ಕರ್ನಾಟಕ ‘ಇಸ್ಲಾಮಿಕ್ ದೇಶ ಆಗುತ್ತಿದೆಯೇ? – ಶೋಭಾ ಕರಂದ್ಲಾಜೆ ಪ್ರಶ್ನೆ

‘ತಬ್ಲಿಘಿಗಳಿಂದ ಶಿವಮೊಗ್ಗದಲ್ಲಿ ಕೊರೋನಾ ರೋಗಾಣುಗಳ ಸೋಂಕು ಹರಡಿತು’ ಎಂದು ಆರೋಪಿಸಿದ ಭಾಜಪದ ಸಂಸದೆ ಶೋಭಾ ಕರಂದ್ಲಾಜೆ ಇವರ ವಿರುದ್ಧ ‘ಅರೆಸ್ಟ್ ಶೋಭಾ’ ಎಂಬ ಟ್ವಿಟ್ಟರ್ ಅಭಿಯಾನ ನಡೆಸಲಾಗಿತ್ತು. ಅದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿ ‘ಕರ್ನಾಟಕ ಇಸ್ಲಾಮಿಕ್ ದೇಶ ಆಗುತ್ತಿದೆಯೇ?’ ಎಂದು ಪ್ರಶ್ನಿಸಿದ್ದಾರೆ.

ಚೀನಾದ ಹೆಚ್ಚುತ್ತಿರುವ ಕಿತಾಪತಿಗಳನ್ನು ತಡೆಗಟ್ಟಲು ಭಾರತದಿಂದ ಲಡಾಖ್ ನಲ್ಲಿ ಸೇನೆಯ ಹೆಚ್ಚುವರಿ ತುಕಡಿಗಳ ನೇಮಕ

ಭಾರತವು ಲಡಾಖನ ಡೆಮಚಾಕ್, ಚುಮಾರ, ದೌಲತ್ ಬೇಗ ಓಲ್ಡಿ ಹಾಗೂ ಗಾಲವಾನ ವ್ಯಾಲಿ ಈ ಪ್ರದೇಶಗಳಲ್ಲಿ ಸೇನೆಯ ಹೆಚ್ಚುವರಿ ತುಕಡಿಗಳನ್ನು ನೇಮಿಸಿದೆ. ಮೇ ತಿಂಗಳ ಮೊದಲನೇ ವಾರದಲ್ಲಿ ಲಡಾಖನ ಪ್ಯಾನಗಾಂಗ್‌ದಲ್ಲಿ ಭಾರತ ಮತ್ತು ಚೀನಾದ ಸೈನಿಕರಲ್ಲಿ ಪರಸ್ಪರ ಹೊಡೆದಾಟ ನಡೆದಿತ್ತು. ಆ ಸಮಯದಲ್ಲಿ ಎರಡೂ ದೇಶದ ಸೈನಿಕರು ಗಾಯಗೊಂಡಿದ್ದರು.

ಕತಾರ್‌ನಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದ ನಾಗರಿಕರಿಗೆ ೩ ವರ್ಷ ಸೆರೆಮನೆ ಶಿಕ್ಷೆ ಮತ್ತು ೪೧ ಲಕ್ಷ ರೂಪಾಯಿ ದಂಡ

ಕತಾರ್‌ನಲ್ಲಿನ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮುಖಕ್ಕೆ ಮಾಸ್ಕ್ ಧರಿಸದ ನಾಗರಿಕರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ೪೧ ಲಕ್ಷ ೭೦ ಸಾವಿರ ದಂಡ ವಿಧಿಸಲಾಗುವುದು. ಸಂಪೂರ್ಣ ಜಗತ್ತಿನಲ್ಲಿ ಇಲ್ಲಿಯವರೆಗೆ ಇಂತಹ ಶಿಕ್ಷೆಯನ್ನು ನೀಡುವ ನಿಯಮವನ್ನು ಯಾವುದೇ ದೇಶವು ಮಾಡಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯು ‘ಕೊರೋನಾದ ಸೋಂಕಿಗೆ ಮನುಷ್ಯರು ಹೇಗೆ ತುತ್ತಾದರು ?’ ಎಂಬುದನ್ನು ಪತ್ತೆ ಹಚ್ಚಬೇಕು. – ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಭಾರತದೊಂದಿಗೆ ೬೨ ಸದಸ್ಯ ರಾಷ್ಟ್ರಗಳ ಠರಾವು

‘ಪ್ರಾಣಿಗಳಿಂದ ಹರಡುವ ಕೊರೋನಾದ ರೋಗಾಣು ಮನುಷ್ಯರು ಹೇಗೆ ತುತ್ತಾದರು ?’, ಇದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯು ನಿಷ್ಪಕ್ಷಪಾತವಾಗಿ ಪತ್ತೆಹಚ್ಚಬೇಕೆಂಬ ಠರಾವನ್ನು ಈ ಸಂಘಟನೆಯ ಸದಸ್ಯರಾಗಿರುವ ೬೨ ದೇಶಗಳು ಒಪ್ಪಿಗೆ ನೀಡಿವೆ. ಈ ಠರಾವನ್ನು ಸಂಘಟನೆಯ ವಾರ್ಷಿಕ ಸಭೆಯಲ್ಲಿ ಮಂಡಿಸಲಾಗುವುದು.

‘ಟಿಕ್-ಟಾಕ್’ ನಲ್ಲಿನ ಚೀನಾವಿರೋಧಿ ವಿಷಯಗಳನ್ನು ತೆಗೆಯಬೇಕು ! – ಟಿಕ್-ಟಾಕ್ ‘ಅಪ್ಲಿಕೇಶನ್’ದಿಂದ ಭಾರತೀಯ ಸಿಬ್ಬಂದಿಗೆ ಆದೇಶ

ಚೀನಾ ಸರಕಾರದ ವಿರುದ್ಧವಾಗಿರುವ ಯಾವುದೇ ವಿಷಯಗಳನ್ನು ಟಿಕ್-ಟಾಕ್ ಆಪ್‌ನಲ್ಲಿ ಪೋಸ್ಟ್ ಮಾಡದಂತೆ ‘ಟಿಕ್-ಟಾಕ್’ ವತಿಯಿಂದ ಭಾರತದಲ್ಲಿರುವ ತನ್ನ ಉದ್ಯೋಗಿಗಳಿಗೆ ಆದೇಶ ನೀಡಲಾಗಿದೆ. ಈ ವಿಷಯದಲ್ಲಿ ವಿ-ಅಂಚೆಯ ಮಾಹಿತಿಯು ಬಹಿರಂಗವಾದ ನಂತರ ಈ ಪ್ರಕರಣವು ಬೆಳಕಿಗೆ ಬಂದಿದೆ. ಆದ್ದರಿಂದ, ಇಂದು ಟಿಕ್-ಟಾಕ್ ಬಳಸದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ನುಸುಳುಖೋರ ರೋಹಿಂಗ್ಯಾ ಮುಸಲ್ಮಾನರಿಂದ ದೆಹಲಿಯಲ್ಲಿ ೫.೨ ಎಕರೆ ಭೂಮಿಯ ಮೇಲೆ ಅತಿಕ್ರಮಣ

ದೆಹಲಿಯ ಮದನಪುರ ಖಾದರ ಪ್ರದೇಶದಲ್ಲಿ ನುಸುಳುಖೋರ ರೋಹಿಂಗ್ಯಾ ಮುಸಲ್ಮಾನರು ೫.೨ ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆ. ದೆಹಲಿ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಮತ್ತು ಆಮ್ ಆದ್ಮಿ ಪಕ್ಷದ ಹಾಲಿ ಶಾಸಕರಾದ ಅಮಾನತುಲ್ಲಾ ಖಾನ್ ಈ ಎಲ್ಲ ನುಸುಳುಖೋರ ರೋಹಿಂಗ್ಯಾದವರಿಗೆ ಆಧಾರ ಕಾರ್ಡ್‌ಗಳನ್ನು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಸಂಚಾರ ನಿಷೇಧದ ಸಮಯದಲ್ಲಿ ಧ್ವನಿವರ್ಧಕದಿಂದ ಅಜಾನ್ ಕೂಗುವುದರ ನಿಷೇಧ ಸೂಕ್ತ ! – ಅಲಹಾಬಾದ್ ಉಚ್ಚ ನ್ಯಾಯಾಲಯ

ಧ್ವನಿವರ್ಧಕ ಮೇಲಿನ ನಿಷೇಧವನ್ನು ಗಾಜಿಪುರದ ಬಹುಜನ ಸಮಾಜ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ ವಿರೋಧಿಸಿದ್ದರು. “ರಂಜಾನ್ ಸಮಯದಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕಗಳಿಂದ ಅಜಾನ್ ಕೊಡದಿರುವುದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅವರು ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು ಇದರಲ್ಲಿ ಹಸ್ತಕ್ಷೇಪವನ್ನು ಮಾಡಬೇಕೆಂದು ಆಗ್ರಹಿಸಿದ್ದರು.

ಭೋಪಾಲ್‌ನಲ್ಲಿ ೬೦ ಕ್ಕೂ ಹೆಚ್ಚು ವಿದೇಶಿ ತಬಲಿಗೀಗಳ ಬಂಧನ

ವೀಸಾ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ತಬಲಿಗೀ ಜಮಾಅತ್‌ನ ನಿಜಾಮುದ್ದೀನ್ ಮಾರ್ಕಜ್‌ನಲ್ಲಿ ಭಾಗವಹಿಸಿದ ೬೦ ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಭೋಪಾಲನ ವಿವಿಧ ಪೊಲೀಸ ಠಾಣೆಗಳಲ್ಲಿ ಅವರ ವಿರುದ್ಧ ಏಳು ಅಪರಾಧಗಳು ದಾಖಲಾಗಿವೆ.

ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ವಿರುದ್ಧದ #BoycottHalalProduct ಈ ‘ಟ್ರೆಂಡ್’ ‘ರಾಷ್ಟ್ರೀಯ ಟ್ರೆಂಡ್’ನಲ್ಲಿ ಎರಡನೇ ಸ್ಥಾನ !

ಜಗತ್ತಿನ ಕಟ್ಟರ್ ಸಮುದಾಯವು ಪ್ರತಿಯೊಂದು ಆಹಾರ ಪದಾರ್ಥ ಅಥವಾ ವಸ್ತುಗಳು ಇಸ್ಲಾಂ ಪ್ರಕಾರ ಮಾನ್ಯತೆ ಪಡೆದ ಅಂದರೆ ‘ಹಲಾಲ್’ ಇರುವುದನ್ನು ಒತ್ತಾಯಿಸುತ್ತಿದೆ. ಇದಕ್ಕಾಗಿ ಆಹಾರ ಪದಾರ್ಥ ಅಥವಾ ವಸ್ತುಗಳ ಮಾರಾಟಕ್ಕೆ ‘ಹಲಾಲ್ ಪ್ರಮಾಣಪತ್ರ’ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಹಿಂದೆ ಇದು ಮಾಂಸಾಹಾರಕ್ಕೆ ಮಾತ್ರ ಸೀಮಿತವಾಗಿತ್ತು;

ಅಲಿಗಡ್ (ಉತ್ತರ ಪ್ರದೇಶ)ದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಗೋ ಕಳ್ಳರನ್ನು ಬಿಡಿಸಿದ ಮತಾಂಧರು

ಇಲ್ಲಿನ ಕಾಸಿಮ್ ನಗರದಲ್ಲಿ, ಗೋ ಕಳ್ಳರನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಕಾಸೀಮ್ ಬಾಬಾ ಮಸೀದಿ ಬಳಿಯ ಮತಾಂಧರು ಹಲ್ಲೆ ನಡೆಸಿದರು. ಪೊಲೀಸರು ಕೆಲವು ಕಳ್ಳಸಾಗಾಣಿಕೆದಾರರನ್ನು ಸಹ ಹಿಡಿದಿದ್ದರು; ಆದರೆ ಮತಾಂಧರು ಪೊಲೀಸರ ಮೇಲೆ ಹಲ್ಲೆ ನಡೆಸಿ ಕಳ್ಳಸಾಗಾಣಿಕೆದಾರರನ್ನು ಬಿಡಿಸಿದರು ಹಾಗೂ ತಪ್ಪಿಸಿಕೊಳ್ಳಲು ಸಹಾಯ ಮಾಡಿದರು.