನೀಡುವ ಮೂಲಕ ಹಿಂದೂ ರಾಷ್ಟಕ್ಕಾಗಿ ಒಂದು ಪ್ರಸ್ತಾಪವನ್ನು ಸಿದ್ಧಪಡಿಸಿ ಪ್ರತಿ ಗ್ರಾಮ ಪಂಚಾಯಿತಿಗಳ ಮೂಲಕ ಠರಾವನ್ನು ಸಮ್ಮತಿಸಿ ಅದನ್ನು ಸರಕಾರಕ್ಕೆ ಕಳುಹಿಸಬೇಕು.

ಅತಿಕ್ರಮಣಕ್ಕೊಳಗಾದ ಕೊಟ್ಯಂತರ ಮೌಲ್ಯದ ದೇವಸ್ಥಾನಗಳ ಜಮೀನುಗಳ ರಕ್ಷಣೆ ಮಾಡಿ !

ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ 36 ಸಾವಿರ ದೇವಸ್ಥಾನಗಳ ಬಳಿ ಸರಿ ಸುಮಾರು 10 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಜಮೀನುಗಳು ಇದೆ. ಆದರೆ ಅಧಿಕಾರಿಗಳ ನಿರ್ಲಕ್ಷ, ಬೇಜವಾಬ್ದಾರಿ, ಹಣದಾಸೆಯಿಂದ ಮತ್ತು ಪ್ರಭಾವಿಗಳ ಕುತಂತ್ರದಿಂದ ಕೊಟ್ಯಂತರ ಮೌಲ್ಯದ ದೇವಸ್ಥಾನದ ಜಮೀನು ಖಾಸಗಿಯವರ ಪಾಲಾಗುತ್ತಿದೆ.