‘ಅಮೂಲ್’ ಸಂಸ್ಥೆಯು ‘ಸುದರ್ಶನ ಟಿವಿ’ಯಲ್ಲಿ ‘ಯು.ಪಿ.ಎಸ್.ಸಿ. ಜಿಹಾದ್’ ಕಾರ್ಯಕ್ರಮಕ್ಕೆ ಪ್ರಾಯೋಜಕವನ್ನು ನೀಡಿದೆ ಎಂದು ಹೇಳುತ್ತಾ ‘ಅಮೂಲ್’ನ ಬದಲಾಗಿ ‘ಬ್ರಿಟಾನಿಯಾ’ದ ಬೆಣ್ಣೆಯನ್ನು ಉಪಯೋಗಿಸುವಂತೆ ಮತಾಂಧರಿಂದ ಕರೆ

ಮತಾಂಧರು ತಮ್ಮ ವಿರುದ್ಧದ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡುವ ಸಂಸ್ಥೆಯ ಮೇಲೆ ಬಹಿಷ್ಕಾರ ಹಾಕುವಂತೆ ಶೀಘ್ರವಾಗಿ ಕರೆ ನೀಡುತ್ತಾರೆ, ಆದರೆ ಹೆಚ್ಚಿನ ಹಿಂದೂಗಳು ತಮ್ಮ ಧರ್ಮದ ಅವಮಾನವನ್ನು ಮಾಡುವ ಯಾವುದೇ ಸಂಸ್ಥೆಯ ವಿರುದ್ಧ ಚಕಾರವೆತ್ತುವುದಿಲ್ಲ !

ನವ ದೆಹಲಿ – ‘ಸುದರ್ಶನ ಟಿವಿ’ ವಾರ್ತಾವಾಹಿಯಲ್ಲಿಯ ‘ಬಿಂದಾಸ ಬೋಲ್’ ಈ ಕಾರ್ಯಕ್ರಮದಲ್ಲಿ ‘ಯು.ಪಿ.ಎಸ್.ಸಿ. ಜಿಹಾದ್’ ಈ ವಿಷಯವನ್ನು ಮಂಡಿಸಲಿತ್ತು; ಆದರೆ ಈ ಕಾರ್ಯಕ್ರಮವನ್ನು ಪ್ರಸಾರ ಮಾಡದಿರುವಂತೆ ದೆಹಲಿ ಉಚ್ಚ ನ್ಯಾಯಾಲಯವು ತಡೆ ನೀಡಿದೆ. ಈ ಕಾರ್ಯಕ್ರಮದ ಪ್ರಾಯೋಜಕರ ಪೈಕಿ ‘ಅಮೂಲ್’ ಈ ಸಂಸ್ಥೆಯೂ ಇತ್ತು, ಎಂಬ ಮಾಹಿತಿಯು ಬಹಿರಂಗವಾಗಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಮತಾಂಧರು ‘ಅಮೂಲ್’ನ ಉತ್ಪಾದನೆಯ ಮೇಲೆ ಬಹಿಷ್ಕಾರ ಹಾಕುವಂತೆ ಸಾಮಾಜಿಕ ಪ್ರಸಾರ ಮಾಧ್ಯಮದಲ್ಲಿ ಕರೆ ನೀಡಿದ್ದಾರೆ. ಅದಕ್ಕೆ ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವಿರೋಧವಾಗುತ್ತಿದೆ.
‘ಜನತಾ ಕಾ ರಿಪೋರ್ಟರ್’ ಈ ವಾರ್ತಾ ಜಾಲತಾಣದ ಸಂಸ್ಥಾಪಕ ರಿಫತ ಜವೈದ್ ಇವರು ಟ್ವೀಟ್ ಮಾಡಿ, ನಾವು ಇನ್ನುಮುಂದೆ ‘ಅಮೂಲ್’ ಬದಲಾಗಿ ವಿದೇಶಿ ಸಂಸ್ಥೆಯಾಗಿರುವ ‘ಬ್ರಿಟಾನಿಯಾ’ದ ಬೆಣ್ಣೆಯನ್ನು ಉಪಯೋಗಿಸಲು ನಿರ್ಧರಿಸಿದ್ದೇವೆ. ನಾವು ನಮ್ಮ ಆಯ್ಕೆಯನ್ನು ಮಾಡಲು ಸ್ವತಂತ್ರರಾಗಿದ್ದೇವೆ. ನಾನು ಎಂದಿಗೂ ದ್ವೇಷವನ್ನು ಬೆಂಬಲಿಸುವ ವ್ಯಕ್ತಿಯನ್ನು ಬೆಂಬಲಿಸುವುದಿಲ್ಲ’ ಎಂದು ಹೇಳಿದ್ದಾರೆ. ಜಾವೆದ್ ಅವರ ಟ್ವಿಟ್‌ಗೆ ಸಮ್ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವರು ‘ಬ್ರಿಟಾನಿಯಾ’ದ ಬೆಣ್ಣೆ ಮಾರಕವಾಗಿದೆ’, ಎಂದು ಹೇಳುತ್ತ ಅದನ್ನು ವಿರೋಧಿಸಿದ್ದಾರೆ.