ಸಾಮೂಹಿಕ ನಮಾಜ್ ವಿವಾದದ ಪ್ರಕರಣ
ನೈನಿತಾಲ್ (ಉತ್ತರಾಖಂಡ) – ಇಲ್ಲಿನ ಹಲ್ದ್ವಾನಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮಸೀದಿಯಲ್ಲಿ ಸಾಮೂಹಿಕ ನಾಮಜಪ ಮಾಡುವ ವಿರುದ್ಧ ಹಿಂದೂ ಮತ್ತು ಮುಸ್ಲಿಮರ ನಡುವಿನ ವಿವಾದದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಜನರು ಕೊತ್ವಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ವಾಹನ ಸಂಚಾರಕ್ಕೆ ಅಡೆತಡೆ ಉಂಟು ಮಾಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಸುಮಾರು ೮೦೦ ಮುಸ್ಲಿಮರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
#Nainital police have booked around 800 unidentified people for allegedly indulging in violence, blocking the Nainital-Haldwani national highway and staging a protest near the Haldwani police station creating a ruckus, officials said https://t.co/lhRc52v3KI
— HT Punjab (@HTPunjab) April 5, 2023
ಹಲ್ದ್ವಾನಿಯಲ್ಲಿ ಒಂದು ಅಕ್ರಮ ಕಟ್ಟಡದಲ್ಲಿ ಸಾಮೂಹಿಕ ನಮಾಜ್ ಮಾಡುವ ಹಿಂದೂ ಸಂಘಟನೆಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಹಿಂದೂ ಸಂಘಟನೆಯ ಮುಖಂಡ ಹಾಗೂ ಮುಸ್ಲಿಂ ಧರ್ಮಗುರುಗಳ ನಡುವೆ ಘರ್ಷಣೆ ನಡೆದಿದೆ. ಇದನ್ನು ಖಂಡಿಸಿ ಧರ್ಮಗುರು ಜಫರ್ ಉಲ್ಲಾ ಸಿದ್ಧಿಕಿ ಮತ್ತು ಮೌಲಾನಾ ಶಾಹಿದ್ ಹುಸೇನ್ ನೇತೃತ್ವದಲ್ಲಿ ಮುಸ್ಲಿಮರು ಪೊಲೀಸ್ ಠಾಣೆ ತಲುಪಿ ಹಿಂದೂ ಮುಖಂಡರ ವಿರುದ್ಧ ದೂರು ದಾಖಲಿಸುವಂತೆ ಒತ್ತಾಯಿಸಿದರು. ಈ ವೇಳೆ ಸುಮಾರು ೭೦೦ ರಿಂದ ೮೦೦ ಮುಸ್ಲಿಮರು ಕೊತ್ವಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರ ಮೇಲೂ ಹಲ್ಲೆ ನಡೆಸಲಾಯಿತು.