ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿಯವರು ‘ಭಗವಾನ್ ವೆಂಕಟೇಶ್ವರನಲ್ಲಿ ನನಗೆ ಶ್ರದ್ಧೆ ಇದೆ’ ಎಂಬ ಬಂಧನಕಾರಿ ಪ್ರಮಾಣಪತ್ರಕ್ಕೆ ಸಹಿ ಹಾಕದೇ ತಿರುಪತಿ ದೇವಸ್ಥಾನದಲ್ಲಿ ಪ್ರವೇಶ !

ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ವೈ.ಎಸ್. ಜಗನಮೋಹನ್ ರೆಡ್ಡಿಯವರು ಸೆಪ್ಟೆಂಬರ್ ೨೩ ರಂದು ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಮಯದಲ್ಲಿ ಅವರು ಇತರ ಧರ್ಮಗಳಿಗೆ ಬಂಧನಕಾರಿಯಾಗಿರುವ ಭಗವಾನ್ ವೆಂಕಟೇಶ್ವರನ ಮೇಲೆ ಶ್ರದ್ಧೆ ಇರುವ ಕುರಿತಾದ ಪ್ರಮಾಣವಚನಕ್ಕೆ ಸಹಿ ಹಾಕಲಿಲ್ಲ.

ಮಹಾನಗರಗಳು ಮತ್ತು ದೊಡ್ಡ ನಗರಗಳಲ್ಲಿ ವಾಸಿಸುವ ಸಾಧಕರಿಗಾಗಿ ಮಹತ್ವದ ಸೂಚನೆ

ಸದ್ಯ ಭಾರತದಲ್ಲಿರುವ ಮಹಾನಗರಗಳಲ್ಲಿ ಹಾಗೆಯೇ ಇತರ ದೊಡ್ಡ ನಗರಗಳಲ್ಲಿ ಜನಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿರುವ ರೋಗರುಜಿನಗಳು ಎಲ್ಲರ ಚಿಂತೆಯ ವಿಷಯವಾಗಿವೆ. ನಗರಗಳಲ್ಲಿರುವ ಅಪಾರ ಜನಜಂಗುಳಿ, ಸ್ವಚ್ಛತೆಯ ಅಭಾವ, ಹೆಚ್ಚುತ್ತಿರುವ ಮಾಲಿನ್ಯ, ರಜ-ತಮಗಳ ಅಧಿಕ ಪ್ರಾಬಲ್ಯ ಇತ್ಯಾದಿಗಳ ಕಾರಣಗಳಿಂದ ಅಲ್ಲಿನ ನಾಗರಿಕರು ಭಯ ಮತ್ತು ಅಸುರಕ್ಷತೆಯ ನೆರಳಿನಲ್ಲಿ ಬದುಕುತ್ತಿರುವುದು ಕಂಡುಬರುತ್ತದೆ.

ಮಹಾನಗರಗಳು ಮತ್ತು ದೊಡ್ಡ ನಗರಗಳಲ್ಲಿ ವಾಸಿಸುವ ಸಾಧಕರಿಗಾಗಿ ಮಹತ್ವದ ಸೂಚನೆ

ಮುಂಬರುವ ಆಪತ್ಕಾಲದಲ್ಲಿ ಪ್ರತಿಯೊಬ್ಬರೂ ಪ್ರತಿಕೂಲ ಪ್ರಸಂಗಗಳನ್ನು ಎದುರಿಸಬೇಕಾಗಲಿದೆ. ಕಠಿಣ ಪ್ರಸಂಗದಲ್ಲಿ ಸಾಧಕರು ಪರಸ್ಪರ ಹತ್ತಿರದಲ್ಲಿದ್ದರೆ ಅವರು ಇತರರಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಸಹಾಯ ಮಾಡಬಲ್ಲರು. ಹಾಗಾಗಿ ಸಾಧಕರಲ್ಲಿ ಸಂಘಟಿತನ ಹಾಗೂ ಕೌಟುಂಬಿಕ ಭಾವನೆಯು ಮೂಡುವುದು.

ಬಂಗಾಲದಲ್ಲಿ ಭಾಜಪ ಕಾರ್ಯಕರ್ತರ ಹತ್ಯೆಗಳು ಯಾವಾಗ ನಿಲ್ಲುವುದು ?

ಭಾಜಪದ ಜಿಲ್ಲಾ ಕಾರ್ಯದರ್ಶಿ ಗಣೇಶ ರಾಯ್ ಅವರ ಶವವು ಬಂಗಾಲದ ಗೋಘಾಟ್ ರೈಲ್ವೆ ನಿಲ್ದಾಣದ ಬಳಿಯ ಮರದ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರನ್ನು ತೃಣಮೂಲ ಕಾಂಗ್ರೆಸ್ ಹತ್ಯೆ ಮಾಡಿದೆ ಎಂದು ಭಾಜಪ ಆರೋಪಿಸಿದೆ.

ಅಶಾಂತಿ ಮತ್ತು ವಿನಾಶದತ್ತ ಸಾಗುತ್ತಿರುವ ಪಾಶ್ಚಾತ್ಯ ರಾಷ್ಟ್ರಗಳು !

‘ಪಾಶ್ಚಾತ್ಯ ರಾಷ್ಟ್ರಗಳಲ್ಲಿನ ಜನರ ಪರಿಸ್ಥಿತಿ ತುಂಬಾ ಕರುಣಾಜನಕವಾಗಿದೆ. ಆ ಜನರು ಯಾವಾಗಲೂ ‘ಫ್ಯಾಶನ್ ಬದಲಾಯಿಸುತ್ತಾರೆ, ‘ಬಟ್ಟೆ, ಫರ್ನಿಚರ್, ಮನೆ, ಕಾರುಗಳನ್ನು ಬದಲಾಯಿಸುತ್ತಾರೆ, ಅಷ್ಟೇ ಅಲ್ಲದೇ ಪತ್ನಿಯನ್ನೂ ಬದಲಾಯಿಸುತ್ತಾರೆ ! ‘ಕೆಲವಡೆಗಳಲ್ಲಿಯಂತೂ ಜನರು ತಮ್ಮ ತಮ್ಮ ಪತ್ನಿಯನ್ನು ಕರೆದೊಯ್ಯುತ್ತಾರೆ, ಎಲ್ಲ ಜನರು ನೃತ್ಯ ಮಾಡುತ್ತಾರೆ, ಕುಡಿಯುತ್ತಾರೆ ಮತ್ತು ತಮ್ಮ ಪತ್ನಿಯರನ್ನು ಆನಂದಿಸಲು ಬಿಡುತ್ತಾರೆ.

‘ಕಾಶ್ಮೀರಿಗಳು ತಮ್ಮನ್ನು ಭಾರತೀಯರೆಂದು ಪರಿಗಣಿಸುವುದಿಲ್ಲ, ಅವರಿಗೆ ಚೀನಾದ ಆಡಳಿತ ಬೇಕು !’(ಅಂತೆ) – ಭಾರತದ್ವೇಷಿ ಫಾರುಖ್ ಅಬ್ದುಲ್ಲಾ ಇವರ ನುಡಿಮುತ್ತು

ಕಾಶ್ಮೀರಿ ನಾಗರಿಕರು ತಮ್ಮನ್ನು ಭಾರತೀಯರೆಂದು ತಿಳಿಯುವುದಿಲ್ಲ ಮತ್ತು ಭಾರತೀಯರಾಗಲು ಬಯಸುವುದಿಲ್ಲ. ಬದಲಾಗಿ ಚೀನಾ ತಮ್ಮ ಮೇಲೆ ಆಳ್ವಿಕೆ ನಡೆಸಬೇಕೆಂದು ಅವರಿಗೆ ಅನಿಸುತ್ತದೆ, ಎಂದು ನ್ಯಾಶನಲ್ ಕಾನ್ಫರನ್ಸ್‌ನ ನಾಯಕ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ‘ದಿ ವಯರ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಡಾ. ಝಾಕೀರ್ ನಾಯಿಕ್‌ನ ‘ಪೀಸ್ ಟಿವಿ ಆಪ್’, ‘ಯೂಟ್ಯೂಬ್ ಚಾನೆಲ್’ ಮತ್ತು ‘ಫೇಸ್‌ಬುಕ್ ಪೇಜ್’ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಲಿದೆ

ಜಿಹಾದಿ ಭಯೋತ್ಪಾದಕರ ಆದರ್ಶವಾಗಿರುವ ಡಾ. ಝಾಕೀರ್ ನಾಯಿಕ್‌ರವರ ‘ಪೀಸ್ ಟಿವಿ ಆಪ್’, ‘ಯೂಟ್ಯೂಬ್ ಚಾನೆಲ್’ ಮತ್ತು ‘ಫೇಸ್‌ಬುಕ್ ಪೇಜ್’ಗಳನ್ನು ನಿಷೇಧಿಸಲು ಕೇಂದ್ರ ಗೃಹ ಸಚಿವಾಲಯವು ಪ್ರಯತ್ನಿಸುತ್ತಿದೆ. ಇದಕ್ಕೂ ಮೊದಲು ಸರಕಾರ ಪೀಸ್ ಟಿವಿಯನ್ನು ನಿಷೇಧಿಸಿದ ನಂತರ, ಝಾಕೀರ್‌ನು ಆಪ್ ಮತ್ತು ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿ ತಮ್ಮ ಪ್ರಚೋದನಕಾರಿ ವೀಡಿಯೋಗಳನ್ನು ಪ್ರಸಾರ ಮಾಡುತ್ತಿದ್ದಾನೆ.

ಪಾಕಿಸ್ತಾನದಲ್ಲಿ ೧೭೧ ಹಿಂದೂಗಳ ಸಾಮೂಹಿಕ ಮತಾಂತರ !

ಪಾಕಿಸ್ತಾನದ ಮಾನವಹಕ್ಕುಗಳ ಕಾರ್ಯಕರ್ತ ರಹತ್ ಆಸ್ಟಿನ್ ಇವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಅಹಸಾನ್-ಉಲ್-ತಾಲೀಮ್ ಈ ಮದರಸಾವು ಕರಾಚಿ ನಗರದಲ್ಲಿ ನಡೆದ ಒಂದು ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ೧೭೧ ಹಿಂದೂಗಳನ್ನು ಮತಾಂತರಗೊಳಿಸಲಾಗಿದೆ, ಎಂದು ಮಾಹಿತಿ ನೀಡಿದ್ದಾರೆ.

ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಭಾಜಪದ ನಾಯಕನ ಹತ್ಯೆ

ಬಡಗಾಮ್ ಜಿಲ್ಲೆಯ ಖಗ್ ಗ್ರಾಮದ ಭಾಜಪದ ಮುಖ್ಯಸ್ಥ ಭೂಪೇಂದ್ರ ಸಿಂಗ್ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಪೊಲೀಸರಿಂದ ಅವರಿಗೆ ಭದ್ರತೆ ಒದಗಿಸಲಾಗಿತ್ತು; ಆದರೆ ಅವರು ಮನೆಗೆ ಹೋಗುವಾಗ ಭದ್ರತಾ ಸಿಬ್ಬಂದಿಯನ್ನು ಪೊಲೀಸ್ ಠಾಣೆಗೆ ಕಳುಹಿಸಿ ಏಕಾಂಗಿಯಾಗಿ ಮನೆಗೆ ಹೋಗಿದ್ದರು. ಭಯೋತ್ಪಾದಕರು ಮನೆಯೊಳಗೆ ನುಗ್ಗಿ ಅವರ ಮೇಲೆ ಗುಂಡು ಹಾರಿಸಿದರು.

ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಹಿಂದೂಯೇತರರು ಪ್ರವೇಶಿಸುವ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ ! – ತಿರುಮಲ ತಿರುಪತಿ ದೇವಸ್ಥಾನಮ್

‘ತಿರುಮಲ ತಿರುಪತಿ ದೇವಸ್ಥಾನಮ್’ನ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿಯವರು ‘ಜಗತ್ತಿನಾದ್ಯಂತದ ಸಾವಿರಾರು ಭಕ್ತರು ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ದರ್ಶನಕ್ಕಾಗಿ ಬರುತ್ತಾರೆ. ಈ ಭಕ್ತರಲ್ಲಿ ಇತರ ಧರ್ಮದವರೂ ಇರುತ್ತಾರೆ. ಆದ್ದರಿಂದ ಪ್ರತಿಯೊಬ್ಬರ ‘ಡಿಕ್ಲೆರೇಶನ್ ಆಫ್ ಫೇಥ್ ಅಂಡ್ ಬಿಲೀಫ್’ ಬರೆಯಲು ಸಾಧ್ಯವಿಲ್ಲ ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಿರುವಾಗ ಹೇಳಿಕೆ ನೀಡಿದರು.