ಅರವತ್ತರ ಅರಳು ಮರಳು ಅಲ್ಲ ‘ಹಿಂದೂ ದ್ವೇಷ’

ಮುಂಬೈನ ದಾದರ್‌ನಲ್ಲಿರುವ ಮುಂಬೈ ಮರಾಠಿ ಗ್ರಂಥ ಸಂಗ್ರಹಾಲಯದ ವತಿಯಿಂದ ನಡೆದ ಬೆಳ್ಳಿಹಬ್ಬದ ಸಮಾರೋಪ ಸಮಾರಂಭದಲ್ಲಿ ಜ್ಞಾನಪೀಠ ಪುರಸ್ಕೃತ ಮತ್ತು ಲೇಖಕ ಭಾಲಚಂದ್ರ ನೆಮಾಡೆಯವರು ಔರಂಗಜೇಬನನ್ನು ವೈಭವೀಕರಿಸುವುದರೊಂದಿಗೆ ಸತಿಪದ್ಧತಿ ಮತ್ತು ಪೇಶ್ವೆಯವರ ವಿಷಯದಲ್ಲಿ ತಪ್ಪು ಮಾಹಿತಿಯನ್ನು ನೀಡಿ ಬುದ್ಧಿ ಭ್ರಷ್ಟರಾಗಿದ್ದಾರೆ. ಭಾಲಚಂದ್ರ ನೆಮಾಡೆಯವರು ಮಾತನಾಡಿ, ‘ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಔರಂಗಜೇಬ್, ಜ್ಞಾನವಾಪಿ ಮಸೀದಿಯಂತಹ ವಿಷಯಗಳ ಕುರಿತು ರಾಜಕೀಯ ನಡೆಯುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ನೈಜ ಇತಿಹಾಸವನ್ನು ಓದುವ ಆವಶ್ಯಕತೆಯಿದೆ. ಕಾಶಿ ವಿಶ್ವೇಶ್ವರನ ದರ್ಶನಕ್ಕೆ ಹೋಗಿದ್ದ ಚಕ್ರವರ್ತಿ ಔರಂಗಜೇಬನ 2 ಹಿಂದೂ ರಾಣಿಯರನ್ನು ಅಲ್ಲಿನ ಹಿಂದೂ ಪುರೋಹಿತರು ಭ್ರಷ್ಟಗೊಳಿಸಿದ್ದರು. ಇದನ್ನು ಅರ್ಥಮಾಡಿಕೊಂಡ ಔರಂಗಜೇಬನು ಕಾಶಿ ವಿಶ್ವೇಶ್ವರನನ್ನು ಧ್ವಂಸಗೊಳಿಸಿದನು. ಇತಿಹಾಸದಲ್ಲಿ ಔರಂಗಜೇಬನನ್ನು ಹಿಂದುದ್ವೇಷಿ ಎಂದು ಕರೆಯಲಾಯಿತು; ಆದರೆ ಅವನ ಸೇನೆಯಲ್ಲಿ ಶೇಕಡ 50ಕ್ಕಿಂತ ಅಧಿಕ ಜನರು ಹಿಂದೂಗಳಿದ್ದರು. ಇಷ್ಟೇ ಅಲ್ಲ, ಸತಿ ಪದ್ಧತಿಯನ್ನು ನಿಲ್ಲಿಸಿದ ಮೊದಲ ರಾಜ ಔರಂಗಜೇಬ್! ಎರಡನೇ ಬಾಜಿರಾವನನ್ನು ಹೊರತು ಪಡಿಸಿದರೆ, ಉಳಿದ ಪೇಶ್ವೆಗಳು ನೀಚರಾಗಿದ್ದರು ಎಂದು ಹೇಳಿದ್ದಾರೆ. ನೇಮಾಡೆ ಅವರ ಈ ಹೇಳಿಕೆಗೆ ಎಲ್ಲ ಕಡೆಗಳಿಂದಲೂ ಟೀಕೆಗಳ ಸುರಿಮಳೆಗಳಾಗುತ್ತಿವೆ ಮತ್ತು ಅನೇಕ ಸ್ತರಗಳಲ್ಲಿ ಅವರ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ನೆಮಾಡೆ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯ ಸಚಿವ ಗಿರೀಶ್ ಮಹಾಜನ್ ಅವರು ಮಾತನಾಡಿ, “ಅವರಿಗೆ ವಯಸ್ಸಾಗಿದ್ದು, ಅವರು ತಪ್ಪು ಇತಿಹಾಸವನ್ನು ಹೇಳುತ್ತಿದ್ದಾರೆ. ಇದು ಸಹನೆಯ ಪರಾಕಾಷ್ಠೆಯಾಗಿದೆ. ವಯಸ್ಸಿಗೆ ಅನುಗುಣವಾಗಿ ಏನು ಬೇಕಾದರೂ ಮಾತನಾಡಬಹುದೆಂದು ಅಂದುಕೊಂಡಿದ್ದಾರೆ’, ಎಂದು ಹೇಳಿದ್ದಾರೆ. ಶಿವಸೇನಾ ಶಿಂಧೆ ಗುಂಪಿನ ವಕ್ತಾರ ಸಂಜೀವ್ ಭೋರ್ ಪಾಟೀಲ್ ನೇಮಾಡೆಯವರ ಹೇಳಿಕೆಯನ್ನು ಖಂಡಿಸಿದ್ದಾರೆ. ಈ ಹಿಂದೆ ನೇಮಾಡೆಯವರು ` ಮೊಘಲ್ ಚಕ್ರವರ್ತಿ ಅಕ್ಬರ್ ಹಿಂದೂ ಆಗಿದ್ದನು. ಈಗ ಧರ್ಮ ಮತ್ತು ರಾಷ್ಟ್ರ ಈ 2 ಪರಿಕಲ್ಪನೆಗಳು ನಾಶವಾಗಬೇಕು. ಇಲ್ಲದೆ ಹೋದರೆ ಜಗತ್ತು ಉದ್ಧಾರವಾಗುವುದಿಲ್ಲ’ ಎಂಬ ಅರ್ಥಹೀನ ಹೇಳಿಕೆಯನ್ನು ನೀಡಿದ್ದರು.

ನೆಮಾಡೆಯವರು ಮಾಡಿರುವ ಅರ್ಥಹೀನ ಭಾಷಣಗಳನ್ನು ಗಮನಿಸಿದರೆ, ಅವರಿಗೆ ಯಾವ ಆಧಾರದಲ್ಲಿ ಜ್ಞಾನಪೀಠ ಪ್ರಶಸ್ತಿ ದೊರಕಿದೆ ಎಂಬುದನ್ನು ಸಂಶೋಧಿಸಬೇಕಾಗಿದೆ. ಒಬ್ಬ ವ್ಯಕ್ತಿಗೆ ವಯಸ್ಸಾದ ಬಳಿಕ ಅಂದರೆ 60 ವರ್ಷಗಳ ನಂತರ ಅರಳು ಮರಳು ಉಂಟಾಗಿ ಮಾನಸಿಕ ಸಮತೋಲನ ಹದಗೆಡುತ್ತದೆ. ಹಾಗಾಗಿ ಆ ವ್ಯಕ್ತಿ ಮನಸ್ಸಿಗೆ ತೋಚಿದ್ದನ್ನೆಲ್ಲ ಬಡಬಡಿಸುತ್ತಲೇ ಇರುತ್ತಾನೆ. ಅಂತಹ ವ್ಯಕ್ತಿಯ ಅದೇ ರೀತಿ ಮಾತನಾಡುವುದನ್ನು ಮುಂದುವರಿಸಿದರೆ, ಅವನ ಮನೆಯ ಜನರು ` ಅರವತ್ತರ ಅರಳು ಮರಳು’ ಎಂದು ಅವನನ್ನು ನಿರ್ಲಕ್ಷಿಸುತ್ತಾರೆ. ಭಾಲಚಂದ್ರ ನೇಮಾಡೆ ಅವರಿಗೂ ವಯಸ್ಸಾಗಿದ್ದು, ತಪ್ಪು ಇತಿಹಾಸವನ್ನು ವಿಚಿತ್ರವಾಗಿ ನಿರೂಪಿಸಿ ಸಮಾಜದ ಜನರ ದಾರಿ ತಪ್ಪಿಸುತ್ತಿದ್ದಾರೆ. ಲಕ್ಷಾಂತರ ಹಿಂದೂಗಳನ್ನು ಕೊಂದು ಸಾವಿರಾರು ದೇವಸ್ಥಾನಗಳನ್ನು ಧ್ವಂಸಗೊಳಿಸಿದ, ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಔರಂಗಜೇಬ್ ಹಿಂದೂಗಳಿಗೆ ಮಾದರಿಯಾಗಲು ಸಾಧ್ಯವೇ ಇಲ್ಲ. ಅವನು ಸತಿ ಪದ್ಧತಿಯನ್ನು ನಿಲ್ಲಿಸಿದನು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲದಿರುವಾಗಲೂ ಯಾವುದೇ ಹಿಂಜರಿಕೆಯಿಲ್ಲದೇ ಮೇಲಿನಂತೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ಪೇಶ್ವೆ ಮರಾಠಾ ಸಾಮ್ರಾಜ್ಯದ ಪ್ರಧಾನ ಮಂತ್ರಿಯಾಗಿದ್ದರು. ಸಾಮ್ರಾಜ್ಯದ ಅಂತಿಮ ಘಟ್ಟದಲ್ಲಿ, ಪೇಶ್ವೆಗಳು ಸಾಮ್ರಾಜ್ಯದ ಆಡಳಿತಗಾರರಾಗಿದ್ದರು. ಶ್ರೀವರ್ಧನಕರ್ ಭಟ್ ಕುಟುಂಬದ ಪೇಶ್ವೆಗಳು ನಾಗರಿಕ ಮತ್ತು ಮಿಲಿಟರಿ ರಂಗ ಎರಡರಲ್ಲಿಯೂ ಅಪ್ರತಿಮ ಸಾಧನೆಯನ್ನು ತೋರಿದ್ದರು. ಅವರ ಪರಾಕ್ರಮವನ್ನು ಮನಗಂಡು, ಜನರು ಅವರಿಗೆ ‘ಶ್ರೀಮಂತ್’ (ಪ್ರಶಸ್ತಿ) ಎಂಬ ಬಿರುದನ್ನು ನೀಡಿದ್ದರು. ಪೇಶ್ವೆಗಳು ಛತ್ರಪತಿಯ ನಿಷ್ಠಾವಂತ ಸೇವಕರಾಗಿದ್ದರು. ಹೀಗಿರುವಾಗ ನೇಮಾಡೆ ಪೇಶ್ವೆಯವರ ಬಗ್ಗೆ ಇಂತಹ ಕೀಳು ಮಟ್ಟದ ಹೇಳಿಕೆ ನೀಡುವುದು ಅವರಂತಹ ಸಾಹಿತಿಗಳಿಗೆ ಶೋಭಿಸುವುದಿಲ್ಲ. ಕಾಶಿ ವಿಶ್ವನಾಥನ ದೇವಸ್ಥಾನವನ್ನು ಕೆಡವಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ. ಪುರಾತತ್ವ ಇಲಾಖೆಗೆ ನೈಜ ಶಿವಲಿಂಗವು ಮಸೀದಿಯ ಮುಖ್ಯ ಗುಮ್ಮಟದ ಅಡಿಯಲ್ಲಿದೆ ಎಂಬುದಕ್ಕೆ ದಾಖಲೆಗಳು ಲಭಿಸಿವೆ. ನೆಮಾಡೆ ಈ ವಿಷಯಗಳನ್ನು ಏಕೆ ಹೇಳುವುದಿಲ್ಲ? ಕೇವಲ ಹಿಂದೂ ಧರ್ಮದ ದ್ವೇಷದಿಂದ ನೇಮಾಡೆ ಅವರು ಈ ವಿಷಯದ ಬಗ್ಗೆ ಚಕಾರವನ್ನೂ ಎತ್ತುತ್ತಿಲ್ಲ. ಬದಲಿಗೆ ರಾಜಕೀಯ ನಡೆಯುತ್ತಿದೆ ಎಂದು ಸಾರಾಸಗಟು ಸುಳ್ಳು ಹೇಳುತ್ತಿದ್ದಾರೆ.

ಸಮಾಜದ ದಿಕ್ಕು ತಪ್ಪಿಸುವ ನೆಮಾಡೆ!

ಭಾಲಚಂದ್ರ ನೆಮಾಡೆ

ಇದಕ್ಕೂ ಮುನ್ನ ಭಾಲಚಂದ್ರ ನೇಮಾಡೆ ಅವರು ಬರೆದ ಕಾದಂಬರಿಯೊಂದರಲ್ಲಿ’ ಬಂಜಾರ ಸಮುದಾಯ ಹಾಗೂ ಇತರೆ ಹಿಂದುಳಿದ ಸಮುದಾಯದ ಮಹಿಳೆಯರ ಬಗ್ಗೆ ಅಶ್ಲೀಲ ಹಾಗೂ ಅಸಭ್ಯ ಬರಹಗಳಿರುವ ಕಾರಣದಿಂದ ಅವರ ಕಾದಂಬರಿಯ ಮಾರಾಟವನ್ನು ನಿಷೇಧಿಸಬೇಕು, ಮುದ್ರಣವನ್ನು ಸ್ಥಗಿತಗೊಳಿಸಬೇಕು ಎಂದು ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸಿದರು. ಇದರಿಂದ ಸಮಾಜದಲ್ಲಿ ನೆಮಾಡೆಯವರಿಗೆ ಎಷ್ಟು (ಕು) ಖ್ಯಾತಿ ಇದೆ ಎನ್ನುವುದು ತಿಳಿಯುತ್ತದೆ. ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನದ ಸಂಸ್ಥಾಪಕ ಪೂ. ಸಂಭಾಜಿ ಭಿಡೆ (ಗುರೂಜಿ) ಅವರು ಮೋಹನ್‌ದಾಸ್ ಗಾಂಧಿಯವರ ಬಗ್ಗೆ ನೀಡಿದ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಪಕ್ಷ ಸೇರಿದಂತೆ ಬಂಡಾಯ ಜನರು ಸಮಾಜದಲ್ಲಿ ದೊಡ್ಡ ಸಂಚಲನವನ್ನು ಉಂಟುಮಾಡಿದರು. ವಾಸ್ತವವಾಗಿ ಗಾಂಧಿ ಬಗ್ಗೆ ಪೂ.ಭಿಡೆಗುರೂಜಿಯವರ ಹೇಳಿಕೆ ತಪ್ಪೋ ಸರಿಯೋ? ಇದನ್ನು ನಿರ್ಧರಿಸುವ ಹಕ್ಕು ನ್ಯಾಯಾಲಯಕ್ಕೆ ಇದೆ. ಅದರಲ್ಲಿ ಇತರರು ಏಕೆ ಮೂಗು ತೂರಿಸಬೇಕು? ಕಳೆದ ವರ್ಷ ‘ಫ್ರಾಕ್ಚರ್ಡ್ ಫ್ರೀಡಂ’ ಪುಸ್ತಕಕ್ಕೆ ನೀಡಿದ ಪ್ರಶಸ್ತಿಯನ್ನು ಹಿಂಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವಾಗ ಭಾಲಚಂದ್ರ ನೇಮಾಡೆ ಅವರು `ನ್ಯಾಶನಲಿಜಂ’ ಕಾರಣದಿಂದ (ರಾಷ್ಟ್ರವಾದದ ಕಾರಣದಿಂದ) ಬಹಳ ಹಾನಿಯಾಗುತ್ತಿದೆ ‘ಎಂದು ಹೇಳಿದ್ದರು. ರಾಷ್ಟ್ರದ ಗಡಿಗಳು ಅಳಿಸಿಹೋಗಿ ಇಡೀ ವಿಶ್ವವೇ ಒಂದಾಗಬೇಕು’ ಎನ್ನುವುದು ಅವರ ಮಾತಿನ ತಾತ್ಪರ್ಯವಾಗಿತ್ತು. ‘ಇಡೀ ಜಗತ್ತು ನನ್ನದು ಎಂದು ನಂಬುವುದು ‘ ಒಂದು ವಿಭಿನ್ನ ಕಲ್ಪನೆಯಾಗಿದೆ. ಹಾಗೆಯೇ ‘ಪ್ರಖರ ದೇಶಭಕ್ತಿ’ ಎನ್ನುವುದು ಒಂದು ವಿಭಿನ್ನ ಪರಿಕಲ್ಪನೆಯಾಗಿದೆ . ಜಗತ್ತನ್ನು ಪ್ರೀತಿಸುವಾಗಲೂ `ರಾಷ್ಟ್ರ ಮೊದಲು’ ಎನ್ನುವ ಭೂಮಿಕೆ ಎಂದಿಗೂ ಇರಲೇಬೇಕಲ್ಲವೇ? ಪ್ರತಿನಿತ್ಯ ಅಕ್ಕಪಕ್ಕದ ರಾಷ್ಟ್ರಗಳಿಂದ ನುಸುಳುವಿಕೆಗಳು ನಡೆಯುತ್ತಿರುವಾಗ ಮೇಲಿನ ಹೇಳಿಕೆಗಳನ್ನು ನೀಡುವುದು ಅಪಮಾನಕಾರಕವಾಗಿದೆ. ಮಾವೋವಾದಿಗಳ ಪುಸ್ತಕಕ್ಕೆ ಪ್ರಶಸ್ತಿ ರದ್ದುಗೊಳಿಸಿರುವ ವಿಷಯದ ಕುರಿತು ಪ್ರತಿಕ್ರಿಯಿಸಿದ ನೆಮಾಡೆ, “ನಾವು ಕೃತಘ್ನರನ್ನು ಆಯ್ಕೆ ಮಾಡುತ್ತೇವೆ” ಎಂದು ಹೇಳಿದರು, ಹಲವಾರು ನಕ್ಸಲ್ ದಾಳಿಗಳಿಗೆ ಸಂಚು ರೂಪಿಸಿದ ಆರೋಪಿತ ಲೇಖಕರ ಪುಸ್ತಕದ ಅನುವಾದವನ್ನು ಸರ್ಕಾರವು ನಿಷೇಧಿಸಿರುವುದು ನೇಮಾಡರಿಗೆ ಆಕ್ಷೇಪಾರ್ಹವೆನಿಸುತ್ತದೆ; ಅಂದರೆ ನಕ್ಸಲೀಯರನ್ನು ತಿರಸ್ಕರಿಸುವ ಸರಕಾರದ ‘ರಾಷ್ಟ್ರೀಯತೆ’ ನೆಮಾಡೆಯವರಿಗೆ ಬೇಕಾಗಿಲ್ಲ. ನೆಮಾಡೆ ಅವರು ಚೀನಾದ ಬಡ ಜನರ ಬಗ್ಗೆ ಸಹಾನುಭೂತಿ ಹೊಂದಿದ್ದರು ಮತ್ತು ‘ಚೀನಾ ದೇಶ ನಮ್ಮ ಶತ್ರುವಲ್ಲ, ಚೀನಾ ಸರ್ಕಾರ ನಮ್ಮ ಶತ್ರು’ ಎಂದು ಮತ್ತೊಂದು ತಪ್ಪು ಹೇಳಿಕೆ ನೀಡಿದ್ದರು. ನೇಮಾಡೆಯಂತಹ ಸಾಹಿತಿಗಳು ಸಮಾಜದಲ್ಲಿ ಬದುಕುತ್ತಿರುವ ಕಾರಣ ದೇಶದ ನಿಜವಾದ ಇತಿಹಾಸ ಕಣ್ಮರೆಯಾಗಿ ದಾರಿ ತಪ್ಪಿಸುವ ಇತಿಹಾಸವನ್ನು ಕಲಿಸಲಾಗುತ್ತಿದೆ. ಇದನ್ನು ತಡೆಯಲು ರಾಷ್ಟ್ರಪ್ರೇಮಿ ಲೇಖಕರು ಮತ್ತು ಹಿಂದುತ್ವವಾದಿಗಳು ಮುಂದಾಳತ್ವ ವಹಿಸುವ ಆವಶ್ಯಕತೆಯಿದೆ.

ಭಾಲಚಂದ್ರ ನೇಮಾಡೆ ಅವರಂತಹ ಹಿಂದೂವಿರೋಧಿ ಲೇಖಕರನ್ನು ರಾಷ್ಟ್ರಪ್ರೇಮಿ ಲೇಖಕರು / ಸಾಹಿತಿಗಳು ಮತ್ತು ಹಿಂದುತ್ವನಿಷ್ಠರು ತಡೆಯಬೇಕು.