ದಿಬ್ರುಗಡ (ಆಸ್ಸಾಂ) ಇಲ್ಲಿ ವಿದ್ಯಾರ್ಥಿಗಳಿಂದ 5 ತಿಂಗಳ ಗರ್ಭಿಣಿ ಶಿಕ್ಷಕಿಯೊಂದಿಗೆ ಅಯೋಗ್ಯ ವರ್ತನೆ : 22 ವಿದ್ಯಾರ್ಥಿಗಳು ಅಮಾನತ್ತು

ದಿಬ್ರುಗಡ (ಆಸ್ಸಾಂ) – ಇಲ್ಲಿನ ಜವಾಹರ ನವೋದಯ ವಿದ್ಯಾಲಯದ ಕೆಲವು ವಿದ್ಯಾರ್ಥಿಗಳು 5 ತಿಂಗಳ ಗರ್ಭಿಣಿ ಶಿಕ್ಷಕಿಯೊಬ್ಬರಿಗೆ ಕಿರುಕುಳ ನೀಡಿ ಅಯೋಗ್ಯ ರೀತಿಯಲ್ಲಿ ವರ್ತಿಸಿದ್ದಾರೆ. ಈ ಶಿಕ್ಷಕಿಯು ಪೋಷಕರ ಸಭೆಯಲ್ಲಿ ವಿದ್ಯಾರ್ಥಿಯೊಬ್ಬನ ಅಧ್ಯಯನ ಮತ್ತು ನಡವಳಿಕೆಯ ಬಗ್ಗೆ ದೂರು ಹೇಳಿದ್ದರು. ಆ ಸಮಯದಲ್ಲಿ ಈ ಘಟನೆ ನಡೆಯಿತು. ಈ ಘಟನೆಯಿಂದಾಗಿ ಶಾಲೆಯಲ್ಲಿ ಗೊಂದಲವಾದ ನಂತರ ಶಾಲಾ ಆಡಳಿತ ಮಂಡಳಿಯು ಪೊಲೀಸರನ್ನು ಕರೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿತು. ಈ ಪ್ರಕರಣದಲ್ಲಿ ಶಾಲೆಯು 22 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ.

ಶಾಲೆಯ ಉಪ ಮುಖ್ಯೋಪಾಧ್ಯಾಯ ರತಿಶ ಕುಮಾರ ಇವರು, ಪೋಷಕರ ಸಭೆಯ ಬಳಿಕ ಕೆಲ ವಿದ್ಯಾರ್ಥಿಗಳು ದೂರು ನೀಡಿದ ಶಿಕ್ಷಕಿಗೆ ಕಿರುಕುಳ ನೀಡಿದ್ದಾರೆ. ಕೆಲವು ವಿದ್ಯಾರ್ಥಿಗಳು ಶಿಕ್ಷಕಿಯನ್ನು ತಳ್ಳಿ ಆಕೆಯ ಕೂದಲನ್ನು ಎಳೆಯಲು ಪ್ರಯತ್ನಿಸಿದರು. ಈ ವೇಳೆ ಇತರೆ ಶಿಕ್ಷಕಿಯರು, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಂತ್ರಸ್ತ ಶಿಕ್ಷಕಿಯನ್ನು ವಿದ್ಯಾರ್ಥಿಗಳಿಂದ ರಕ್ಷಿಸಿದರು. ಈ ವೇಳೆ ಶಿಕ್ಷಕಿಯ ಸ್ಥಿತಿ ಹದಗೆಟ್ಟಿದ್ದ ಕಾರಣ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇವೆ.

ಸಂಪಾದಕೀಯ ನಿಲುವು

ವಿದ್ಯಾರ್ಥಿಗಳು ಓರ್ವ ಶಿಕ್ಷಕಿಯೊಂದಿಗೆ ಈ ರೀತಿ ವರ್ತಿಸುತ್ತಿದ್ದರೆ ಅವರನ್ನು ಶಾಲೆಯಿಂದ ಹೊರಹಾಕಿ ಜೈಲಿಗೆ ಹಾಕಬೇಕು, ಆಗ ಮಾತ್ರ ಅವರು ಪಾಠ ಕಲಿಯುವರು !