ಮುಸಲ್ಮಾನ ಮಹಿಳೆಯರು ಎರಡೇ ಮಕ್ಕಳಿಗೆ ಜನ್ಮ ನೀಡಬೇಕು- ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಇವರ ಕರೆ

ಆಸ್ಸಾಂ ಶಾಸಕ ಮೌಲಾನಾ ಬದರುದ್ದೀನರು ಹಿಂದೂಗಳ ವಿಷಯದಲ್ಲಿ ವಿವಾದಗ್ರಸ್ತ ಹೇಳಿಕೆ ನೀಡಿರುವ ಪ್ರಕರಣ

ಹಿಮಂತ ಬಿಸ್ವಾ ಸರಮಾ ಮತ್ತು ಬದ್ರುದ್ದೀನ ಅಜಮಲ

ಗೌಹತ್ತಿ(ಆಸ್ಸಾ)– ಮಹಿಳೆಯರು ಮಕ್ಕಳನ್ನು ಹೆರುವ ಕಾರಖಾನೆಯಲ್ಲ. `ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರೆಟಿಕ್ ಫ್ರಂಟ’ ನ ಅಧ್ಯಕ್ಷರು ಮತ್ತು ಶಾಸಕ ಬದ್ರುದ್ದೀನ ಅಜಮಲ ಇವರು ಒಂದು ವಿಶಿಷ್ಟ ಸಮಾಜವನ್ನು ಸಂತೋಷಗೊಳಿಸಲು ವಿವಾದಗ್ರಸ್ತ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದರಿಂದ ಮುಸಲ್ಮಾನ ಮಹಿಳೆಯರು ಎರಡೇ ಸಂತಾನಕ್ಕೆ ಜನ್ಮ ನೀಡಬೇಕು ಎಂದು ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಕರೆ ನೀಡಿದ್ದಾರೆ.  ಬದ್ರುದ್ದೀನ ಅಜಮಲ ಇವರು ಕೆಲವು ದಿನಗಳ ಹಿಂದೆ ‘ಹಿಂದೂ ಗಳು ಮದುವೆಯ ಮೊದಲೇ ಅನಧಿಕೃತವಾಗಿ 2-3 ಹೆಂಗಸರನ್ನು ಇಟ್ಟುಕೊಳ್ಳುತ್ತಾರೆ. ಅವರು ಮಕ್ಕಳನ್ನು ಹೆರುವುದಿಲ್ಲ. ಕೇವಲ ಸ್ವಂತ ಸುಖವನ್ನು ಉಪಭೋಗಿಸುತ್ತಾರೆ ಮತ್ತು ಹಣವನ್ನು ಉಳಿತಾಯ ಮಾಡುತ್ತಾರೆ’ ಎಂದು ಅತ್ಯಂತ ವಿವಾದಗ್ರಸ್ತ ಹೇಳಿಕೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸರಮಾ ಮಾತನಾಡುತ್ತಿದ್ದರು.

ಸರಮಾ ತಮ್ಮ ಮಾತನ್ನು ಮುಂದುವರಿಸುತ್ತಾ, “ಒಬ್ಬ  ಮಹಿಳೆ ಅನೇಕ ಮಕ್ಕಳನ್ನು ಹೆತ್ತರೆ, ಅದರ ಪರಿಣಾಮ ಅವಳ ಶಾರೀರಿಕ ಸ್ಥಿತಿಯ ಮೇಲೆ ಆಗಬಹುದು. ಅದರಿಂದ ಸಾಮಾಜಿಕ ಪರಿಣಾಮವಾಗಿ ರಾಜ್ಯಕ್ಕೆ ಹಾನಿಯಾಗಬಹುದು. ಮಹಿಳೆಯರು 2ಕ್ಕಿಂತ ಅಧಿಕ ಮಕ್ಕಳಿಗೆ ಜನ್ಮ ನೀಡಿದರೆ, ಅವರು ದೊಡ್ಡವರಾಗುವವರೆಗೆ ಅವರ ವೆಚ್ಚ ಮತ್ತು ಪೋಷಣೆಯನ್ನು ಬದ್ರುದ್ದೀನ ಅಜಮಲ ಇವರು ಮಾಡಬೇಕು.”ಎಂದು ಹೇಳಿದರು.

ಸಂಪಾದಕೀಯ ನಿಲುವು

ಮುಖ್ಯಮಂತ್ರಿಯವರು ಹಾಗೂ ಮುಂದೆ ಕೇಂದ್ರ ಸರಕಾರವೂ ಜನಸಂಖ್ಯಾ ನಿಯಂತ್ರಣವನ್ನು ತರಲು ಕಾನೂನುರೀತ್ಯಾ ಪರಿಹಾರೋಪಾಯಗಳನ್ನು ಮಾಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ.