ಅನಂತನಾಗ (ಜಮ್ಮು-ಕಾಶ್ಮೀರ) ಭಯೋತ್ಪಾದಕರೊಂದಿಗೆ ಚಕಮಕಿ, ಒಟ್ಟು ೫ ಅಧಿಕಾರಿ ಮತ್ತು ಸೈನಿಕರು ವೀರಮರಣ

  • ಇನ್ನೂ ಘರ್ಷಣೆ ಮುಂದುವರಿಕೆ !

  • ಗುಡ್ಡಗಾಡಿನಲ್ಲಿ ೨ – ೩ ಭಯೋತ್ಪಾದಕರು ಅಡಗಿದ್ದಾರೆ !

ಅನಂತನಾಗ (ಜಮ್ಮು-ಕಾಶ್ಮೀರ) – ಇಲ್ಲಿ ಎರಡು ದಿನಗಳಿಂದ ಜಿಹಾದಿ ಭಯೋತ್ಪಾದಕರ ಜೊತೆಗೆ ನಡೆಯುತ್ತಿರುವ ಚಕಮಕಿಯಲ್ಲಿ ಕರ್ನಲ್ ಮನಪ್ರೀತಿ ಸಿಂಹ, ಮೇಜರ್ ಆಶಿಷ ಧೋನಚಕ, ಪೊಲೀಸ ಅಧಿಕಾರಿ ಹುಮಾಯು ಭಟ ಮತ್ತು ಇಬ್ಬರು ಸೈನಿಕರು ವೀರಗತಿ ಹೊಂದಿದರು. ಇಲ್ಲಿಯವರೆಗೆ ೨ ಭಯೋತ್ಪಾದಕರನ್ನು ಕೊಲ್ಲಲಾಗಿದ್ದೂ ಇನ್ನೂ ಅಲ್ಲಿಯ ಗುಡ್ಡುಗಾಡಿನಲ್ಲಿ ೨ -೩ ಭಯೋತ್ಪಾದಕರು ಅಡಗಿದ್ದು ಸೇನೆಯು ಅವರನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಲಷ್ಕರೇ ಏ ತೊಯ್ಬಾ ಗೆ ಸಂಬಂಧಿತ ಸಂಘಟನೆ ‘ರೆಜಿಸ್ಟನ್ಸ್ ಫ್ರಂಟ್’ ಈ ಸಂಘಟನೆ ದಾಳಿಯ ಹೊಣೆ ಸ್ವೀಕರಿಸಿದೆ. ಅಧಿಕಾರಿಗಳ ಅಭಿಪ್ರಾಯದಲ್ಲಿ ಆಗಸ್ಟ್ ೪ ರಂದು ಕುಲಗಾಮ ಕಾಡಿನಲ್ಲಿ ಭಯೋತ್ಪಾದಕರೊಂದಿಗೆ ನಡೆದಿರುವ ಚಕಮಕಿಯಲ್ಲಿ ಮೂರು ಸೈನಿಕರು ಹುತಾತ್ಮರಾಗಿದ್ದರು ಇವರು ಅದೇ ಭಯೋತ್ಪಾದಕರಾಗಿದ್ದಾರೆ.

ಕಾಶ್ಮೀರದಲ್ಲಿ ಕಳೆದ ೩ ವರ್ಷಗಳಲ್ಲಿನ ಇದು ಎಲ್ಲಕ್ಕಿಂತ ದೊಡ್ಡದಾಳಿ ಆಗಿದೆ. ಈ ಹಿಂದೆ ಮಾರ್ಚ್ ೩೦, ೨೦೨೦ ರಂದು ಕಾಶ್ಮೀರದಲ್ಲಿನ ಹಂದವಾಡದಲ್ಲಿ ೧೮ ಗಂಟೆ ನಡೆದಿರುವ ಚಕಮಕಿಯಲ್ಲಿ ಕರ್ನಲ್, ಮೇಜರ್ ಮತ್ತು ಸಬ್ ಇನ್ಸ್ಪೆಕ್ಟರ್ ಸಹಿತ ೫ ಅಧಿಕಾರಿಗಳು ಹುತಾತ್ಮರಾಗಿದ್ದರು. ಈ ವರ್ಷ ಜನವರಿಯಿಂದ ಜಮ್ಮು ಕಾಶ್ಮೀರದಲ್ಲಿ ೪೦ ಭಯೋತ್ಪಾದಕರು ಹತರಾಗಿದ್ದಾರೆ. ಅದರಲ್ಲಿನ ಕೇವಲ ೮ ಜನರು ಸ್ಥಳೀಯರಾಗಿದ್ದು ಉಳಿದಿರುವವರು ವಿದೇಶಿಯರಾಗಿದ್ದಾರೆ.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿ ಪ್ರತಿವರ್ಷ ೧೦೦ ಕ್ಕೂ ಹೆಚ್ಚಿನ ಭಯೋತ್ಪಾದಕರು ಹತರಾಗುತ್ತಾರೆ, ಆದರೂ ಕೂಡ ಅಲ್ಲಿಯ ಭಯೋತ್ಪಾದನೆ ಬೇರುಸಹಿತ ನಾಶವಾಗಿಲ್ಲ. ಅದಕ್ಕಾಗಿ ಭಯೋತ್ಪಾದಕ ನಿರ್ಮಾಣ ಮಾಡುವ ಪಾಕಿಸ್ತಾನವನ್ನೇ ನಾಶ ಮಾಡುವುದು ಆವಶ್ಯಕವಾಗಿದೆ. ಹಾಗೂ ಕಾಶ್ಮೀರದಲ್ಲಿನ ಜಿಹಾದಿ ಮಾನಸಿಕತೆ ಇರುವವರ ಮೇಲೆ ಅಂಕುಶ ಇಡುವುದು ಆವಶ್ಯಕವಾಗಿದೆ !