೨೦೨೫ ರಲ್ಲಿ ಅಮೇರಿಕಾ ಮತ್ತು ಚೀನಾದ ನಡುವೆ ಯುದ್ಧವಾಗುವುದು !

ಅಮೇರಿಕಾದ ವಾಯುದಳ ಜನರಲ್‌ನ ದಾವೆ

ಅಮೇರಿಕಾದ ವಾಯುದಳದ ಜನರಲ್ ಮಾಯಿಕ್ ಮಿನ್ಹಾನ್

ವಾಶಿಂಗ್ಟನ್(ಅಮೇರಿಕಾ) – ಅಮೇರಿಕಾ ಮತ್ತು ಚೀನಾದ ನಡುವೆ ಮುಂಬರುವ ೨ ವರ್ಷಗಳಲ್ಲಿ ಅಂದರೆ ೨೦೨೫ ರಲ್ಲಿ ಯುದ್ಧವಾಗುವುದು, ಎಂದು ಅಮೇರಿಕಾದ ವಾಯುದಳದ ಜನರಲ್ ಮಾಯಿಕ್ ಮಿನ್ಹಾನ್ ಇವರು ದಾವೆ ಮಾಡಿದ್ದಾರೆ. ಅದೇ ರೀತಿ ಅವರು ಸೈನ್ಯಾಧಿಕಾರಿಗಳನ್ನು ಯುದ್ಧಕ್ಕಾಗಿ ಸಿದ್ಧರಿರಬೇಕೆಂದು ಆದೇಶವನ್ನೂ ನೀಡಿದ್ದಾರೆ. ತೈವಾನ್‌ನ ವಿಷಯದಲ್ಲಿ ಯುದ್ಧ ಆಗುವ ಸಾಧ್ಯತೆ ಇದೆ ಎಂದು ಕೂಡ ಅವರು ಹೇಳಿದ್ದಾರೆ. ೨೦೨೪ ರಲ್ಲಿ ಅಮೇರಿಕಾ ಮತ್ತು ತೈವಾನ್‌ನಲ್ಲಿ ರಾಷ್ಟ್ರಪತಿ ಹುದ್ದೆಗಾಗಿ ಚುನಾವಣೆಯಾಗಲಿಕ್ಕಿದೆ, ಎಂದು ಮಾಯಿಕ್ ಮಿನ್ಹಾನ್ ಹೇಳಿದ್ದಾರೆ. ಆದ್ದರಿಂದ ಅಮೇರಿಕಾ ಚುನಾವಣೆಯಲ್ಲಿ ಮಗ್ನವಾಗಿರುವಾಗ ಚೀನಾ ತೈವಾನ್‌ನ ದಿಕ್ಕಿಗೆ ಮುನ್ನುಗ್ಗುವ ಸಾಧ್ಯತೆ ಇದೆ. ಹೀಗದರೇ ಈ ಪರಿಸ್ಥಿತಿಯಲ್ಲಿ ಅಮೇರಿಕಾ ಹಸ್ತಕ್ಷೇಪ ಮಾಡಬೇಕಾಗುತ್ತದೆ. ಆದುದರಿಂದ ಯುದ್ಧಜನ್ಯ ಸ್ಥಿತಿ ನಿರ್ಮಾಣವಾಗಬಹುದು ಎಂದು ಹೇಳಿದ್ದಾರೆ.