ಕರೋನದ ಬಿಕ್ಕಟ್ಟು ಇರುವಾಗಲೇ ಈಗ ದೇಶದಲ್ಲಿ ಮಿಡತೆಯ ದಾಳಿ !

ಭಾರತದಲ್ಲಿ ಕರೋನಾ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವಾಗಲೇ, ಮತ್ತೊಂದು ದೊಡ್ಡ ಬಿಕ್ಕಟ್ಟು ಎದುರಾಗಿದೆ. ದೇಶದ ಕೆಲವು ರಾಜ್ಯಗಳಲ್ಲಿ, ಬೆಳೆದ ಬೆಳೆಯ ಮೇಲೆ ಮಿಡತೆಗಳು ದಾಳಿ ಮಾಡಿವೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಬೆಳೆಗಳ ಮೇಲೆ ದಾಳಿ ಮಾಡಿದ ನಂತರ ಈ ಮಿಡತೆಗಳು ಈಗ ಉತ್ತರ ಪ್ರದೇಶದತ್ತ ಸಾಗುತ್ತಿವೆ.

‘ಭಾರತ ನಮ್ಮ ವಿರುದ್ಧ ಏನಾದರೂ ಮಾಡಲು ಧೈರ್ಯ ಮಾಡಿದರೆ, ನಾವು ತಕ್ಕಪ್ರತ್ಯುತ್ತರಿಸುತ್ತೇವೆ(ಯಂತೆ) !’ – ಪಾಕ್‌ನ ದರ್ಪ

ಪಾಕ್‌ಗೆ ಕಿವಿ ಹಿಂಡಿದ ಮಾಲ್ಡೀವ್ಸ್, ಪಾಕಿಸ್ತಾನದ ಈ ಆರೋಪಗಳನ್ನು ಮಾಲ್ಡೀವ್ಸ್ ಬಲವಾಗಿ ಖಂಡಿಸಿದೆ. ‘ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ದೇಶವಾಗಿದ್ದು, ಭಾರತದಲ್ಲಿ ೨೦ ಕೋಟಿಕ್ಕಿಂತಲೂ ಹೆಚ್ಚು ಮುಸಲ್ಮಾನರು ವಾಸಿಸುತ್ತಿದ್ದಾರೆ. ಆದ್ದರಿಂದ ಭಾರತದ ವಿರುದ್ಧ ಇಂತಹ ಆರೋಪ ಮಾಡುವುದು ಅಯೋಗ್ಯವಾಗಿದೆ. ಇಂತಹ ಆರೋಪ ಹೊರಿಸುವುದು, ಇದು ದಕ್ಷಿಣ ಏಷ್ಯಾ ಪ್ರದೇಶದ ಧಾರ್ಮಿಕ ಏಕತೆಗೆ ಮಾರಕವಾಗಿದೆ.

ಕೊರೋನಾ ವಿರುದ್ಧ ಹೋರಾಡಲು ಆಯುರ್ವೇದ ಲಾಭದಾಯಕ ! – ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ

ಆಯುರ್ವೇದವು ಭಾರತದ ಪಾರಂಪರಿಕ ಔಷಧಿ ಜ್ಞಾನದ ಮೂಲವಾಗಿದೆ. ‘ಚೌಧರಿ ಬ್ರಹ್ಮಾ ಪ್ರಕಾಶ ಆಯುರ್ವೇದ ಚರಕ್ ಸಂಸ್ಥಾನ’ದಲ್ಲಿ ಸಮಗ್ರ ಚಿಕಿತ್ಸೆಯ ದೃಷ್ಟಿಯಿಂದ ಕೊರೋನ ಪೀಡಿತರಿಗೆ ಉತ್ತಮ ಚಿಕಿತ್ಸೆ ಹಾಗೂ ಜನರ ಕಲ್ಯಾಣಕ್ಕಾಗಿ ಆಯುರ್ವೇದವನ್ನು ಬಳಸಲಾಗುತ್ತಿದೆ. ಜಗತ್ತಿನ ಎಲ್ಲ ಜನರಿಗೆ ವಿಶೇಷವಾಗಿ ಕೊರೋನಾದ ವಿರುದ್ಧ ಹೋರಾಡಲು ಆಯುರ್ವೇದದ ಜ್ಞಾನವು ಪ್ರಯೋಜನಕಾರಿಯಾಗಲಿದೆ,

ಜಾತ್ಯತೀತ ಎಂದು ಹೇಳಿಕೊಳ್ಳುವ ಭಾರತದಲ್ಲಿ ಧರ್ಮಾಧಾರಿತ ಸಮನಾಂತರ ಹಲಾಲ್ ಆರ್ಥಿಕತೆ ಏಕೆ ಬೇಕು ?

ಜಾತ್ಯತೀತ ಭಾರತದಲ್ಲಿ ಧರ್ಮಾಧಾರದಲ್ಲಿ ಸಮನಾಂತರ ಅರ್ಥವ್ಯವಸ್ಥೆಯು ದೇಶದ ಸುರಕ್ಷತೆ ದೃಷ್ಟಿಯಿಂದ ಅತ್ಯಂತ ಗಂಭೀರವಾಗಿದ್ದು ಸರಕಾರವು ‘ಹಲಾಲ್  ಪ್ರಮಾಣಿತ ಪದ್ದತಿಯನ್ನು ಕೂಡಲೇ ನಿಲ್ಲಿಸಬೇಕು ಹಾಗೂ ನಾಗರಿಕರು ‘ಹಲಾಲ್ ಪ್ರಮಾಣಿತ ಉತ್ಪಾದನೆಗಳನ್ನು ಬಹಿಷ್ಕರಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿ ಕರೆ ನೀಡಿದೆ.

ಹಲಾಲ್ ಪ್ರಮಾಣಿತ ಉತ್ಪನ್ನಗಳ ವಿರುದ್ಧದ #BoycottHalalProducts ಈ ‘ಟ್ರೆಂಡ್ ‘ರಾಷ್ಟ್ರೀಯ ಟ್ರೆಂಡ್ನಲ್ಲಿ ಎರಡನೇ ಸ್ಥಾನ !

ಈ ಪಿತೂರಿಯ ಬಗ್ಗೆ ಹಿಂದೂ ಧರ್ಮಪ್ರೇಮಿಗಳಿಗೆ ತಿಳಿದ ನಂತರ, ಅವರು ಟ್ವಿಟರ್‌ನಲ್ಲಿ #BoycottHalalProducts ಹೆಸರಿನಲ್ಲಿ ‘ಹ್ಯಾಶ್‌ಟ್ಯಾಗ್ ಪ್ರಾರಂಭಿಸಿದರು. ಪರಿಣಾಮವಾಗಿ ‘ಟ್ರೆಂಡ್ ರಾಷ್ಟ್ರೀಯ ಟ್ರೆಂಡ್‌ದಲ್ಲಿ ಮೊದಲು ನಾಲ್ಕನೇ ಮತ್ತು ನಂತರ ಮೂರನೇ ನಂತರ ಎರಡನೇಯ ಸ್ಥಾನದಲ್ಲಿತ್ತು. ಈ ‘ಟ್ರೆಂಡ್ನಲ್ಲಿ ೧ ಲಕ್ಷ ಜನರು ಟ್ವೀಟ್ಸ್ ಮಾಡಿದ್ದಾರೆ.

‘ಸ್ವಾವಲಂಬಿ ರೆಕ್ಕೆಯ ಬಾನೆತ್ತರದ ನೆಗೆತ

ಕೊರೋನಾದಿಂದ ನಲುಗಿರುವ ಅರ್ಥವ್ಯವಸ್ಥೆಗೆ ವೇಗವನ್ನು ತರಲು ಮೋದಿಯವರು ೨೦ ಲಕ್ಷ ಕೋಟಿ ರೂಪಾಯಿಗಳ ಬೃಹತ್ ‘ಪ್ಯಾಕೇಜ್ ಘೋಷಿಸಿದರು. ಇದರ ಮೌಲ್ಯವು ಭಾರತದ ಜಿ.ಡಿ.ಪಿ.ಯ ಶೇ. ೧೦ ರಷ್ಟಿದೆ. ಈ ಬಹುದೊಡ್ಡ ಆರ್ಥಿಕ ಸಹಾಯವನ್ನು ಘೋಷಿಸುವಾಗ ಸರಕಾರವು ದೇಶವನ್ನು ‘ಸ್ವಾವಲಂಬಿಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ನಿಲುವು ಭಾರತದ ಅಭಿವೃದ್ಧಿಯ ಪ್ರಯತ್ನಗಳಿಗೆ ಖಂಡಿತವಾಗಿಯೂ ಶಾಶ್ವತ ಆಯಾಮವನ್ನು ನೀಡಲಿದೆ.

ನೈತಿಕತೆಯನ್ನು ಮದ್ಯದ ಲೋಟದಲ್ಲಿ ಮುಳುಗಿಸುವ ಸರಕಾರಗಳು !

ಅಪರಾಧಗಳಲ್ಲಿ ಒಂದು ಕೌಟುಂಬಿಕ ಹಿಂಸಾಚಾರದ್ದಾಗಿರುತ್ತದೆ. ಮದ್ಯದ ಅಮಲಿನಲ್ಲಿ ಪತ್ನಿ ಮತ್ತು ಮಕ್ಕಳನ್ನು ಹೊಡೆಯುವುದು, ಅದರಿಂದಾಗುವ ಖಟ್ಲೆಗಳು, ದಂಪತಿಗಳ ವಿವಾಹ ವಿಚ್ಛೇದನೆ ಪ್ರಕ್ರಿಯೆ, ಅದರಿಂದ ಒಡೆದು ಹೋಗುವ ಕುಟುಂಬಗಳು, ಅದರಿಂದ ನಿರ್ಮಾಣವಾಗುವ ಮಾನಸಿಕ ಒತ್ತಡ ಮುಂತಾದವುಗಳನ್ನು ನಾವು ಗಮನದಲ್ಲಿ ತೆಗೆದುಕೊಳ್ಳಬೇಕು.

ಚೀನಾದಿಂದ ಭಾರತದ ಸಮೀಪದ ಮಾಲ್ದೀವ್‌ನಲ್ಲಿ ಕೃತಕ ದ್ವೀಪದ ನಿರ್ಮಾಣ !

ಮಾಲ್ದೀವ್ ಹಿಂದೂ ಮಹಾಸಾಗರದಿಂದ ಬರುವ ನೌಕೆಯ ಮಾರ್ಗವಾಗಿದೆ. ಈ ಮಾರ್ಗದ ಮೂಲಕ ಅಬ್ಜಗಟ್ಟಲೆ ರೂಪಾಯಿ ವ್ಯವಹಾರವು ಮಾಡಲಾಗುತ್ತದೆ. ಆದ್ದರಿಂದ ಚೀನಾಗೆ ಮಾಲದೀವ್ ಮಹತ್ವದ್ದಾಗಿ ಕಾಣಿಸುತ್ತದೆ, ಅದೇರೀತಿ ಕೇವಲ ೨೦ ರಿಂದ ೨೫ ನಿಮಿಷಗಳಲ್ಲಿ ಚೀನಾದ ಯುದ್ಧ ವಿಮಾನಗಳು ಭಾರತಕ್ಕೆ ಬರಬಹುದು.

ನಾಗಠಾಣಾ ಬುದ್ರುಕ (ನಾಂದೇಡ್ ಜಿಲ್ಲೆ) ಇಲ್ಲಿಯ ಶ್ರೀ ಷ.ಬ್ರ. ೧೦೮ ಬಾಲvಪ್ಪಸ್ವಿ ಶಿವಾಚಾರ್ಯ ನಿರ್ವಾಣರುದ್ರ ಪಶುಪತಿನಾಥ್ ಮಹಾರಾಜ್ ಸಹಿತ ಮತ್ತೋರ್ವರ ಹತ್ಯೆ

ನಾಂದೇಡ್ ಜಿಲ್ಲೆಯ ಮರಿ ತಾಲೂಕಿನ ನಾಗಠಾಣಾ ಬುದ್ರುಕದಲ್ಲಿ ಮೇ ೨೩ ರ ರಾತ್ರಿ ಒಂದುವರೆಯ ಸಮಯದಲ್ಲಿ ಕೆಲವು ಕಳ್ಳರು ಶ್ರೀ ಷ. ಬ್ರ. ೧೦೮ ಬಾಲತಪಸ್ವೀ ಶಿವಾಚಾರ್ಯ ನಿರ್ವಾಣರುದ್ರ ಪಶುಪತಿನಾಥ್ ಮಹಾರಾಜರ ಮಠವನ್ನು ಪ್ರವೇಶಿಸಿ ಅವರಿಂದ ನಗದನ್ನು ಲೂಟಿ ಮಾಡಿದರು. ನಂತರ ಅವರ ಕುತ್ತಿಗೆಯನ್ನು ಹಿಸುಕಿ ಹತ್ಯೆ ಮಾಡಲಾಯಿತು, ಅದೇರೀತಿ ಅಲ್ಲಿಯ ಸ್ನಾನಗೃಹದಲ್ಲಿ ಭಗವಾನ ಶಿಂದೆ ಈ ವ್ಯಕ್ತಿಯ ಶವ ಸಿಕ್ಕಿದೆ.

ಭಾರತೀಯ ಸಂವಿಧಾನದಿಂದ ‘ಜಾತ್ಯತೀತ’ ಪದವನ್ನು ತೆಗೆದುಹಾಕಲು ಟ್ವಿಟರ್‌ನಲ್ಲಿ ’ಟ್ರೆಂಡ್’ !

ದೇಶದಲ್ಲಿ ತಥಾಕಥಿತ ಅಲ್ಪಸಂಖ್ಯಾತರ ಓಲೈಕೆ ಹಾಗೂ ಹಿಂದೂಗಳನ್ನು ದಮನಿಸಲಾಗುತ್ತಿದೆ ಇದರ ವಿರುದ್ಧ ಮೇ ೨೪ ರಂದು ರಾಷ್ಟ್ರಪ್ರೇಮಿಗಳು ಹಾಗೂ ದೇಶಪ್ರೇಮಿಗಳು ‘#SayNoToPseudoSecularism’ ಎಂಬ ಹ್ಯಾಶ್‌ಟ್ಯಾಗ್ ಅನ್ನು ಆರಂಭಿಸಿದರು. ಅಲ್ಪಾವಧಿಯಲ್ಲಿಯೇ ಅದು ರಾಷ್ಟ್ರೀಯ ‘ಟ್ರೆಂಡ್’ನಲ್ಲಿ ೫ ನೇ ಸ್ಥಾನ ಮತ್ತು ನಂತರ ೨ ನೇ ಸ್ಥಾನದಲ್ಲಿತ್ತು. ಈ ಟ್ವಿಟರ್‌ನಲ್ಲಿ ೧ ಲಕ್ಷಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಯಿತು.