ಹಿಂದೂ ಜನ ಜಾಗೃತಿ ಸಮಿತಿಯ ನಿಲೇಶ ಟವಲಾರೆ ಹಾಗೂ ಮಹಾರಾಷ್ಟ್ರ ಮಂದಿರ ಮಹಾಸಂಘದ ಸದಸ್ಯ ಅನೂಪ ಜೈಸ್ವಾಲ ಇವರನ್ನು ‘ಪದ್ಮಶ್ರೀ ಡಾ. ಮಣಿಭಾಯಿ ದೇಸಾಯಿ ರಾಷ್ಟ್ರಸೇವಾ’ ಪ್ರಶಸ್ತಿ ನೀಡಿ ಗೌರವ !

ಪದ್ಮಶ್ರೀ ಡಾ. ಮಣಿಭಾಯಿ ದೇಸಾಯಿ ಪ್ರತಿಷ್ಠಾನ ಉರುಳಿಕಾಂಚನ (ಪುಣೆ) ಇವರ ವತಿಯಿಂದ ಪುಣೆಯಲ್ಲಿ ಪ್ರಶಸ್ತಿ ಪ್ರದಾನ !

ಹಿಂದೂರತ್ನ ಶ್ರೀ. ರವೀಂದ್ರ ಭೋಳೆ ಇವರ ಹಸ್ತದಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ನಿಲೇಶ ಟವಲಾರೆ

ಪುಣೆ, ಏಪ್ರಿಲ್ ೨೮ (ವಾರ್ತೆ) – ಹಿಂದೂ ಜನಜಾಗೃತಿ ಸಮಿತಿಯ ಅಮರಾವತಿಯ ಶ್ರೀ. ನಿಲೇಶ ಟವಲಾರೆ ಇವರಿಗೆ ‘ಪದ್ಮಶ್ರೀ ಡಾ. ಮಣಿಭಾಯಿ ದೇಸಾಯಿ ರಾಷ್ಟ್ರಸೇವಾ’ ಪ್ರಶಸ್ತಿ ನೀಡಿದರು. ಇದರೊಂದಿಗೆ ಮಹಾರಾಷ್ಟ್ರ ಮಂದಿರ ಮಹಾಸಂಘದ ರಾಜ್ಯ ಮಟ್ಟದ ಸದಸ್ಯ ಶ್ರೀ. ಅನೂಪ ಜೈಸ್ವಾಲ್ ಇವರಿಗೂ ಕೂಡ ಈ ಪ್ರಶಸ್ತಿ ನೀಡಿ ಗೌರವಿಸಿದರು. ‘ಪದ್ಮಶ್ರೀ ಡಾ. ಮಣಿಭಾಯಿ ದೇಸಾಯಿ ಪ್ರತಿಷ್ಠಾನ ಉರುಳಿಕಾಂಚನ’ ಈ ಸಂಘಟನೆಯ ವತಿಯಿಂದ ಡಾ. ಬಾಬಾ ಸಾಹೇಬ ಅಂಬೇಡ್ಕರ ಸಂಸ್ಕೃತಿಕ ಭವನದಲ್ಲಿ ‘ಪದ್ಮಶ್ರೀ ಡಾ. ಮಣಿಬಾಯಿ ದೇಸಾಯಿ ರಾಷ್ಟ್ರಸೇವಾ’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದ್ದರು. ಈ ಸಮಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಕಾರ್ಯ ಮಾಡಿರುವ ಗಣ್ಯರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಮಯದಲ್ಲೇ ಪ್ರತಿಷ್ಠಾನದ ಅಧ್ಯಕ್ಷ ಹಿಂದುರತ್ನ ಡಾ. ರವೀಂದ್ರ ಭೋಳೆ ಇವರಿಂದ ವಿವಿಧ ಕ್ಷೇತ್ರದಲ್ಲಿ ಗಣನೀಯ ಕಾರ್ಯ ಮಾಡಿರುವ ಗಣ್ಯರಿಗೆ ಪ್ರಶಸ್ತಿ ನೀಡಲಾಯಿತು. ಈ ಪ್ರಸಂಗದಲ್ಲಿ ವೇದಿಕೆಯಲ್ಲಿ ಸ್ವಾಮಿ ದಿವ್ಯಾನಂದ ಗಿರಿ, ಸರ್ವೋತ್ಕರ್ಷ ಟ್ರಸ್ಟಿನ ರಾಜೇಶ ದಾತಾರ, ಪ್ರತಿಷ್ಠಾನದ ಉಪಾಧ್ಯಕ್ಷ ಅಶೋಕ ಪಾಟೀಲ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ಕೇಂದ್ರ ಸರಕಾರದ ನೀತಿ ಆಯೋಗದಿಂದ ಸಂಚಾಲಿತ ‘ಪದ್ಮಶ್ರೀ ಡಾ. ಮಣಿಭಾಯಿ ದೇಸಾಯಿ ಪ್ರತಿಷ್ಠಾನ ಉರುಳಿಕಾಂಚನ (ಪುಣೆ)’ ಈ ಸಂಸ್ಥೆಯ ವತಿಯಿಂದ ಪ್ರತಿವರ್ಷ ದೇಶಾದ್ಯಂತ ವಿವಿಧ ಗಣ್ಯರನ್ನು ಗಣನಿಯ ಕಾರ್ಯ ಮಾಡಿರುವುದರ ಬಗ್ಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರ ಭೋಳೆ ಇವರಿಗೆ ಇತ್ತೀಚಿಗೆ ‘ಹಿಂದೂರತ್ನ’ ಪ್ರಶಸ್ತಿಯಿಂದ ಗೌರವಿಸಲಾಗಿದೆ.

‘ರಾಷ್ಟ್ರಸೇವಾ’ ಪ್ರಶಸ್ತಿ ಸ್ವೀಕರಿಸುವಾಗ (ಎಡದಿಂದ) ಶ್ರೀ. ಅನುಪ ಜೈಸ್ವಾಲ್, ಸ್ವಾಮಿ ದಿವ್ಯಾನಂದಗಿರಿ ಮಹಾರಾಜ, ಶ್ರೀ. ರವೀಂದ್ರ ಭೋಳೆ

ಪ್ರಶಸ್ತಿ ದೊರೆತ ನಂತರ ಶ್ರೀ. ನಿಲೇಶ ಟವಲಾರೆ ಇವರು ಮನೋಗತ ವ್ಯಕ್ತಪಡಿಸುವಾಗ, ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ಥಾನ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಚರಣಗಳಲ್ಲಿ ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ. ಪದ್ಮಶ್ರೀ ಡಾ. ಮಣಿಭಾಯಿ ದೇಸಾಯಿ ಪ್ರತಿಷ್ಠಾನ ತ್ಯಾಗದ ಭಾವನೆಯಿಂದ ಸಮಾಜಕ್ಕಾಗಿ ಕಾರ್ಯ ಮಾಡುತ್ತಿದೆ. ನಿಮ್ಮೆಲ್ಲರಿಗೆ ಅಭಿನಂದನೆ. ಶ್ರೀ. ರವೀಂದ್ರ ಭೋಳೆ ಇವರು ಈ ಕಾರ್ಯವನ್ನು ಮುಂದುವರಿಸಲಿ, ಎಂದು ಅವರು ಶುಭ ಹಾರೈಸಿದರು !