ಆಪತ್ಕಾಲದಿಂದ ಸುರಕ್ಷಿತವಾಗಿ ಪಾರಾಗಲು ಸಾಧನೆಯನ್ನು ಕಲಿಸುವ ಸನಾತನ ಸಂಸ್ಥೆ !

ವಾಸಿಸುತ್ತಿರುವ ಮನೆಯು ಕುಸಿಯುವ ಸ್ಥಿತಿಯಲ್ಲಿದ್ದರೆ ಅಥವಾ ಕೆಲವು ಭಾಗ ಕುಸಿಯುತ್ತಿದ್ದರೆ ಅಥವಾ ಮನೆಯ ಮಹತ್ವದ ದುರಸ್ತಿಯನ್ನು ಮಾಡುವುದು ಬಾಕಿಯಿದ್ದಲ್ಲಿ ಮುಂದೆ ಆಪತ್ಕಾಲದಲ್ಲಿ ನೆರೆ, ಬಿರುಗಾಳಿ ಮುಂತಾದ ಆಪತ್ತುಗಳು ಎದುರಾದಾಗ ಮನೆಯು ಬೀಳುವ ಸಾಧ್ಯತೆಯಿರುತ್ತದೆ ಅಥವಾ ಮನೆ ಕುಸಿಯುವ ಸಾಧ್ಯತೆಯಿರುತ್ತದೆ. ಆಪತ್ಕಾಲದಲ್ಲಿ ಮನೆಯನ್ನು ದುರುಸ್ತಿ ಮಾಡಿಸಿಕೊಳ್ಳುವುದೂ ಸಹ ಬಹಳ ಕಠಿಣವಾಗಬಹುದು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ನಾಗರಿಕರಿಗಾಗಿ ಮಹತ್ವದ ಮಾಹಿತಿ

ಪ್ರವಾಹದ ದೃಷ್ಟಿಯಿಂದ ಭೌತಿಕ ಸ್ತರದಲ್ಲಿ ಎಷ್ಟೇ ಪೂರ್ವ ಸಿದ್ಧತೆಗಳನ್ನು ಮಾಡಿದರೂ, ನಮ್ಮ ರಕ್ಷಣೆಯಾಗಲು ಪ್ರತಿನಿತ್ಯ ಭಗವಂತನ ಆರಾಧನೆ (ಸಾಧನೆ)ಯನ್ನು ಮಾಡಬೇಕು. ಸರ್ವಸಾಮಾನ್ಯ ವ್ಯಕ್ತಿ ಆಪತ್ಕಾಲದ ಸ್ಥಿತಿಯಲ್ಲಿ ತುಂಬಾ ಹೆದರುತ್ತಾನೆ. ಆದರೆ ಸಾಧನೆಯನ್ನು ಮಾಡುವವರ(ಸಾಧಕರ) ಮನಸ್ಸಿನಲ್ಲಿ ಮಾತ್ರ ‘ಈ ಕಠಿಣ ಪ್ರಸಂಗದಲ್ಲಿ ದೇವರು ನಮ್ಮ ರಕ್ಷಣೆಯನ್ನು ಮಾಡುತ್ತಾನೆ, ಎನ್ನುವ ದೃಢ ವಿಶ್ವಾಸವಿರುವುದರಿಂದ ಅವರು ಕಠಿಣ ಪರಿಸ್ಥಿತಿಯಲ್ಲಿಯೂ ಸ್ಥಿರವಾಗಿರಬಲ್ಲರು.

ನಾವೀನ್ಯಪೂರ್ಣ ಆಧ್ಯಾತ್ಮಿಕ  ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಅಥರ್ವಶೀರ್ಷವನ್ನು ಬಹಳ ನಿಧಾನವಾಗಿ ಮತ್ತು ಒಂದೇ ಲಯದಲ್ಲಿ ಹೇಳಬೇಕು. ಸ್ತೋತ್ರವನ್ನು ಹೇಳುವ ಮೊದಲು ಸ್ನಾನ ಮಾಡಬೇಕು. ಕುಳಿತುಕೊಳ್ಳಲು ಒಗೆದು ಮಡಚಿದ ವಸ್ತ್ರ, ಮೃಗಾಜಿನ, ಉಣ್ಣೆಯ ಪಂಚೆ ಅಥವಾ ದರ್ಭೆಯ ಚಾಪೆಯನ್ನು ಉಪಯೋಗಿಸಬೇಕು. ಪಠಣ ಪೂರ್ಣವಾಗುವವರೆಗೆ ಪುನಃ ಪುನಃ ಕಾಲುಗಳನ್ನು ಬದಲಾಯಿಸುವ ಆವಶ್ಯಕತೆ ಬರದಂತಹ ಸುಲಭ ಸುಖಾಸನದಲ್ಲಿ (ಕಾಲುಮಡಚಿ) ಕುಳಿತುಕೊಳ್ಳಬೇಕು.

೧೦ ನೇ ತರಗತಿಯ ಪರೀಕ್ಷೆಯಲ್ಲಿ ಸನಾತನದ ಬಾಲ ಸಾಧಕರ ಸುಯಶಸ್ಸು !

ಪ್ರತಿ ವಾರ ತಮ್ಮ ವ್ಯಷ್ಟಿ ಸಾಧನೆಯ ವರದಿಯನ್ನು ನೀಡುತ್ತಾನೆ. ಪ್ರತಿದಿನ ಬೆಳಗ್ಗೆ ೫.೩೦ ಗಂಟೆಗೆ ಏಳುತ್ತಾನೆ ಮತ್ತು ತಪ್ಪದೇ ಅಗ್ನಿಹೋತ್ರ, ಸಂಧ್ಯಾವಂದನೆ ಮಾಡುತ್ತಾನೆ. ಈ ಬಾರಿ ಪರೀಕ್ಷೆಯ ದಿನಾಂಕ ಬದಲಾಗುತ್ತಿದ್ದರೂ ಅವನು ವಿಚಲಿತನಾಗದೆ ವಿದ್ಯಾಭ್ಯಾಸ ಮತ್ತು ವ್ಯಷ್ಟಿ ಸಾಧನೆಯತ್ತ ಗಮನ ಕೊಡುತ್ತಿದ್ದರು. ‘ಇದೆಲ್ಲ ಗುರುಕೃಪೆ ಮತ್ತು ಗುರುಗಳು ಹೇಳಿದ ಸಾಧನೆಯಿಂದ ಸಾಧ್ಯವಾಯಿತು ಎನ್ನುತ್ತಾನೆ ಎಂದು ಹೇಳಿದ್ದಾರೆ.

ಸಾಧಕರಿಗೆ ಮಹತ್ವದ ಸೂಚನೆ !

ಆಪತ್ಕಾಲದ ಸ್ಥಿತಿಯಲ್ಲಿ ಕಟ್ಟಡದ ಎತ್ತರದಲ್ಲಿರುವ ಮಹಡಿಗಳು ಕುಸಿದು ಕಟ್ಟಡಕ್ಕೆ ಬಹುದೊಡ್ಡ ಸಂಕಟ ಎದುರಾಗಬಹುದು. ಆದುದರಿಂದ ಎತ್ತರದಲ್ಲಿರುವ ಕಟ್ಟಡದಲ್ಲಿ ಫ್ಲ್ಯಾಟ್ ಖರೀದಿಸದೇ ೩-೪ ಮಹಡಿಗಳ ಕಟ್ಟಡದಲ್ಲಿ ಫ್ಲ್ಯಾಟ್ ಖರೀದಿಸಿ.

ಸಾಧಕರಿಗೆ ಸೂಚನೆ ಪಿತೃಪಕ್ಷದಲ್ಲಿ ದತ್ತನ ನಾಮಜಪ, ಪ್ರಾರ್ಥನೆ ಮತ್ತು ಶ್ರಾದ್ಧವಿಧಿಗಳನ್ನು ಮಾಡಿರಿ !

‘ಪ್ರಸ್ತುತ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ. ಪಿತೃಪಕ್ಷದಲ್ಲಿ (೨ ರಿಂದ ೧೭ ಸೆಪ್ಟೆಂಬರ್ ೨೦೨೦ ಈ ಕಾಲದಲ್ಲಿ) ಈ ತೊಂದರೆ ಹೆಚ್ಚಾಗುವುದರಿಂದ ಈ ಅವಧಿಯಲ್ಲಿ ಪ್ರತಿದಿನ ‘ಓಂ ಓಂ ಶ್ರೀ ಗುರುದೇವ ದತ್ತ ಓಂ ಓಂ | ಈ ನಾಮ ಜಪವನ್ನು ಕಡಿಮೆಪಕ್ಷ ೧ ಗಂಟೆ ಮಾಡಬೇಕು.

ಎಲ್ಲ ವಾಚಕರಿಗೆ, ಹಿತಚಿಂತಕರಿಗೆ ಹಾಗೂ ಧರ್ಮಪ್ರೇಮಿಗಳಿಗೆ ವಿನಂತಿ !

೧೮.೯.೨೦೨೦ ರಿಂದ ೧೬.೧೦.೨೦೨೦ ಈ ಕಾಲಾವಧಿಯಲ್ಲಿ ‘ಅಧಿಕ ಮಾಸ ಇದೆ. ‘ಅಧಿಕ ಮಾಸದಲ್ಲಿ ಮಂಗಲಕಾರ್ಯಗಳನ್ನು ಮಾಡದೇ ವಿಶೇಷ ವ್ರತಗಳು ಹಾಗೂ ಪುಣ್ಯಕರ ಕಾರ್ಯವನ್ನು ಮಾಡಬೇಕು, ಎಂದು ಶಾಸ್ತ್ರಕಾರರು ಹೇಳಿದ್ದಾರೆ. ಈ ತಿಂಗಳಿನಲ್ಲಿ ದಾನ ನೀಡಿದರೇ ಅದರ ಹೆಚ್ಚು ಪಟ್ಟು ಫಲ ಸಿಗುತ್ತದೆ. ಆದ್ದರಿಂದ ಈ ಕಾಲದಲ್ಲಿ ವಸ್ತ್ರದಾನ, ಅನ್ನದಾನ ಹಾಗೂ ಜ್ಞಾನದಾನಗಳನ್ನು ಮಾಡುವುದಕ್ಕೆ ವಿಶೇಷ ಮಹತ್ವವಿದೆ.

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

ಮೃತ್ಯುಪತ್ರವನ್ನು ತಯಾರಿಸಿ ತಮ್ಮ ಆಸ್ತಿಯನ್ನು ಒಬ್ಬರ ಹೆಸರಿಗೆ ಮಾಡುವುದಕ್ಕಿಂತ ಬದುಕಿರುವಾಗಲೇ ಆಸ್ತಿಯನ್ನು ಅರ್ಪಿಸುವುದು ಹೆಚ್ಚು ಅನುಕೂಲಕರವಾಗಿದೆ. ಏಕೆಂದರೆ ವ್ಯಕ್ತಿಯ ಮೃತ್ಯುವಿನ ನಂತರ ಅವರ ಮೃತ್ಯುಪತ್ರದಲ್ಲಿ ಉಲ್ಲೇಖಿಸಿದಂತೆ ಅವರು ಸತ್ ಕಾರ್ಯಕ್ಕೆ ಅರ್ಪಣೆ ಮಾಡಿದ ಆಸ್ತಿಯನ್ನು ಸನಾತನ ಸಂಸ್ಥೆಗೆ ದೊರಕಿಸಿಕೊಳ್ಳಲು ಮಾಡಬೇಕಾದ ಕಾನೂನುಬದ್ಧ ಮತ್ತು ನ್ಯಾಯಾಂಗ ಪ್ರಕ್ರಿಯೆಯು ಅತ್ಯಂತ ಜಟಿಲವಿದೆ.

ಲಖಿಸರಾಯ(ಬಿಹಾರ)ದಲ್ಲಿ ನಕ್ಸಲರಿಂದ ಅಪಹರಣಕ್ಕೊಳಗಾದ ಶೃಂಗಿಋಷಿ ಧಾಮ್‌ನ ಅರ್ಚಕರ ಹತ್ಯೆ

ಇಲ್ಲಿಂದ ಅಪಹರಿಸಲಾಗಿದ್ದ ಓರ್ವ ಆರ್ಚಕರನ್ನು ನಕ್ಸಲರು ಹತ್ಯೆ ಮಾಡಿದ್ದಾರೆ. ಆರ್ಚಕರ ಹೆಸರು ನೀರಜ ಝಾ ಎಂದಾಗಿದೆ. ನೀರಜ ಝಾ ಇವರು ಅಗಸ್ಟ್ ೨೨ ರಂದು ಪೂಜೆ ಮಾಡುತ್ತಿರುವಾಗಲೇ ನಕ್ಸಲರು ಅವರನ್ನು ಅಪಹರಿಸಿದರು. ನಂತರ ನಕ್ಸಲರು ನೀರಜ ಝಾ ಇವರ ಕುಟುಂಬದವರಲ್ಲಿ ೧ ಕೋಟಿ ರೂಪಾಯಿಗಳ ಒತ್ತೆ ಹಣವನ್ನು ಕೇಳಿದರು.

ಗಣೇಶೋತ್ಸವದ ಕಾಲಾವಧಿಯಲ್ಲಿ ವಿವಿಧ ಮಾಧ್ಯಮಗಳಿಂದ ಆಗುತ್ತಿರುವ ಶ್ರೀ ಗಣೇಶನ ವಿಡಂಬನೆಯನ್ನು ತಡೆಗಟ್ಟುವಲ್ಲಿ ಹಿಂದೂ ಜನಜಾಗೃತಿ ಸಮಿತಿಗೆ ದೊರೆತ ಯಶಸ್ಸು

ಗಣೇಶೋತ್ಸವದ ಕಾಲದಲ್ಲಿ ವಿವಿಧ ಮಾಧ್ಯಮಗಳಿಂದಾಗುವ ಶ್ರೀ ಗಣೇಶನ ವಿಡಂಬನೆಯನ್ನು ತಡೆಗಟ್ಟುವಲ್ಲಿ ಹಿಂದೂ ಜನಜಾಗೃತಿ ಸಮಿತಿಗೆ ಯಶಸ್ಸು ಸಿಕ್ಕಿದೆ. ಫ್ಲಿಪ್‌ಕಾರ್ಟ್, ಮ್ಯಾಕ್‌ಡೊನಾಲ್ಡ್ , ಹಾಗೂ ಮಧ್ಯಪ್ರದೇಶ ಸೈಬರ ಪೊಲೀಸರು ಚಿತ್ರಗಳ ಮಾಧ್ಯಮದಿಂದ ಮಾಡಿದ ಶ್ರೀ ಗಣೇಶನ ವಿಡಂಬನೆಯನ್ನು ಹಿಂದೂಗಳು ಸಂಘಟಿತರಾಗಿ ಕಾನೂನು ಮಾರ್ಗದಿಂದ ವಿರೋಧಿಸಿ ತಡೆಗಟ್ಟಿದರು.