ಟಾಟಾ, ಅಂಬಾನಿ ಇತ್ಯಾದಿ ಉದ್ಯಮಿಗಳಿಗಿಂತ ಹೆಚ್ಚಿನ ಆದಾಯವನ್ನು ಹೊಂದಿರುವ ಸಾಯರೊ ಮಲಬಾರ ಚರ್ಚ್ ತೆರಿಗೆ ಪಾವತಿಸುತ್ತಿಲ್ಲ !

ದೇಶದಲ್ಲಿ ಹಿಂದೂಗಳ ದೊಡ್ಡ ದೊಡ್ಡ ದೇವಸ್ಥಾನಗಳನ್ನು ವಶಕ್ಕೆ ಪಡೆದುಕೊಳ್ಳುವ ಸರಕಾರ ಈ ಚರ್ಚ್‌ಅನ್ನು ಸರಕಾರಿಕರಣಗೊಳಿಸುವ ಧೈರ್ಯ ಏಕೆ ಮಾಡುತ್ತಿಲ್ಲ ?

ನವ ದೆಹಲಿ – ಟಾಟಾ. ಅಂಬಾನಿ, ಗೋದರೇಜ್ ಇತ್ಯಾದಿ ಉದ್ಯಮಿಗಳಿಗಿಂತ ಹೆಚ್ಚು ಆದಾಯ ಹೊಂದಿರುವ ಕೇರಳದ ರೋಮನ್ ಕ್ಯಾಥೊಲಿಕ ಸಾಯರೊ ಮಲಬಾರ ಚರ್ಚ್ ಯಾವುದೇ ರೀತಿಯ ತೆರಿಗೆ ಪಾವತಿಸುತ್ತಿಲ್ಲ. ಎಂದು ‘ಕ್ರಿಟೆಲಿ ಡಾಟ್ ಕಾಮ್’ ಈ ಜಾಲತಾಣವು ಪ್ರಕಾಶಿಸಿದ ವಾರ್ತೆಯಲ್ಲಿ ಮಾಹಿತಿ ನೀಡಿದೆ. ಈ ಚರ್ಚ್‌ನ ಬಳಿ ೩ ಲಕ್ಷ ಕೋಟಿ ರೂಪಾಯಿಗಳಷ್ಟು ಸ್ವತ್ತು ಇದೆ ಎಂದು ಹೇಳಲಾಗುತ್ತಿದೆ. ಭಾರತದಷ್ಟೇ ಅಲ್ಲ, ಜಗತ್ತಿನ ಎಲ್ಲ ಕ್ಯಾಥೊಲಿಕ್ ಚರ್ಚ್‌ಗಳಲ್ಲಿ ಸಾಯರೊ ಮಲಬಾರ ಚರ್ಚ್‌ನ ಸ್ವತ್ತು ಎಲ್ಲಕ್ಕಿಂತ ಹೆಚ್ಚು ಇದೆ.

Do u know which is India’s biggest corporate? No not Ambani or Tata… there is one that is valued with over 3 lakh…

Posted by Physio Leech Therapy on Saturday, 23 May 2020

೧. ಈ ಚರ್ಚ್ ಬಳಿ ೧೧ ಸಾವಿರಕ್ಕಿಂತಲೂ ಹೆಚ್ಚು ಸಂಸ್ಥೆಗಳ ಮಾಲಿಕತ್ವವಿದೆ. ಈ ಎಲ್ಲಾ ಸಂಸ್ಥೆಗಳನ್ನು ಚರ್ಚ್‌ನ ಹೆಸರಿನಿಂದಲೇ ನಡೆಸಲಾಗುತ್ತಿದೆ. ಈ ಚರ್ಚ್ ಬಳಿ ೯ ಸಾವಿರ ಪಾದ್ರಿ, ೩೦ ಸಾವಿರ ನನ್, ೩ ಸಾವಿರದ ೭೬೩ ಚರ್ಚ್, ೪ ಸಾವಿರ ೮೬೦ ಶಿಕ್ಷಣ ಸಂಸ್ಥೆ, ೨ ಸಾವಿರ ೬೧೪ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳು ಇವೆ. ಈ ಚರ್ಚ್‌ನ ಸದಸ್ಯರ ಸಂಖ್ಯೆ ೫೦ ಲಕ್ಷಕ್ಕಿಂತಲೂ ಹೆಚ್ಚಿದೆ.

೨. ಸಿ.ಎಮ್.ಎ. ಹೆಸರಿನ ಸಂಸ್ಥೆಯು ಈ ಚರ್ಚ್‌ನ ಎಲ್ಲಕ್ಕಿಂತ ದೊಡ್ಡ ಸಂಸ್ಥೆಯಾಗಿದ್ದು ಅದರಡಿಯಲ್ಲಿ ೧ ಸಾವಿರದ ೫೧೪ ಶಾಲೆ, ಮಹಾವಿದ್ಯಾಲಯ ಹಾಗೂ ಅನಾಥಾಶ್ರಮಗಳನ್ನು ನಡೆಸಲಾಗುತ್ತಿದೆ. ಈ ಚರ್ಚ್‌ನ ಆದಾಯವು ದೇಶದ ಇತರ ಎಲ್ಲ ಸಂಸ್ಥೆಗಳಿಗಿಂತ ಹೆಚ್ಚಾಗಿದೆ. ದೇಶದ ಪ್ರತಿ ನಗರಗಳಲ್ಲಿಯೂ ಈ ಸಂಸ್ಥೆಯ ಕಾರ್ಯಾಲಯಗಳಿವೆ.