ಅಯೋಧ್ಯೆಯಲ್ಲಿನ ಮಠ-ಮಂದಿರಗಳು ತೆರಿಗೆ ಮುಕ್ತ !

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ಣಯ !

ಅಯೋಧ್ಯೆ (ಉತ್ತರ ಪ್ರದೇಶ) – ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ತೆಗೆದುಕೊಂಡಿರುವ ಮುಂದಾಳತ್ವದಿಂದ ಅಯೋಧ್ಯೆಯಲ್ಲಿನ ಮಠ-ಮಂದಿರಗಳು ತೆರಿಗೆ ಮುಕ್ತವಾಗಿ ಮಾಡಲಾಗಿದೆ. ಅಯೋಧ್ಯೆ ನಗರಪಾಲಿಕೆಯಿಂದ ಈ ನಿಟ್ಟಿನಲ್ಲಿ ಮಸೂದೆ ಸಮ್ಮತಿಸಲಾಗಿದೆ. ವ್ಯವಸಾಯಕ್ಕಾಗಿ ಉಪಯೋಗಿಸದಿರುವ ಎಲ್ಲಾ ಮಠ, ಮಂದಿರಗಳು ಮತ್ತು ಆಶ್ರಮ ತೆರಿಗೆ ಮುಕ್ತ ಮಾಡಲಾಗಿದೆ. ಮಂದಿರದ ಬಾಕಿ ಇರುವ ತೆರೆಗೆ ಮನ್ನಾ ಮಾಡಲಾಗಿದೆ. ಕೆಲವು ದಿನಗಳ ಮೊದಲೇ ಆಯೋಧ್ಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಸಂದರ್ಭದಲ್ಲಿ ಘೋಷಣೆ ಮಾಡಿದರು.

ಸಂಪಾದಕೀಯ ನಿಲುವು

ಯೋಗಿ ಆದಿತ್ಯನಾಥ್ ಇವರಿಗೆ ಅಭಿನಂದನೆ ! ಈಗ ಎಲ್ಲಾ ಭಾಜಪ ಆಡಳಿತವಿರುವ ರಾಜ್ಯಗಳಲ್ಲಿ ಅವರ ರಾಜ್ಯದಲ್ಲಿನ ದೇವಸ್ಥಾನಗಳ ಮೇಲೆ ಹೇರಲಾಗಿರುವ ಎಲ್ಲ ರೀತಿಯ ತೆರಿಗೆ ರದ್ದುಪಡಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !