ಇಂದೋರ್ (ಮಧ್ಯಪ್ರದೇಶ) – ಇತ್ತೀಚೆಗೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೋರ್ ವಿಭಾಗೀಯ ಪೀಠವು ಧಾರ್‌ನ ಭೋಜಶಾಲಾದಲ್ಲಿ ನಡೆಯುತ್ತಿರುವ ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷೆ ಕುರಿತು ಆಲಿಕೆ ನಡೆಸಿದೆ. ಈ ಬಗ್ಗೆ ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯ ಅರ್ಜಿಯನ್ನು ಸ್ವೀಕರಿಸಿರುವ ಉಚ್ಚ ನ್ಯಾಯಾಲಯವು ಸಮೀಕ್ಷೆಯ ಗಡುವನ್ನು 2 ತಿಂಗಳ ಕಾಲ ವಿಸ್ತರಿಸಿದ್ದು, ಸಮೀಕ್ಷೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಅರ್ಜಿಯನ್ನು ತಳ್ಳಿಹಾಕಿದೆ.
ಜುಲೈ 4ರೊಳಗೆ ಭೋಜಶಾಲೆ ಸಮೀಕ್ಷೆಯ ಅಂತಿಮ ವರದಿಯನ್ನು ಸಲ್ಲಿಸುವಂತೆ ಪುರಾತತ್ವ ಇಲಾಖೆಗೆ ನ್ಯಾಯಾಲಯ ಸೂಚಿಸಿದೆ. ಈ ವರದಿಯನ್ನು ಉಚ್ಚ ನ್ಯಾಯಾಲಯದ ಇಂದೋರ್ ವಿಭಾಗೀಯ ಪೀಠಕ್ಕೆ ಸಲ್ಲಿಸಬೇಕಾಗುತ್ತದೆ.
ಸಮೀಕ್ಷೆ ನಿಲ್ಲಿಸುವಂತೆ ಸಲ್ಲಿಸಿದ್ದ ಅರ್ಜಿ ವಜಾ
ಭೋಜಶಾಲಾ ಸಮೀಕ್ಷೆಯನ್ನು ನಿಲ್ಲಿಸುವಂತೆ ಕೋರಿದ್ದ ಮುಸಲ್ಮಾನ ಪಕ್ಷದ ಮನವಿಯನ್ನು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೋರ್ ನ ವಿಭಾಗೀಯ ಪೀಠವು ವಜಾಗೊಳಿಸಿದೆ. ವಿಭಾಗೀಯ ಪೀಠವು ಮುಸಲ್ಮಾನರಿಗೆ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಲು ಹೇಳಿದೆ.
Indore High Court extends #Bhojshala survey report submission date by 2 months.
The High Court responds after an application filed by the #ASI
The Court rejected the plea objecting the survey submitted by the Mu$|!m party#ReclaimTemples pic.twitter.com/cSop44mMrZ
— Sanatan Prabhat (@SanatanPrabhat) April 30, 2024