ಬಂಗಾಳ ಪಂಚಾಯತ ಚುನಾವಣೆಯಲ್ಲಿನ ಹಿಂಸಾಚಾರ ೧೨ ಜನರ ಸಾವು !

  • ಮತದಾನ ಕೇಂದ್ರದ ಧ್ವಂಸ, ಅಗ್ನಿ ಅವಘಡ

  • ಮತಪೆಟ್ಟಿಗೆ ಕಳವು !

  • ನಾಡುಬಾಂಬ್ ಬಳಕೆ

  • ಗುಂಡಿನ ದಾಳಿಯ ಘಟನೆ

ಕೊಲಕಾತಾ (ಬಂಗಾಳ) – ಬಂಗಾಳದಲ್ಲಿ ಜುಲೈ ೮ ರಂದು ೨೨ ಜಿಲ್ಲೆಗಳಲ್ಲಿ ೬೪ ಸಾವಿರ ೮೭೪ ಗ್ರಾಮ ಪಂಚಾಯತಿ ಸ್ಥಾನಕ್ಕಾಗಿ ಚುನಾವಣೆ ನಡೆಯಿತು. ಈ ಚುನಾವಣೆ ಘೋಷಣೆ ಆದಾಗಿನಿಂದ ಇಲ್ಲಿ ಹಿಂಸಾಚಾರ ಆರಂಭವಾಗಿತ್ತು ಮತ್ತು ಅದು ಪ್ರತ್ಯಕ್ಷ ಮತದಾನದ ದಿನದಂದು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿತು. ಕಳೆದ ೨೪ ಗಂಟೆಯಲ್ಲಿ ರಾಜ್ಯದಲ್ಲಿ ನಡೆದ ಹಿಂಸಾಚಾರದಲ್ಲಿ ೧೨ ಜನರು ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ.

೧. ಕೂಚಬಿಹಾರಿಯ ಸೀತಾಯಿಯಲ್ಲಿ ಬಾರವಿತಾ ಪ್ರಾಥಮಿಕ ಶಾಲೆಯಲ್ಲಿನ ಮತದಾನ ಕೇಂದ್ರವನ್ನು ದ್ವಂಸ ಮಾಡಲಾಗಿದೆ ಮತ್ತು ಮತಪತ್ರ ಸುಟ್ಟು ಹಾಕಲಾಗಿದೆ ಹಾಗೂ ಅದೇ ಜಿಲ್ಲೆಯ ಇನ್ನೊಂದು ಮತದಾನ ಕೇಂದ್ರದಲ್ಲಿ ಮತಪೆಟ್ಟಿಗೆ ಕಳವು ಮಾಡಿ ಅದನ್ನು ನಾಲೆಗೆ ಎಸೆಯಲಾಗಿದೆ ಹಾಗೂ ದಿನಹಾಟ ಪ್ರದೇಶದಲ್ಲಿ ಒಂದು ಮತದಾನ ಕೇಂದ್ರದಲ್ಲಿನ ಮತ ಪೆಟ್ಟಿಗೆಯಲ್ಲಿ ನೀರು ಸುರಿಯಲಾಗಿದೆ. ಇಲ್ಲಿಯ ಬಾರನಾಚಿನಾದಲ್ಲಿನ ಮತದಾನ ಕೇಂದ್ರದಲ್ಲಿ ಬೋಗಸ್ ಮತದಾನ ನಡೆದಿದೆ ಎಂದು ಮತದಾರರೇ ಮತಪೆಟ್ಟಿಗೆ ಬೆಂಕಿ ಹಚ್ಚಿದ್ದಾರೆ.

೨. ಕೂಚಬಿಹಾರದ ಫಲಿಮಾರಿ ಪಂಚಾಯತಿಯಲ್ಲಿನ ಒಂದು ಮತದಾನ ಕೇಂದ್ರದ ಮೇಲೆ ಗೂಂಡಾಗಳಿಂದ ನಡೆದಿರುವ ನಾಡುಬಾಂಬ್ ದಾಳಿಯಲ್ಲಿ ಭಾಜಪದ ಅಭ್ಯರ್ಥಿ ಮಾಯಾ ಬರ್ಮನ್ ಇವರ ಪೋಲಿಂಗ್ ಏಜೆಂಟ್ ಮಾಧವ ವಿಶ್ವಾಸ ಇವರು ಹತರಾದರು. ಮಾಯಾ ಬರ್ಮನ್ ಇವರು, ‘ತೃಣಮೂಲ ಕಾಂಗ್ರೆಸ್ಸಿನ ಗೂಂಡಾಗಳು ನನ್ನ ಪೋಲಿಂಗ್ ಏಜೆಂಟ್ ಮೇಲೆ ನಾಡುಬಾಂಬ್ ಎಸೆದು ಅವರ ಹತ್ಯೆ ಮಾಡಿದ್ದಾರೆ ಮತ್ತು ನನ್ನ ಮೇಲೆ ಕೂಡ ದಾಳಿ ಮಾಡಲಾಗಿದೆ ಎಂದು ಹೇಳಿದರು.

೩. ಕೆಲವು ಸ್ಥಳಗಳಲ್ಲಿ ೨ ಗುಂಪಿನ ನಡುವೆ ಪರಸ್ಪರ ನಾಡುಬಾಂಬ್ ಎಸೆತ ನಡೆದಿದೆ. ಮತದಾನದ ಹಿಂದಿನ ದಿನ ಬೆಳಿಗ್ಗೆ ಮುರ್ಸಿದಾಬಾದದಲ್ಲಿನ ಸಮಶೆರಗಂಜ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ.

೪. ಪೂರ್ವ ಬರ್ಧಮಾನದಲ್ಲಿ ಮಾರ್ಕ್ಸ್ ವಾದಿ ಕಮ್ಯುನಿಸ್ ಪಕ್ಷದ ಒಬ್ಬ ಕಾರ್ಯಕರ್ತನ ಹತ್ಯೆ ನಡೆದಿರುವ ವಾರ್ತೆ ಕೂಡ ಇದೆ.

ಸಂಪಾದಕೀಯ ನಿಲುವು

ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲು ಒಂದೇ ಒಂದು ರಾಜಕೀಯ ಪಕ್ಷ ಕೂಡ ಒತ್ತಾಯಿಸುತ್ತಿಲ್ಲ, ಇದನ್ನು ತಿಳಿಯಿರಿ ! ಈಗ ದೇಶದಲ್ಲಿನ ಜನರೇ ಇದಕ್ಕಾಗಿ ಒತ್ತಾಯಿಸಬೇಕು !