Dowry Case: ವರದಕ್ಷಿಣೆ ಕೇಳುವುದು ಅಪರಾಧವಾಗಿದೆ. ಆದರೆ ಕಡಿಮೆ ವರದಕ್ಷಿಣೆ ನೀಡಿದ ಬಗ್ಗೆ ಚುಚ್ಚಿ ಮಾತನಾಡುವುದು ಅಪರಾಧವಲ್ಲ ! – ಅಲಹಾಬಾದ್ ಹೈಕೋರ್ಟ್

ಪ್ರಯಾಗರಾಜ್ (ಉತ್ತರ ಪ್ರದೇಶ) – ವರದಕ್ಷಿಣೆ ಕೇಳುವುದು ಶಿಕ್ಷಾರ್ಹ ಅಪರಾಧವಾಗಿದ್ದರೂ, ಕಡಿಮೆ ವರದಕ್ಷಿಣೆ ನೀಡಿದೆ ಎಂದು ಚುಚ್ಚಿ ಮಾತನಾಡುವುದು ಶಿಕ್ಷಾರ್ಹ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಒಂದು ಪ್ರಕರಣದ ವಿಚಾರಣೆ ನಡೆಸುವಾಗ ಹೇಳಿದೆ. “ಕ್ರಿಮಿನಲ್ ಪ್ರಕರಣವನ್ನು ಮುಂದುವರಿಸಲು ಕುಟುಂಬ ಸದಸ್ಯರ ವಿರುದ್ಧದ ಆರೋಪಗಳು ಸ್ಪಷ್ಟವಾಗಿರಬೇಕು. ಪ್ರತಿಯೊಬ್ಬ ಸದಸ್ಯರು ನಿರ್ವಹಿಸಿದ ನಿರ್ದಿಷ್ಟ ಪಾತ್ರಗಳ ಮೇಲೆ ಬೆಳಕು ಚೆಲ್ಲಬೇಕು” ಎಂದು ನ್ಯಾಯಾಲಯ ಹೇಳಿದೆ.

ಆರೋಪಿ (ಗಂಡ) ವರದಕ್ಷಿಣೆಯಾಗಿ ಕಾರನ್ನು ಕೇಳಿದ್ದ ಮತ್ತು ಬೇಡಿಕೆಯನ್ನು ಈಡೇರಿಸದ ಕಾರಣ ಅರ್ಜಿದಾರರಿಗೆ (ಹೆಂಡತಿಗೆ) ಮನೆಯಿಂದ ಹೊರಹಾಕಿದನು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ, 323, 506 ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3,4 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನ್ಯಾಯಾಲಯದಲ್ಲಿ ಆರೋಪಿಗಳಿಂದ ಯುಕ್ತಿವಾದ ಮಾಡುವಾಗ, ಪತ್ನಿ ತನ್ನ ಮೇಲೆ ಮಾರಣಾಂತಿಕ ದಾಳಿ ಆಗಿರುವ ಯಾವುದೇ ಆರೋಪಗಳನ್ನು ಮಾಡಿಲ್ಲ ಎಂದು ಹೇಳಿವೆ. ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಸಂಬಂಧಿಕರ ವಿರುದ್ಧ ಪತ್ನಿ ಮಾಡಿದ ಆರೋಪಗಳು ಅಸ್ಪಷ್ಟವಾಗಿದ್ದವು.