ಪಾಕಿಸ್ತಾನದ ಸೈನ್ಯದ ಕಾರ್ಯಾಚರಣೆಯಲ್ಲಿ ತಹರೀಕ-ಎ-ತಾಲಿಬಾನಿನ ೩೩ ಭಯೋತ್ಪಾದರು ಮೃತ

ಇಸ್ಲಾಮಾಬಾದ (ಪಾಕಿಸ್ತಾನ) – ತಹರೀಕ-ಎ-ತಾಲಿಬಾನ ಎಂಬ ಭಯೋತ್ಪಾದಕ ಸಂಘಟನೆಯು ಪಾಕಿಸ್ತಾನದ ಗಡಿಯಲ್ಲಿರುವ ಬನ್ನೂ ಜಿಲ್ಲೆಯಲ್ಲಿರುವ ‘ಕಾವುಂಟರ ಟೆರರಿಝಮ ಸೆಂಟರ’ನ ಮೇಲೆ ಆಕ್ರಮಣ ಮಾಡಿ ಸೈನಿಕರನ್ನು ವಶಕ್ಕೆ ಪಡೆದಿತ್ತು. ಅವರ ಬಿಡುಗಡೆಗಾಗಿ ಪಾಕಿಸ್ತಾನದ ಸೈನ್ಯವು ನಡೆಸಿರುವ ಕಾರ್ಯಾಚರಣೆಯಲ್ಲಿ ಟಿಟಿಪಿಯ ೩೩ ಭಯೋತ್ಪಾದಕರು ಮೃತರಾಗಿದ್ದಾರೆ. ಇದರಲ್ಲಿ ಪಾಕಿಸ್ತಾನ ಸೈನ್ಯದ ಇಬ್ಬರು ಕಮಾಂಡೋಗಳೂ ಮೃತರಾಗಿದ್ದಾರೆ.

ಟಿಟಿಪಿಯು ೩ ದಿನಗಳಿಂದ ಪಾಕಿಸ್ತಾನದ ಒಬ್ಬ ಮೇಜರ ಹಾಗೂ ೪ ಸೈನಿಕರನ್ನು ಬಂಧನದಲ್ಲಿ ಇಟ್ಟಿತ್ತು. ಈ ಸೈನಿಕರ ಬಿಡುಗಡೆಗಾಗಿ ಪಾಕಿಸ್ತಾನವು ೧೬ ಮೌಲ್ವಿಗಳ ಒಂದು ಗುಂಪನ್ನು ಚರ್ಚೆಗಾಗಿ ಅಫಘಾನಿಸ್ತಾನದಲ್ಲಿ ಕಳುಹಿಸಿತ್ತು. ಅಫಘಾನಿಸ್ತಾನದಲ್ಲಿ ಅಧಿಕಾರದಲ್ಲಿರುವ ತಾಲಿಬಾನ ಸರಕಾರವು ಟಿಟಿಪಿಯ ಭಯೋತ್ಪಾದಕರನ್ನು ಶರಣಾಗುವಂತೆ ಮಾಡುವುದು ಎಂಬುದು ಅವರ ಉದ್ದೇಶವಾಗಿತ್ತು. ಆದರೆ ಈ ಪ್ರಯತ್ನವು ವಿಫಲವಾಗಿದ್ದರಿಂದ ಪಾಕಿಸ್ತಾನದ ಸೈನ್ಯವು ಈ ಕಾರ್ಯಾಚರಣೆಯನ್ನು ಮಾಡಿದೆ.