ಬಂಗಾಳದಲ್ಲಿ ಪಂಚಾಯತ ಚುನಾವಣೆ ಘೋಷಣೆ ಬಳಿಕ ಹಿಂಸಾಚಾರ

  • ಮುರ್ಶಿದಾಬಾದ್ (ಬಂಗಾಳ)ನ ಕಾಂಗ್ರೆಸ್ ನ ಸ್ಥಳೀಯ ಮುಸಲ್ಮಾನ ನಾಯಕನ ಹತ್ಯೆ

  • ಕಾಂಗ್ರೆಸ್ ನಿಂದ ತೃಣಮೂಲ ಕಾಂಗ್ರೆಸ್ಸಿನ ಮೇಲೆ ಹತ್ಯೆಯ ಆರೋಪ

ಕೊಲಕಾತಾ (ಬಂಗಾಳ) – ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಕಾಂಗ್ರೆಸ್ ನ ಸ್ಥಳೀಯ ನಾಯಕ ಫುಲಚಂದ ಶೇಖ (೪೨ ವರ್ಷ)ನನ್ನು ಗುಂಡಿಕ್ಕಿ ಕೊಲೆ ಮಾಡಲಾಯಿತು. ರಾಜ್ಯದಲ್ಲಿ ಪಂಚಾಯತ ಚುನಾವಣೆಯ ಘೋಷಣೆ ಬಳಿಕ ಕೆಲವು ಸ್ಥಳಗಳಲ್ಲಿ ಹಿಂಸಾಚಾರ ನಡೆದಿದೆ. ಅದರಲ್ಲಿ ಈ ಕೊಲೆ ನಡೆದಿದೆ. ಕಾಂಗ್ರೆಸ್ ತೃಣಮೂಲ ಕಾಂಗ್ರೆಸ್ಸಿನ ಮೇಲೆ ಹತ್ಯೆಯ ಆರೋಪ ಮಾಡಿದೆ. ಆದರೆ ತೃಣಮೂಲ ಕಾಂಗ್ರೆಸ್ಸ ಈ ಆರೋಪ ತಿರಸ್ಕರಿಸಿದೆ. ಈ ಪ್ರಕರಣದಲ್ಲಿ ಪೊಲೀಸರು ಕಾಜಲ್ ಶೇಖ ಮತ್ತು ಸಫೀಕ್ ಶೇಖ ಇವರಿಬ್ಬರನ್ನು ಬಂಧಿಸಿದ್ದಾರೆ. ಕಾಂಗ್ರೆಸ್, ಇವರಿಬ್ಬರೂ ಕೂಡ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ನ ಜೊತೆಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದೆ.

ಕಾಂಗ್ರೆಸ್ ನ ಸಂಸದ ಮತ್ತು ಲೋಕಸಭೆಯ ವಿರೋಧಿ ಪಕ್ಷದ ನಾಯಕ ಅಧೀರ್ ರಂಜನ ಚೌದರಿ ಇವರು, ಶೇಖ ಇವರು ಮನೆಯ ಹೊರಗೆ ಕುಳಿತಿರುವಾಗ ತೃಣಮೂಲ ಕಾಂಗ್ರೆಸ್ ನ ಸ್ಥಳೀಯ ನಾಯಕ ರಫೀಕ್ ರೌಡಿಗಳ ಜೊತೆಗೆ ಅಲ್ಲಿಗೆ ಬಂದನು ಮತ್ತು ಶೇಖ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದನು. ಶೇಖ ಇವರನ್ನು ಕಾಪಾಡುವುದಕ್ಕಾಗಿ ಪ್ರಯತ್ನ ಮಾಡುವವರ ಮೇಲೆ ಕೂಡ ದಾಳಿ ಮಾಡಲಾಯಿತು ಎಂದು ಆರೋಪಿಸಿದ್ದಾರೆ.