ಕೇದಾರನಾಥ (ಉತ್ತರಾಖಂಡ) – ಇಲ್ಲಿಯ ಕೇದಾರನಾಥ ದೇವಸ್ಥಾನದಲ್ಲಿ ಭಕ್ತರ ದಟ್ಟಣೆ ಹೆಚ್ಚುತ್ತಿರುವುದರಿಂದ ಸಾಮಾನ್ಯ ಭಕ್ತರಿಗೆ ದೇವಸ್ಥಾನದ ಗರ್ಭಗುಡಿಗೆ ಪ್ರವೇಶ ನಿಲ್ಲಿಸಲಾಗಿದೆ; ಆದರೆ ಅತಿ ಗಣ್ಯ ವ್ಯಕ್ತಿಗಳಿಗೆ ಗರ್ಭಗುಡಿಗೆ ಪ್ರವೇಶ ನೀಡಲಾಗುತ್ತಿದೆ. ಈ ನಿರ್ಬಂಧ ಪರಂಪರೆಯ ವಿರೋಧದಲ್ಲಿ ಇರುವುದೆಂದು ಚಾರದಾಮ ಮಹಾಪಂಚಾಯತಿಯ ಉಪಾಧ್ಯಕ್ಷ ಮತ್ತು ಕೇದಾರನಾಥ ತೀರ್ಥಕ್ಷೇತ್ರದ ಪುರೋಹಿತರಾದ ಶ್ರೀ ಸಂತೋಶ ತ್ರಿವೇದಿ ಇವರು ಆರೋಪಿಸಿದ್ದಾರೆ.
केदारनाथ धाम के गर्भ गृह में VIP की एंट्री पर तीर्थ पुरोहितो ने जताई आपत्ति #KedarnathDham #ViP https://t.co/yw990pStGQ
— TV9 Bharatvarsh (@TV9Bharatvarsh) October 5, 2023
ಪಿತೃ ಪಕ್ಷದ ಕಾಲಾವಧಿಯಲ್ಲಿ ಕೇದಾರನಾಥ ದೇವಸ್ಥಾನದಲ್ಲಿ ಪೂಜೆ ಮಾಡುವುದರ ವಿಶೇಷ ಮಹತ್ವವಿದೆ. ಅದಕ್ಕಾಗಿ ದೂರ ದೂರದಿಂದ ಜನರು ಇಲ್ಲಿ ಬರುತ್ತಾರೆ. ದೇವಸ್ಥಾನದ ಗರ್ಭಗುಡಿಗೆ ಪ್ರವೇಶ ನಿಲ್ಲಿಸಿರುವುದರ ವಿರುದ್ಧ ಸಂಪೂರ್ಣ ತೀರ್ಥಕ್ಷೇತ್ರದ ಪುರೋಹಿತ ವರ್ಗ ಒಟ್ಟಾಗಿದ್ದಾರೆ ಎಂದು ಶ್ರೀ. ಸಂತೋಷ ತ್ರಿವೇದಿ ಇವರು ಹೇಳಿದರು.
ಸಂಪಾದಕೀಯ ನಿಲಿವುಭಕ್ತರಿಗೆ ಯಾವುದೇ ಭೇದಭಾವ ಇಲ್ಲದೆ ದೇವರ ದರ್ಶನ ಆಗುವುದು ಆವಶ್ಯಕವಾಗಿರುತ್ತದೆ, ಇದನ್ನು ಆಯೋಜಕರು ಗಮನದಲ್ಲಿಟ್ಟುಕೊಳ್ಳಬೇಕು ! |