ಕೇದಾರನಾಥ ದೇವಸ್ಥಾನದ ಪರಿಸರದಲ್ಲಿ ಮೊಬೈಲ್ ಬಳಕೆ ನಿರ್ಬಂಧ !

ಕೇದಾರನಾಥ (ಉತ್ತರಾಖಂಡ) – ಕೇದಾರನಾಥ ದೇವಸ್ಥಾನದ ಪರಿಸರದಲ್ಲಿ ಈಗ ಮೊಬೈಲ್ ಬಳಕೆಯ ಮೇಲೆ ನಿರ್ಬಂಧ ಹೆರಲಾಗಿದೆ. ಈ ನಿರ್ಣಯವನ್ನು ಬದ್ರಿ-ಕೇದಾರನಾಥ ದೇವಸ್ಥಾನ ಸಮಿತಿಯು ತೆಗೆದುಕೊಂಡಿದೆ. ಆದುದರಿಂದ ಇಲ್ಲಿ ಮೊಬೈಲ್ ನ ಮೂಲಕ ಛಾಯಾಚಿತ್ರಗಳನ್ನು ತೆಗೆಯುವುದು, ವಿಡಿಯೋ ನಿರ್ಮಿಸುವುದರ ಮೇಲೆ ನಿರ್ಬಂಧವಿರಲಿದೆ. ಕೆಲವು ದಿನಗಳ ಹಿಂದೆ ಓರ್ವ ಮಹಿಳೆಯು ಈ ದೇವಸ್ಥಾನದ ಪರಿಸರದಲ್ಲಿ ಆಕೆಯ ಪ್ರಿಯಕರನಿಗೆ ವಿವಾಹಕ್ಕಾಗಿ ಮನವಿ ಮಾಡಿದ್ದಳು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾದ ನಂತರ ದೇವಸ್ಥಾನದ ಅಡಳಿತವು ಬೇಸರ ವ್ಯಕ್ತಪಡಿಸಿತ್ತು.

ದೇವಸ್ಥಾನ ಸಮಿತಿಯು ತೆಗೆದುಕೊಂಡ ನಿರ್ಣಯದಲ್ಲಿ ಭಾವಿಕರು ದೇವಸ್ಥಾನಕ್ಕೆ ಸಭ್ಯ ಉಡುಪುಗಳನ್ನು ಧರಿಸಿ ಬರಬೇಕೆಂದು ಹೇಳಲಾಗಿದೆ. ಇದರೊಂದಿಗೆ ದೇವಸ್ಥಾನದ ಪರಿಸರದಲ್ಲಿ ಡೇರೆ ಅಥವಾ ಛಾವಣಿಗಳನ್ನು ನಿರ್ಮಿಸದಿರಲು ಸೂಚಿಸಲಾಗಿದೆ. ಆದೇಶವನ್ನು ಪಾಲಿಸದಿರುವವರ ಮೇಲೆ ಕಾನೂನಾತ್ಮಕ ಕಾರ್ಯಾಚರಣೆ ನಡೆಸಲಾಗುವುದು. ದೇವಸ್ಥಾನದ ಪರಿಸರದಲ್ಲಿ ವಿವಿಧ ಕಡೆಗಳಲ್ಲಿ ಈ ವಿಷಯದ ಫಲಕಗಳನ್ನು ಹಚ್ಚಲಾಗಿದೆ. ಈ ಫಲಕಗಳ ಮೇಲೆ `ನೀವು ಸಿಸಿಟಿವಿಯ ಕಣ್ಗಾವಲಿನಲ್ಲಿದ್ದೀರಿ’ ಎಂದು ಹೇಳಲಾಗಿದೆ.

ಬದ್ರಿನಾಥದಲ್ಲಿಯೂ ಆದಷ್ಟು ಬೇಗ ಮೊಬೈಲ್ ಗಳ ಮೇಲೆ ನಿರ್ಬಂಧ ಹೇರಲಾಗುವುದು !

ಬದ್ರಿ-ಕೇದಾರನಾಥ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಅಜೇಂದ್ರ ಅಜಯರವರು ಮಾತನಾಡುತ್ತ, ಇದು ಜನರು ಅಪಾರ ಶ್ರದ್ಧೆಯಿಂದ ಬರುವ ಒಂದು ಧಾರ್ಮಿಕ ಸ್ಥಳವಾಗಿದೆ. ಭಕ್ತರು ಇದನ್ನು ಗೌರವಿಸಬೇಕು. ಬದ್ರಿನಾಥ ಧಾಮದಿಂದ ಇಲ್ಲಿಯ ವರೆಗೆ ಮೊಬೈಲಿನ ಸಂದರ್ಭದಲ್ಲಿ ಯಾವುದೇ ದೂರುಗಳು ಬಂದಿಲ್ಲ; ಆದರೆ ಅಲ್ಲಿಯೂ ಈ ಫಲಕಗಳನ್ನು ಹಚ್ಚಲಾಗುವುದು, ಎಂದು ಹೇಳಿದರು.

ಸಂಪಾದಕೀಯ ನಿಲುವು

ದೇಶದಲ್ಲಿನ ಎಲ್ಲ ದೇವಸ್ಥಾನಗಳು ಈಗ ಇಂತಹ ನಿರ್ಣಯ ತೆಗೆದುಕೊಳ್ಳುವುದು ಆವಶ್ಯಕವಾಗಿದೆ !