ಕ್ರೈಸ್ತ ಧರ್ಮ ಪ್ರಚಾರಕ ಪಾಲ್ ದಿನಕರನ್ ಇವರ ಸಂಪತ್ತಿಗಳ ಮೇಲೆ ದಾಳಿ, ೧೨೦ ಕೋಟಿ ರೂ. ಗಿಂತಲೂ ಹೆಚ್ಚಿನ ಬೇನಾಮಿ ಆಸ್ತಿ ಜಪ್ತಿ !

ಆದಾಯ ತೆರಿಗೆ ಇಲಾಖೆಯಿಂದ ೨೮ ಕಡೆಗಳಲ್ಲಿ ದಾಳಿ

  • ಕ್ರೈಸ್ತ ಧರ್ಮಪ್ರಸಾರಕರ ಬಳಿ ಇಷ್ಟು ಹಣ ಎಲ್ಲಿಂದ ಬಂತು, ಇದನ್ನು ಹುಡುಕಿ ಅದರ ಮಾಹಿತಿಯನ್ನು ಭಾರತೀಯರಿಗೆ ನೀಡಬೇಕು.
  • ಹಿಂದೂ ಸಂತರ ಆಶ್ರಮಗಳ ಬಗ್ಗೆ, ಅವರ ಕಾರ್ಯದ ಬಗ್ಗೆ ಟೀಕೆಯನ್ನು ಮಾಡುವಾಗ ಲೆಕ್ಕಾಚಾರ ಕೇಳುವವರು ಯಾವತ್ತಾದರೂ ಚರ್ಚ್, ಮಸೀದಿ ಇವುಗಳಿಗೆ ಹಣ ಎಲ್ಲಿಂದ ಸಿಗುತ್ತದೆ? ಎಂಬುದರ ಮಾಹಿತಿಯನ್ನು ಕೇಳುವುದಿಲ್ಲ, ಇದನ್ನು ಗಮನದಲ್ಲಿಡಿ!
  • ಇಂತಹ ಭ್ರಷ್ಟಾಚಾರಿಗಳ ಸಂಪತ್ತು ಜಪ್ತಿ ಮಾಡಿ, ಸಮಾಜದಲ್ಲಿ ಅವರ ಮಾನ ಮಾರ್ಯಾದೆ ಹರಾಜಾಗುವಂತೆ ಪೊಲೀಸರು ಮತ್ತು ಆಡಳಿತ ಪ್ರಯತ್ನಿಸಬೇಕು!
ಕ್ರೈಸ್ತ ಧರ್ಮಪ್ರಸಾರಕ ಪಾಲ್ ದಿನಕರನ್

ಚೆನೈ (ತಮಿಳುನಾಡು) – ರಾಜ್ಯದ ಪ್ರಮುಖ ಕ್ರೈಸ್ತ ಧರ್ಮಪ್ರಸಾರಕ ಪಾಲ್ ದಿನಕರನ್ ಇವರ ನಿವಾಸಸ್ಥಾನ ಹಾಗೂ ಕಾರ್ಯಾಲಯಗಳ ಸಹಿತ ಒಟ್ಟು ೨೮ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿ ೧೨೦ ಕೋಟಿ ರೂಪಾಯಿಗಳ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಿದೆ. ಇದರಲ್ಲಿ ನಾಲ್ಕುವರೆ ಕಿಲೋ ತೂಕದ ಚಿನ್ನವೂ ಒಳಗೊಂಡಿದೆ. ಇಸ್ರೈಲ್, ಸಿಂಗಾಪುರ, ಬ್ರಿಟನ್, ಅಮೆರಿಕಾ ಮುಂತಾದ ೧೨ ದೇಶಗಳಲ್ಲಿ ದಿನಕರನ್ ಇವರ ಕಾರ್ಯಾಲಯಗಳಿವೆ. ೨೦೦ ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿರುವುದು ಕಂಡುಬಂದಿದೆ. ಪಾಲ್ ದಿನಕರನ್ ‘ಜೀಜಸ್ ಕ್ಲಾಸ್’ ಎಂಬ ಸಂಸ್ಥೆ ನಡೆಸುತ್ತಿದ್ದು, ಇದರ ಮುಖಾಂತರ ತಮಿಳುನಾಡಿನಾದ್ಯಂತ ಕ್ರೈಸ್ತ ಧರ್ಮ ಪ್ರಚಾರ ಮತ್ತು ಪ್ರಸಾರ ಮಾಡುತ್ತಾರೆ.