ಶ್ರೀರಾಮ ಜನ್ಮಭೂಮಿ ಆಂದೋಲನದಲ್ಲಿನ ಮುಂಚೂಣಿಯಲ್ಲಿದ್ದ ಆಚಾರ್ಯ ಧರ್ಮೇಂದ್ರ ಇವರ ದೇಹತ್ಯಾಗ

ಪ್ರಧಾನಿ ಮೋದಿ ಇವರು ಶೋಕ ವ್ಯಕ್ತಪಡಿಸಿದ್ದಾರೆ

ಆಚಾರ್ಯ ಧರ್ಮೇಂದ್ರ

ಜಯಪುರ(ರಾಜಸ್ಥಾನ) – ಶ್ರೀರಾಮ ಜನ್ಮಭೂಮಿ ಆಂದೋಲನದಲ್ಲಿನ ಮುಂಚೂಣಿಯಲ್ಲಿರುವ ಸಂತರು ಮತ್ತು ಹಿಂದೂ ನಾಯಕ ಆಚಾರ್ಯ ಧರ್ಮೇಂದ್ರ ಇವರು ಸಪ್ಟೆಂಬರ್ ೧೯ ರಂದು ವಿಧಿವಶರಾದರು. ಅವರ ದೇಹ ತ್ಯಾಗದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಶೋಕ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಆಚಾರ್ಯ ಧರ್ಮೇಂದ್ರ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇಲ್ಲಿಯ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ಅತಿದಕ್ಷತಾ ವಿಭಾಗದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಪ್ರಧಾನಿ ಮೋದಿ ಅವರು ಸತತ ಅವರ ಆರೋಗ್ಯದ ಬಗೆಗಿನ ಮಾಹಿತಿ ಪಡೆದುಕೊಳ್ಳುತ್ತಿದ್ದರು. ರಾಜಸ್ಥಾನದಲ್ಲಿನ ಭಾಜಪದ ಅಧ್ಯಕ್ಷ ಮತ್ತು ಅನ್ಯನಾಯಕರು ಆಸ್ಪತ್ರೆ ಹೋಗಿ ಅವರ ಆರೋಗ್ಯದ ಮಾಹಿತಿ ಕಾಳಜಿಯಿಂದ ಪಡೆಯುತ್ತಿದ್ದರು.

ಶ್ರೀರಾಮ ಜನ್ಮಭೂಮಿ ಆಂದೋಲನದಲ್ಲಿ ಸಕ್ರಿಯವಾಗಿ ಸಹಭಾಗಿ ಇರುತ್ತಿದ್ದರು

ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿ ಆಂದೋಲನದಲ್ಲಿ ಆಚಾರ್ಯ ಧರ್ಮೇಂದ್ರ ಸಕ್ರಿಯವಾಗಿದ್ದರು. ಬಾಬರಿ ಮಸೀದಿಯ ಗುಮ್ಮಟ ನೆಲೆಸಮ ಆಗಿರುವ ಪ್ರಕರಣದಲ್ಲಿ ಲಾಲಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ ಇವರ ಜೊತೆಗೆ ಆಚಾರ್ಯ ಧರ್ಮೇಂದ್ರ ಇವರು ತಪ್ಪಿತಸ್ಥರಾಗಿದ್ದರು. ಯಾವಾಗ ಈ ಪ್ರಕರಣದ ಬಗ್ಗೆ ತೀರ್ಪು ಬರುವುದಿತ್ತು ಆಗ ಅವರು, ನಾನು ಈ ಪ್ರಕರಣದ ಮೊದಲನೆಯ ಕ್ರಮಾಂಕದ ತಪ್ಪಿತಸ್ಥನಾಗಿದ್ದೇನೆ, ಎಂದು ಹೇಳಿದ್ದರು.
ಶಿಕ್ಷೆಗೆ ಏಕೆ ಹೆದರಬೇಕು ? ಏನು ಮಾಡಿದ್ದೇವೆ ಅದು ಎಲ್ಲರ ಎದುರಿನಲ್ಲಿದೆ. ವಿಶ್ವ ಹಿಂದೂ ಪರಿಷತ್ ಜೊತೆಗೆ ಅವರು ಅನೇಕ ವರ್ಷದಿಂದ ಸಂಬಂಧ ಹೊಂದಿದ್ದರು. ಹಿಂದೂಗಳಿಗೆ ಸಂಬಂಧಿಸಿದ ಸಮಸ್ಯೆಯ ಬಗ್ಗೆ ಅವರು ಸ್ಪಷ್ಟ ಮತ್ತು ಸಂಕೋಚವಿಲ್ಲದೆ ಅವರ ಅಭಿಪ್ರಾಯ ಮಂಡಿಸುತ್ತಿದ್ದರು.

ಆಚಾರ್ಯ ಧರ್ಮೇಂದ್ರ ಇವರ ಪರಿಚಯ

ಆಚಾರ್ಯ ಧರ್ಮೇಂದ್ರ ಇವರು ಜನವರಿ ೯.೧೯೪೩ ರಲ್ಲಿ ಗುಜರಾತಿನ ಮಾಲವಾಡ ಇಲ್ಲಿ ಜನಿಸಿದರು. ಅವರ ತಂದೆಯ ಹೆಸರು ಮಹಾತ್ಮ ರಾಮಚಂದ್ರವೀರ ಮಹಾರಾಜ. ಆಚಾರ್ಯಧರಮೇಂದ್ರ ಇವರ ಮೇಲೆ ಅವರ ತಂದೆಯ ವ್ಯಕ್ತಿತ್ವದ ಪ್ರಭಾವ ಆಗಿತ್ತು. ಆಚಾರ್ಯರು ೧೩ ನೇ ವಯಸ್ಸಿಗೆ ’ವಜ್ರಂಗ’ ಎಂಬ ದೈನಿಕ ಶುರು ಮಾಡಿದರು. ಪ್ರಸ್ತುತ ಅವರು ಜಯಪೂರದ ವಿರಾಟ ನಗರದ ಮಠದಲ್ಲಿ ವಾಸವಾಗಿದ್ದರು. ಅಲ್ಲಿಯೇ ಅವರು ತಮ್ಮ ಸಾಧನೆ ಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಆಚಾರ್ಯ ಧರ್ಮೇಂದ್ರ ಇವರು ಸನಾತನ ಸಂಸ್ಥೆಯ ರಾಮನಾಥಿ, ಗೋವಾದಲ್ಲಿನ ಆಶ್ರಮಕ್ಕೆ ಭೇಟಿ ನೀಡಿದ್ದರು.