ರಿಯಾಜ್ ಅತ್ತಾರಿ ಮತ್ತು ಮಹಮ್ಮದ್ ಗೌಸ್ ಇವರ ವಿಚಾರಣೆಯಲ್ಲಿ ಮಾಹಿತಿ ಬೆಳಕಿಗೆ
ಜಯಪುರ (ರಾಜಸ್ಥಾನ) – ನೂಪುರ ಶರ್ಮಾ ಇವರ ಸಮರ್ಥನದಲ್ಲಿ ಪೋಸ್ಟ್ ಮಾಡಿರುವ ಉದಯಪುರದ ಕನ್ಹೈಯಾಲಾಲ್ ಇವರ ಹತ್ಯೆಯ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ ಮತ್ತು ರಾಜಸ್ಥಾನದ ಭಯೋತ್ಪಾದಕ ನಿಗ್ರಹ ದಳದಿಂದ ವಿಚಾರಣೆ ನಡೆಯುತ್ತಿದೆ. ವಿಚಾರಣೆಯ ವೇಳೆ ಪಾಕಿಸ್ತಾನಿ ಸಂಘಟನೆ ದಾವತ್ ಎ ಇಸ್ಲಾಮಿ ಇದರ ಜೊತೆ ಸಂಬಂಧ ಇರುವ ಭಯೋತ್ಪಾದಕರ ಅಪ್ಪಣೆಯ ಮೇಲೆ ರಾಜಸ್ಥಾನದ ೪೦ ಜನರು ನೂಪುರ ಶರ್ಮಾ ಇವರನ್ನು ಸಮರ್ಥಿಸುವವರ ಶಿರಚ್ಛೇದ ನಡೆಸಲು ಸಿದ್ಧರಾಗಿದ್ದರು, ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಈ ೪೦ ಜನರು ರಾಜ್ಯದ ೬ ಜಿಲ್ಲೆಗಳ ಜನರನ್ನು ಗುರಿಯಾಗಿಸುವವರಿದ್ದರು. ಕನ್ಹೈಯಾಲಾಲ್ ಇವರ ಹತ್ಯೆ ನಡೆಸಿದ ರಿಯಾಜ್ ಅತ್ತಾರಿ ಮತ್ತು ಗೌಸ್ ಮಹಮ್ಮದ್ ಇವರ ಸಂಚಾರವಾಣಿಯ ಪರೀಕ್ಷಣದಿಂದ ಇದು ಬೆಳಕಿಗೆ ಬಂದಿದೆ. ಅವರು ಪಾಕಿಸ್ತಾನದ ೧೦ ಜನರ ಜೊತೆ ೨೦ ಸಂಚಾರವಾಣಿ ಕ್ರಮಂಕಗಳ ಮೂಲಕ ಸಂಪರ್ಕಿಸುತ್ತಿದ್ದರು. ವಾಟ್ಸಪ್ ರೀತಿಯ ಸಾಮಾಜಿಕ ಜಾಲತಾಣಗಳಿಂದ ಆಡಿಯೋ ಮತ್ತು ವೀಡಿಯೋ ಕಾಲ್ ಮೂಲಕ ಶಿರಚ್ಛೇದ ಮಾಡಲು ಅವರನ್ನು ತಯಾರಿಸಲಾಗಿತ್ತು. ತಾಲಿಬಾನಿ ಭಯೋತ್ಪಾದಕರು ಯಾವ ರೀತಿ ಶಿರಚ್ಛೇದ ನಡೆಸುತ್ತಿದ್ದರು, ಅದೇ ರೀತಿ ಶಿರಚ್ಛೇದ ಮಾಡಿ ಅದರ ವೀಡಿಯೋ ಪ್ರಸಾರ ಮಾಡಿ ಭಯದ ವಾತಾವರಣ ನಿರ್ಮಿಸುವ ಗುರಿ ಅವರಿಗೆ ನೀಡಲಾಗಿತ್ತು.
Udaipur murder: Dawat-e-Islami had formed team of 40 people in Rajasthan to behead Nupur Sharma supporters in Taliban stylehttps://t.co/WRzi2nW1Fk
— OpIndia.com (@OpIndia_com) July 13, 2022
ದಾವತ ಏ ಇಸ್ಲಾಮಿ ಅಜಮೆರದಲ್ಲಿ ಆಕ್ಷೇಪಾರ್ಹ ಧಾರ್ಮಿಕ ಪುಸ್ತಕಗಳ ಅಂಗಡಿ ತೆರದಿತ್ತು. ಅದಕ್ಕಾಗಿ ಪುಸ್ತಕ ಮಾರಾಟಗಾರನಿಗೆ ಪ್ರತಿ ದಿನ ೩೫೦ ರೂಪಾಯಿ ನೀಡಲಾಗುತ್ತಿತ್ತು. ಪುಸ್ತಕದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಹಿತ್ಯದ ಉಲ್ಲೇಖವಿತ್ತು. ರಿಯಾಜ್ ಮತ್ತು ಗೌಸ ಈ ಪುಸ್ತಕಗಳನ್ನು ಹಂಚುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.