ನೇಹಾಳ ಹತ್ಯೆಯ ಪ್ರಕರಣ ಮುಚ್ಚಿಹಾಕಲಾಗಿದೆ !

ನೇಹಾ ಹಿರೇಮಠ ಅವರ ತಂದೆ ಮತ್ತು ಕಾಂಗ್ರೆಸ್ಸಿನ ಹುಬ್ಬಳ್ಳಿ ನಗರಸೇವಕ ನಿರಂಜನ್ ಅವರ ಗಂಭೀರ ಆರೋಪ !

ಹುಬ್ಬಳ್ಳಿ (ಕರ್ನಾಟಕ) – ಕಾಲೇಜಿನ ಪರಿಸರದಲ್ಲಿ ಕೊಲೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಇವಳ ಬಳಿಕ ಇದೀಗ ಅಂಜಲಿ ಅಂಬಿಗೆರ್ ಎಂಬ ಯುವತಿಯ ಸಾವಿನಿಂದ ಸಂಪೂರ್ಣ ಹುಬ್ಬಳ್ಳಿ ನಗರ ಶೋಕದಲ್ಲಿ ಮುಳುಗಿದೆ. ಮೃತ ಅಂಜಲಿ ಅವರ ವಿಭಾಗದ ನಗರಸೇವಕರಾಗಿರುವ ಮತ್ತು ಲವ್ ಜಿಹಾದ್ ಗೆ ಬಲಿಯಾದ ನೇಹಾ ಹಿರೇಮಠ ಅವರ ತಂದೆ ನಿರಂಜನ್ ಹಿರೇಮಠ ಅವರು ಅಂಜಲಿಯ ಅಂತ್ಯಸಂಸ್ಕಾರಕ್ಕಾಗಿ ೧ ಲಕ್ಷ ರೂಪಾಯಿ ನೀಡಿ ಆಕೆಯ ಕುಟುಂಬದವರಿಗೆ ಸಾಂತ್ವನ ಹೇಳಿದರು. ಅಂಜಲಿಯ ಕುಟುಂಬದವರು ಸಾಂತ್ವನ ಹೇಳಲು ಬಂದಿದ್ದ ನಿರಂಜನ್ ಹಿರೇಮಠ ಅವರು ಈ ಸಮಯದಲ್ಲಿ ಗಂಭೀರ ಆರೋಪ ಮಾಡಿದರು. ನೇಹಾಳ ಹತ್ಯೆಯ ಪ್ರಕರಣ ಮುಚ್ಚಿ ಹಾಕಿದ್ದಾರೆ. ನನ್ನ ಮಗಳ ಹತ್ಯೆ ನಡೆದು ಒಂದು ತಿಂಗಳು ಕಳೆದಿದೆ, ಆದರೂ ರಾಜ್ಯದ ಗೃಹ ಇಲಾಖೆಯಿಂದ ನನಗೆ ಒಂದು ದೂರವಾಣಿ ಕರೆ ಕೂಡ ಬಂದಿಲ್ಲ. ಇಷ್ಟೇ ಏಕೆ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಅವರು ನನ್ನನ್ನು ಭೇಟಿಯಾಗಲು ಮನೆಗೆ ಕೂಡ ಬರಲಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪೊಲೀಸರ ನಿಲುವು ತಿಳಿದುಕೊಳ್ಳುವುದಕ್ಕಾಗಿ ಸನಾತನ ಪ್ರಭಾತದ ಪ್ರತಿನಿಧಿವು ಹುಬ್ಬಳ್ಳಿ ಧಾರವಾಡ ಪೊಲೀಸ್ ಅಧಿಕಾರಿ ರೇಣುಕಾ ಸುಕುಮಾರ ಅವರ ಜೊತೆಗೆ ಸಂಪರ್ಕಿಸಿದಾಗ, ಸುಕುಮಾರ ಅವರು, ಈ ಪ್ರಕರಣ ಈಗ ಅಪರಾಧ ನಿಗ್ರಹ ಇಲಾಖೆಗೆ ಒಪ್ಪಿಸಲಾಗಿರುವುದರಿಂದ ಅವರಿಂದ ಈ ಸೂತ್ರಗಳ ಬಗ್ಗೆ ಮಾಹಿತಿ ದೊರೆಯಬಹುದು ಎಂದರು. ಬೆಂಗಳೂರಿನ ಅಪರಾಧ ತನಿಖಾ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನ ಕೂಡ ವಿಫಲವಾಯಿತು.

ಸಂಪಾದಕೀಯ ನಿಲುವು

  • ಕಾಂಗ್ರೆಸ್ ಮುಸಲ್ಮಾನರನ್ನು ಓಲೈಸುವ ಹಳೆಯ ಛಾಳಿ ಹೊಸತೇನಲ್ಲ ಸ್ವಪಕ್ಷದ ಓರ್ವ ನಗರ ಸೇವಕನ ಮೇಲೆ ಅನ್ಯಾಯವಾಗಿದ್ದರೂ ಕೂಡ ಅದರ ಕುರಿತು ಕಾಂಗ್ರೆಸ್ಸಿಗೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ತಿಳಿದುಕೊಳ್ಳಿ.
  • ಕರ್ನಾಟಕದಲ್ಲಿನ ಹಿಂದುಗಳು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದಿರುವ ಪರಿಣಾಮವೇ ಇದಾಗಿದೆ. ಇಂತಹ ಅನೇಕ ನಿರಪರಾಧಿ ಹುಡುಗಿಯರು ಸ್ನೇಹ ಹಿರೇಮಠ ಇವಳ ಹಾಗೆ ಅವಸ್ಥೆ ಆಗುವ ಮೊದಲು ಹಿಂದುಗಳು ಸಂಘಟಿತರಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಬೇಕು !