ರಾಜಧಾನಿ ದೆಹಲಿಯ ಮಾರ್ಕೆಟ್ ನಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ !

  • ದೇಶದ ರಾಜಧಾನಿಯಲ್ಲಿ ದೇಶದ್ರೋಹಿಗಳು ಈ ರೀತಿ ತುಂಬಿದ್ದಲ್ಲಿ ಇತರ ಸ್ಥಳಗಳ ಸ್ಥಿತಿಯ ಬಗ್ಗೆ ವಿಚಾರ ಮಾಡದಿರುವುದೇ ಒಳಿತು!
  • ಪಾಕಿಸ್ತಾನದ ಕರಾಚಿ, ಲಾಹೋರ, ಇಸ್ಲಾಮಾಬಾದ್, ಪೇಶಾವರ, ರಾವಳಪಿಂಡಿ ಮುಂತಾದ ನಗರಗಳಲ್ಲಿ ಯಾವತ್ತಾದರೂ ‘ಹಿಂದೂಸ್ಥಾನ ಜಿಂದಾಬಾದ್’ ಘೋಷಣೆ ನೀಡುವ ಧೈರ್ಯವನ್ನು ಯಾರಾದರೂ ಮಾಡಲು ಸಾಧ್ಯವಿದೆಯೇ? ಹೀಗಿರುವಾಗ ಭಾರತದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ನ ಘೋಷಣೆ ನೀಡುವ ಧೈರ್ಯ ಬಂದಿದ್ದಾದರೂ ಹೇಗೆ? ಇಂತಹ ದೇಶದ್ರೋಹಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತಹ ಕಾನೂನನ್ನು ಸರಕಾರವು ರಚಿಸಬೇಕು

ಹೊಸ ದೆಹಲಿ – ಮಧ್ಯರಾತ್ರಿ ಸ್ಥಳೀಯ ಖಾನ ಮಾರ್ಕೆಟ್ ನಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ನ ಘೋಷಣೆಯನ್ನು ನೀಡಲಾಯಿತು. ನಂತರ ಪೊಲೀಸರು ಇಬ್ಬರು ಪುರುಷರು ಮತ್ತು ೩ ಮಹಿಳೆಯರನ್ನು ಇಲ್ಲಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಅವರು ಮತ್ತು ಅವರ ಕುಟುಂಬದವರ ವಿಚಾರಣೆ ಮಾಡಲಾಗುತ್ತಿದೆ. ಮಧ್ಯರಾತ್ರಿ ೧ ಗಂಟೆ ಸುಮಾರಿಗೆ ಈ ಘಟನೆಯಾಗಿದೆ.

ಕೆಲವು ಜನರು ಘೋಷಣೆಗಳನ್ನು ಹಾಕುತ್ತಿದ್ದಾರೆಂಬ ಮಾಹಿತಿಯು ಪೊಲೀಸರಿಗೆ ಸಿಕ್ಕಿದ ನಂತರ ಅವರು ಘಟನಾಸ್ಥಳಕ್ಕೆ ತಲುಪಿದ್ದಾರೆ. ಅವರಿಗೆ ಇಲ್ಲಿ ೨ ಪುರುಷರು ಮತ್ತು ೩ ಮಹಿಳೆಯರು ದ್ವಿಚಕ್ರ ವಾಹನಗಳಲ್ಲಿ ಕುಳಿತು ವೇಗವಾಗಿ ಚಲಾಯಿಸುವಾ ಸ್ಪರ್ಧೆ ನಡೆಸುತ್ತಿರುವುದು ಕಂಡುಬಂತು. ಅವರನ್ನು ವಿಚಾರಿಸಿದಾಗ, ಅವರು ‘ನಾವು ಪರಸ್ಪರರನ್ನು ಅವರವರ ದೇಶಗಳ ಹೆಸರಿನಿಂದ ಕರೆಯುತ್ತಿದ್ದವು. ಅದರಲ್ಲಿ ಒಬ್ಬರು ಪಾಕಿಸ್ತಾನದಿಂದ ಬಂದಿದ್ದ, ಅವನು ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆಯನ್ನು ನೀಡುತ್ತಿದ್ದ’, ಎಂದು ಮಾಹಿತಿಯನ್ನು ನೀಡಿದರು. ಈ ಪ್ರಕರಣದಲ್ಲಿ ಅವರ ವಿಚಾರಣೆ ನಡೆಯುತ್ತಿದೆ.