ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಯುವಕರು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸದೃಢರಾಗಬೇಕು ! – ಪ್ರಜ್ವಲ ಗುಪ್ತಾ, ಅಧ್ಯಕ್ಷರು, ಹಿಂದೂ ಜನಸೇವಾ ಸಮಿತಿ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಮೂರನೇ ದಿನ (ಜೂನ್ 26) : ದೇಶದ ಭದ್ರತೆ ಮತ್ತು ಧರ್ಮ ರಕ್ಷಣೆ

ವಿದ್ಯಾಧಿರಾಜ ಸಭಾಂಗಣ – ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕಾದರೆ ಯುವಕರು ಹಿಂದೂ ರಾಷ್ಟ್ರಕ್ಕೆ ಪ್ರೇರಣೆಯಾಗಬೇಕು, ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿಯೂ ಸದೃಢರಾಗಬೇಕು. ಧರ್ಮದಿಂದ ಮಾತ್ರ ಸಮಾಜ ರಕ್ಷಣೆಯಾಗುತ್ತದೆ. ಆದ್ದರಿಂದ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹಿಂದೂಗಳನ್ನು ಜಾಗೃತಗೊಳಿಸಬೇಕು ಎಂದು ಶ್ರೀ. ಪ್ರಜ್ವಲ ಗುಪ್ತಾ ಇವರು ಪ್ರತಿಪಾದಿಸಿದರು.

ಶ್ರೀ. ಪ್ರಜ್ವಲ್ ಗುಪ್ತಾ ಇವರು ಯುವಕರನ್ನು ಸಂಘಟಿಸಲು ಕಾಕೋರಿ (ಜಿಲ್ಲೆ ಲಕ್ಷ್ಮಣಪುರಿ) ನಲ್ಲಿ ಹಿಂದೂ ಜನಸೇವಾ ಸಮಿತಿಯನ್ನು ಸ್ಥಾಪಿಸಿದರು.