ಹಿಂದುತ್ವನಿಷ್ಠ ನಾಯಕ ಭರತ್ ವೈಷ್ಣವ್ ಇವರ ಕೊಲೆ ಪ್ರಕರಣದಲ್ಲಿ ರಶೀದ್ ಖಾನ್ ಮತ್ತು ಅಮ್ಜದ್ ಸೈಯದ್‌ಬಂಧನ

ಹಿಂದುತ್ವನಿಷ್ಠ ನಾಯಕ ಭರತ್ ವೈ?ವ ಇವರನ್ನು ೨೭ ಮೇ ೨೦೨೦ ರಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಶೀದ್ ಖಾನ್ ಮತ್ತು ಅಮ್ಜದ್ ಸೈಯದ್ ಅವರನ್ನು ಬಂಧಿಸಲಾಗಿದೆ ಎಂದು ಸಾದಡಿ ಪೊಲೀಸ ಠಾಣೆಯ ಅಧಿಕಾರಿ ರವೀಂದ್ರ ಪ್ರತಾಪ ಸಿಂಗ್ ಮಾಹಿತಿಯನ್ನು ನೀಡಿದ್ದಾರೆ. ಆರೋಪಿಗಳಿಂದ ಬಂದೂಕು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಪಾಕಿಸ್ತಾನದಲ್ಲಿ ೩ ಅಪ್ರಾಪ್ತ ಹಿಂದೂ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ

ಪಾಕ್‌ನ ಸಿಂಧ ಪ್ರಾಂತ್ಯದಲ್ಲಿ ೩ ಅಪ್ರಾಪ್ತ ಹಿಂದೂ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸುವುದರ ಜೊತೆಗೆ ಅವರನ್ನು ಬಲವಂತವಾಗಿ ಮುಸ್ಲಿಂ ಯುವಕರನ್ನು ಮದುವೆಯಾಗುವಂತೆ ಮಾಡಿಸಿದ ಘಟನೆ ನಡೆದಿದೆ. ನ್ಯಾಯವಾದಿ ರಾಹತ್ ಆಸ್ಟಿನ್ ಇವರು ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಶಿವರಾಜ್ಯಾಭಿಷೇಕ ದಿನ ! ತಿಥಿ: ಜ್ಯೇಷ್ಠ ಶುಕ್ಲ ಪಕ್ಷ 13 (4.6.2020)

5 ಸುಲ್ತಾನರ ಜೊತೆ ಹೋರಾಡಿ, ಭಯೋತ್ಪಾದನೆಯನ್ನು ಕೊನೆಗೊಳಿಸಿ, ‘ಹಿಂದವೀ ಸ್ವರಾಜ್ಯ’ವನ್ನು ಸ್ಥಾಪಿಸಿದ ಛತ್ರಪತಿ !, ಭಯೋತ್ಪಾದನೆ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಛತ್ರಪತಿ ಶಿವರಾಯರಂತಹ ‘ಹಿಂದೂ ರಾಷ್ಟ್ರ’ದ ಸ್ಥಾಪನೆ ಮಾಡುವುದು ಅನಿವಾರ್ಯ !

ಪುಲ್ವಾಮಾದಲ್ಲಿ ಗುಂಡಿನ ಚಕಮಕಿಯಲ್ಲಿ ಜೈಶ್-ಎ-ಮೊಹಮ್ಮದ್‌ನ ಉಗ್ರರ ಹತ್ಯೆ

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಂಗನ್ ವಾನಪೊರಾ ಪ್ರದೇಶದಲ್ಲಿ ಜೂನ್ ೨ ರಂದು ಭಾರತೀಯ ಸೈನಿಕರ ಹಾಗೂ ‘ಜೈಶ-ಎ-ಮಹಮ್ಮದ’ನ ಭಯೋತ್ಪಾದಕರ ನಡುವೆ ತಡರಾತ್ರಿವರೆಗೆ ಗುಂಡಿನ ಚಕಮಕಿ ನಡೆಯುತ್ತಿತ್ತು. ಇದರಲ್ಲಿ ೩ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಈ ಕಾರ್ಯಾಚರಣೆಯನ್ನು ಕೇಂದ್ರ ರಾಜ್ಯ ರಿಸರ್ವ್ ಪೊಲೀಸ್ ಪಡೆ ಮತ್ತು ೫೫ ರಾಷ್ಟ್ರೀಯ ರೈಫಲ್ಸ್ ಜಂಟಿಯಾಗಿ ನಡೆಸಿದೆ.

ದೆಹಲಿಯಲ್ಲಿ ಬಿಜೆಪಿ ನಾಯಕನ ಹಾಡುಹಗಲೇ ಗುಂಡಿಕ್ಕಿ ಹತ್ಯೆ

ಪೂರ್ವ ದೆಹಲಿಯ ಪಶ್ಚಿಮ ವಿನೋದನಗರದಲ್ಲಿ ಬಿಜೆಪಿ ನಾಯಕ ರಾಹುಲ್ ಸಿಂಗ್ ಊರ್ಫ್ ಭೂರು ಸಿಂಗ್‌ನನ್ನು ಅಜ್ಞಾತರು ಗುಂಡಿಕ್ಕಿ ಕೊಂದಿದ್ದರು. ಜೂನ್ ೩ ರ ಬೆಳಿಗ್ಗೆ ರಾಹುಲ್ ಸಿಂಗ್ ಅವರು ವಾಯುವಿಹಾರಕ್ಕಾಗಿ ಹೊರಟಿದ್ದಾಗ ಮಯೂರ್ ಪಬ್ಲಿಕ್ ಸ್ಕೂಲ್ ಬಳಿ ಅಜ್ಞಾತರು ಅವರ ಮೇಲೆ ಆರು ಬಾರಿ ಗುಂಡುಗಳನ್ನು ಹಾರಿಸಿದರು.

ಉತ್ತರಪ್ರದೇಶದಲ್ಲಿ ಹಿಂದೂ ಹೆಸರನ್ನು ಇಟ್ಟುಕೊಂಡು ಹಿಂದೂ ಯುವತಿಯೊಂದಿಗೆ ಮದುವೆಯಾದ ಮತಾಂಧನಿಂದ ಆಕೆಯ ಬರ್ಬರ ಹತ್ಯೆ

ದೌರಾಲಾದ ಲಾಹಿಯಾ ಗ್ರಾಮದಲ್ಲಿ ಶಕೀಬ್ ಎಂಬ ಮತಾಂಧನು ಏಕತಾ ಎಂಬ ಹಿಂದೂ ಯುವತಿಯೊಂದಿಗೆ ಮದುವೆಯಾದನು. ನಂತರ ಅವಳ ಕುಟುಂಬದ ಸಹಾಯದಿಂದ ತಂಪು ಪಾನೀಯದಲ್ಲಿ ಮೂರ್ಛೆಯ ಔಷಧಿಯನ್ನು ನೀಡಲಾಯಿತು. ಆಕೆ ಪ್ರಜ್ಞೆ ತಪ್ಪಿದಾಗ ಅವಳ ದೇಹವನ್ನು ತುಂಡರಿಸಲಾಯಿತು. ಮೃತದೇಹದ ಕೈ, ಕಾಲುಗಳು ಮತ್ತು ತಲೆಯನ್ನು ಸರೋವರಕ್ಕೆ ಎಸೆದರೆ, ಮುಂಡವನ್ನು ಕಾಡಿನಲ್ಲಿ ಎಸೆಯಲಾಯಿತು.

ಅನಾನಸ್ ಮೂಲಕ ಪಟಾಕಿಯನ್ನು ತಿನ್ನಿಸಿದ ಪರಿಣಾಮ ಹೊಟ್ಟೆಯಲ್ಲಿ ಸ್ಫೋಟಗೊಂಡು ಗರ್ಭಿಣಿ ಆನೆಯನ್ನು ಒದ್ದಾಡುತ್ತಾ ಸಾವು

ಕೇರಳದ ಮಲಪ್ಪುರಂನಲ್ಲಿ ಕೆಲವು ನಿರ್ದಯ ಜನರು ಗರ್ಭಿಣಿ ಆನೆಗೆ ಪಟಾಕಿ ತುಂಬಿದ ಅನಾನಸ್ ಅನ್ನು ತಿನ್ನಿಸಿದ್ದರಿಂದ ಗರ್ಭದಲ್ಲಿ ಬೆಳೆಯುತ್ತಿರುವ ಮರಿಆನೆಯೊಂದಿಗೆ ಆ ಆನೆಯೂ ಸಾವನ್ನಪ್ಪಿದ ಘಟನೆ ಇತ್ತಿಚೆಗೆ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ಹಂಚಿಕೊಂಡಾಗ ಜನರು ಆಕ್ರೋಶಗೊಂಡರು.

‘ಇನ್‌ಕ್ವಿಝಿಶನ್ ಹೆಸರಿನಲ್ಲಿ ಗೋಮಾಂತಕರ ಮೇಲೆ ಮಿಶನರಿಗಳ ದೌರ್ಜನ್ಯ ವಿಷಯದ ಚಿತ್ರಪ್ರದರ್ಶನದ ಲೋಕರ್ಪಣೆ !

ಗೋವಾ ಇನ್‌ಕ್ವಿಝಿಶನ್ ಇತಿಹಾಸದ ದುರ್ಲಭ ಪುರಾವೆಯಾದ ‘ಹಾತ ಕಾತರೊ ಕಂಬವು ಹಳೆ ಗೋವಾದಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದೆ. ಈ ಕಂಬದ ಇತಿಹಾಸ ಪುರಾತತ್ವ ಖಾತೆಯಿಂದ ತೆಗೆದು ಹಾಕುವ ಷಡ್ಯಂತ್ರ ಈಗ ಪ್ರಾರಂಭವಾಗಿದೆ. ಈ ರೀತಿಯ ಕಂಬ ಗೋವಾದಲ್ಲಿ ಅಸ್ತಿತ್ವದಲ್ಲಿಯೇ ಇಲ್ಲವೆಂದು ಪುರಾತತ್ವ ಇಲಾಖೆ ಹೇಳುತ್ತಿದೆ. ‘ಹಾತ ಕಾತರೊ ಕಂಬ ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕು.

ಕೇರಳದ ಆಡಳಿತಾರೂಢ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ನಾಯಕನಿಂದ ಪೊಲೀಸ್ ಅಧಿಕಾರಿಗಳಿಗೆ ಜೀವಬೆದರಿಕೆ

ರಾಜ್ಯದ ಆಢಳಿತಾರೂಢ ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷದ (‘ಮಾಕಪ’ನ) ನಾಯಕನು ವಂದಿಪೇರಿಯಾರ್ ಪೊಲೀಸ್ ಠಾಣೆಯಲ್ಲಿ ಪೊಲೀಸರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಪ್ರಕರಣದಲ್ಲಿ ಮಾಕಪ ನ ಇಡುಕ್ಕಿ ಜಿಲ್ಲಾ ಸಚಿವಾಲಯದ ಸದಸ್ಯ ಆರ್. ಥಿಲಕನ್, ಪಿರಮೆದು ಪ್ರದೇಶ ಸಚಿವ ಜಿ. ವಿಜಯಾನಂದ ಮತ್ತು ರೆನಿಲ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ.

ಗುಜರಾತ್‌ನಲ್ಲಿ ಆಯುರ್ವೇದ ಚಿಕಿತ್ಸೆಯ ನಂತರ ಒಂದೂವರೆ ಸಾವಿರಕ್ಕೂ ಹೆಚ್ಚು ರೋಗಿಗಳು ಕೊರೋನಾದಿಂದ ಮುಕ್ತ !

ಕೊರೋನಾದ ಮೇಲಿನ ಲಸಿಕೆ ಜಗತ್ತಿನಲ್ಲಿ ಎಲ್ಲಿಯೂ ಲಭ್ಯವಿಲ್ಲದ ಕಾರಣ ರೋಗಿಗಳ ಮೇಲೆ ಪರಿಣಾಮಕಾರಿ ಚಿಕಿತ್ಸೆಗೆ ಇನ್ನೂ ಮಿತಿಗಳಿವೆ. ಆದ್ದರಿಂದ ಭಾರತದ ಗುಜರಾತ ಸರಕಾರವು ಕೊರೋನಾ ರೋಗಿಗಳಿಗೆ ಆಯುರ್ವೇದದ ಚಿಕಿತ್ಸೆ ನೀಡುತ್ತಿದೆ. ಗುಜರಾತ ಸರಕಾರ ಮೇ ೧೫ ರಿಂದ ಇಂತಹ ರೋಗಿಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಆಯುರ್ವೇದ ಚಿಕಿತ್ಸೆ ನೀಡಲು ಅನುಮತಿ ನೀಡಿದ ಮೇಲೆ ಉತ್ತಮ ಪರಿಣಾಮ ಕಂಡುಬರುತ್ತಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ.