ಜಾತ್ಯತೀತ ಭಾರತವನ್ನು ‘ಹಿಂದೂ ರಾಷ್ಟ್ರ’ವಾಗಿಸಿದ ಪ್ರಧಾನಿ ಮೋದಿಯ ಭಾಜಪ !

ಅಮೇರಿಕಾ ಪ್ರಸಾರ ಮಾಧ್ಯಮ ‘ಸಿ.ಎನ್‌.ಎನ್‌.’ ವತಿಯಿಂದ ದಿಕ್ಕುತಪ್ಪಿಸುವ ಹಿಂದೂದ್ವೇಷಿ ಲೇಖನ !

ಮೋದಿಯವರ ಕ್ಷೇತ್ರ ವಾರಾಣಸಿಯಲ್ಲಿ ಹಿಂದೂ ರಾಷ್ಟ್ರವಾದದ ಉದಯದಿಂದ ಅಲ್ಲಿಯ ಮುಸಲ್ಮಾನರಲ್ಲಿ ಭಯ ಹುಟ್ಟಿದೆ ಎಂದು ಲೇಖನದಿಂದ ಆರೋಪ !

ನವ ದೆಹಲಿ – ಭಾರತದಲ್ಲಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ಪ್ರಸಾರ ಮಾಧ್ಯಮಗಳು ಭಾರತೀಯ ಮತದಾರರಿಗೆ ಪ್ರಧಾನಮಂತ್ರಿ ಮೋದಿ ಇವರ ಸರಕಾರವನ್ನು ವಿರೋಧಿಸುವ ಪ್ರಯತ್ನದಲ್ಲಿ ತೊಡಗಿವೆ. ಪಾಶ್ಚಾತ್ಯ ಪ್ರಸಾರ ಮಾಧ್ಯಮಗಳಲ್ಲಿ ನಿರಂತರವಾಗಿ ಇಂತಹ ಲೇಖನಗಳು ಪ್ರಸಾರ ವಾಗುತ್ತಿವೆ, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರು ಹಿಂದೂ ಮೂಲಭೂತವಾದಿ ಆಗಿದ್ದಾರೆ ಮತ್ತು ಅವರ ಮೂರನೇ ಆಡಳಿತಾವಧಿಯಲ್ಲಿ ಭಾರತ ‘ಹಿಂದೂ ರಾಷ್ಟ್ರ’ವಾಗುವುದು, ಎಂದು ಹೇಳಿದೆ. ಭಾರತವಿರೋಧಿ ಮತ್ತು ಹಿಂದೂವಿರೋಧಿ ಪ್ರಚಾರ ಮಾಡಲು ಈ ಪ್ರಸಾರ ಮಾಧ್ಯಮಗಳು ನಿರಂತರ ಸುಳ್ಳು ಹೇಳುತ್ತಿವೆ. ಅಮೇರಿಕಾದಲ್ಲಿನ ಪ್ರಸಾರ ಮಾಧ್ಯಮ ‘ಸಿ.ಎನ್‌.ಎನ್‌.’ ಪ್ರಧಾನಮಂತ್ರಿ ಮೋದಿ ಇವರ ಭಾಜಪದಿಂದ ಜಾತ್ಯತೀತ ಭಾರತವನ್ನು ‘ಹಿಂದೂ ರಾಷ್ಟ್ರ’ವಾಗಿ ಪರಿವರ್ತಿಸಿದೆ ಎಂದು ಆರೋಪಿಸುವ ಒಂದು ಲೇಖನ ಪ್ರಕಾಶನಗೊಳಿಸಿದೆ.

೧ ಮೇ ೨೦೨೪ ರಂದು Rising Hindu Nationalism Leaves Muslim fearful in Indias holy city (ಹಿಂದೂ ರಾಷ್ಟ್ರವಾದದ ಉದಯದಿಂದ ಭಾರತದ ಪವಿತ್ರ ನಗರದ (ವಾರಾಣಸಿಯಲ್ಲಿನ) ಮುಸಲ್ಮಾನರಲ್ಲಿ ಭಯ !) ಈ ಶೀರ್ಷಿಕೆಯಲ್ಲಿ ಈ ಲೇಖನ ಪ್ರಕಾಶಿತಗೊಂಡಿದೆ. ಈ ಮೂಲಕ ವಾರಾಣಸಿಯಲ್ಲಿನ ಮುಸಲ್ಮಾನರಿಗೆ ಪ್ರಧಾನಿ ಮೋದಿ ಇಲ್ಲಿಂದ ಮೂರನೆಯ ಬಾರಿ ಗೆಲ್ಲುವುದರ ಕುರಿತು ಭಯ ಅನಿಸುತ್ತಿದೆ ಎಂದು ಕಂಡು ಬಂದಿದೆ.

‘ಮುಸಲ್ಮಾನರನ್ನು ಗುರಿ ಮಾಡಲು ಹಿಂದೂಗಳನ್ನು ಉನ್ನತ ಹುದ್ದೆಗಳಲ್ಲಿ ಕೂಡಿಸಲಾಗುತ್ತಿದೆಯಂತೆ !’

ಐಶ್ವರ್ಯ ಎಸ್. ಐಯ್ಯರ್, ರಿಯಾ ಮೊಗಲ್, ಕುನಾಲ್‌ ಸೆಹಗಲ್‌ ಮತ್ತು ವಿಲ್‌ ರಿಪ್ಲೈ ಇವರು ಬರೆದಿರುವ ಈ ಲೇಖನದಲ್ಲಿ, ‘ಪ್ರಧಾನಮಂತ್ರಿ ಮೋದಿ ಇವರು ಭಾರತದ ಸರಕಾರಿ ಸಂಸ್ಥೆಯ ಉನ್ನತ ಸ್ಥಾನದಲ್ಲಿ ಹಿಂದೂ ರಾಷ್ಟ್ರವಾದಿಗಳನ್ನು ಯಾವ ರೀತಿ ನೇಮಿಸುತ್ತಿದ್ದಾರೆ’, ಈ ಅಂಶವನ್ನು ಆದರಿಸಿದೆ. ಇದರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ, ಮುಸಲ್ಮಾನರನ್ನು ಗುರಿ ಮಾಡುವುದಕ್ಕಾಗಿ ಹಿಂದೂಗಳನ್ನು ಉನ್ನತ ಹುದ್ದೆಗಳಲ್ಲಿ ನೇಮಿಸಲಾಗುತ್ತಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

‘ಜ್ಞಾನವಾಪಿಯಲ್ಲಿನ ಹಿಂದೂಗಳ ಹಕ್ಕಿನ ಸಾಕ್ಷಿಗಳ ಆಧಾರಿತವಾಗಿ ಇಲ್ಲವಂತೆ !’

ಜ್ಞಾನವಾಪಿಯಲ್ಲಿನ ಹಿಂದೂಗಳ ಹಕ್ಕು ಇದು ಜನರ ವಿಶ್ವಾಸದ ಮೇಲೆ ಆಧಾರಿತವಾಗಿದೆ ಸಾಕ್ಷಿಗಳ ಆಧಾರದಲ್ಲಿ ಇಲ್ಲ, ಎಂದು ಹೇಳಿದೆ. ಇದರಲ್ಲಿ ಓರ್ವ ಮುಸಲ್ಮಾನನ ಹೇಳಿಕೆ ನೀಡಲಾಗಿದೆ. ಆತ, ‘ಈಗ ಅವನಿಗೆ ನ್ಯಾಯವ್ಯವಸ್ಥೆ ಮತ್ತು ಪೊಲೀಸರ ಮೇಲೆ ವಿಶ್ವಾಸ ಉಳಿಲಿಲ್ಲ’ ಎಂದು ಹೇಳಿದ್ದಾನೆ. ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಬಗ್ಗೆ ಲೇಖನದಲ್ಲಿ, ‘ಶ್ರೀರಾಮಮಂದಿರ ನಿರ್ಮಾಣದಿಂದ ದೇಶದಲ್ಲಿನ ಜಾತ್ಯತೀತತೆಗೆ ಹಾನಿ ಉಂಟಾಗಿದೆ’ ಎಂದು ಹೇಳಿದೆ.

ಕಲಂ ೩೭೦ ಮತ್ತು ಪೌರತ್ವ ತಿದ್ದುಪಡಿ ಉಲ್ಲೇಖ

ಸಿ.ಎನ್‌.ಎನ್‌.ನ ಲೇಖನದಲ್ಲಿ ಜಮ್ಮು ಕಾಶ್ಮೀರದಿಂದ ಕಲಂ ೩೭೦ ತೆರವುಗೊಳಿಸಿದರ ಬಗ್ಗೆ ಕೂಡ ಚರ್ಚಿಸಲಾಗಿದೆ. ಮೋದಿ ಸರಕಾರವು ಭಾರತದಲ್ಲಿನ ಏಕೈಕ ಮುಸಲ್ಮಾನ ಬಹುಸಂಖ್ಯಾತ ರಾಜ್ಯದ ಸ್ವಾತಂತ್ರ್ಯ ಕಸಿದುಕೊಂಡಿದೆ, ಎಂದು ಹೇಳಿದೆ; ಆದರೆ ಅಲ್ಲಿನ ಜಿಹಾದಿ ಭಯೋತ್ಪಾದನೆ ಹಾಗೂ ಸರಕಾರದಿಂದ ಅಲ್ಲಿನ ವಿಕಾಸ ಇದರ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ.

* ಭಾರತದಲ್ಲಿ ಶೀಘ್ರದಲ್ಲಿ ಹಿಂದೂ ರಾಷ್ಟ್ರ ಬರಲಿದೆ ಎಂಬುದು ಅಚಲ ಸತ್ಯವಾಗಿದೆ. ಹಾಗಾಗಿ ಯಾರು ಎಷ್ಟೇ ಹಿಂದೂದ್ವೇಷಿಯಾಗಿದ್ದರೂ ಮತ್ತು ಎಷ್ಟೇ ವಿಷಕಾರಿದರೂ ಯಾವುದೇ ಪರಿಣಾಮವಾಗದು ಎಂಬುದನ್ನು ಅವರು ಗಮನದಲ್ಲಿಡಬೇಕು.

* ಇಸ್ಲಾಮಿ ದೇಶಗಳಲ್ಲಿ ಹಿಂದೂಗಳ ಸ್ಥಿತಿ ಬಗ್ಗೆ ಹಾಗೂ ಬಂಗಾಲ ಮತ್ತು ಕೇರಳ ರಾಜ್ಯಗಳಲ್ಲಿ ಹಿಂದೂಗಳ ಮೇಲಾಗುವ ದಾಳಿಗಳ ಬಗ್ಗೆ ‘ಸಿಎನ್ಎನ್.’ ಎಂದಿಗೂ ಬಾಯಿ ತೆರೆಯುವುದಿಲ್ಲ, ಎಂಬುದನ್ನು ಗಮನದಲ್ಲಿಡಿ.

* ಈಗ ಭಾರತದ ಮಾಧ್ಯಮಗಳು ಸಹ ‘ಅಮೇರಿಕಾದಲ್ಲಿನ ಹಿಂದೂಗಳ ಹತ್ಯೆ ಹಾಗೂ ಬಿಳಿಯರಿಂದ ಕರಿಯರ ಹತ್ಯೆಗಳಾಗುವುದಕ್ಕೆ ಅಮೇರಿಕಾ ಸರಕಾರ ಹೇಗೆ ಜವಾಬ್ದಾರಿ ಇದೆ’, ಎಂಬುದರ ಬಗ್ಗೆ ಬೆಳಕು ಚೆಲ್ಲುವ ಲೇಖನ ಬರೆಯಬೇಕು ಮತ್ತು ಅದರ ಆಧಾರ ಪಡೆದು ಭಾರತದ ವಿದೇಶಾಂಗ ಸಚಿವಾಲಯವು  ಅಮೇರಿಕಾಗೆ ಪ್ರಶ್ನಿಸಬೇಕು.