ರಾಮಾಯಣ ಧಾರವಾಹಿಯ ‘ವಿಶ್ವ ದಾಖಲೆ

ದೇಶದಲ್ಲಿ ಕೊರೋನಾದಿಂದಾಗಿ ಜಾರಿಗೊಳಿಸಲಾಗಿರುವ ಸಂಚಾರ ನಿಷೇಧದ ನಂತರ ದೂರದರ್ಶನ ವಾಹಿನಿಯಲ್ಲಿ ರಾಮಾಯಣ ಹಾಗೂ ಮಹಾಭಾರತ ಎರಡೂ ಹಿಂದಿ ಧಾರಾವಾಹಿಗಳನ್ನು ಮರು ಪ್ರಸಾರಣೆ ಮಾಡಲಾಗುತ್ತಿದೆ. ಏಪ್ರಿಲ್ ೧೩ರರಂದು ರಾಮಾಯಣ ಧಾರವಾಹಿಯ ಸಂಚಿಕೆಯನ್ನು ಸುಮಾರು ೭ ಕೋಟಿ ೭೦ ಲಕ್ಷ ಜನರು ನೋಡಿದ್ದಾರೆ.

ಮೇವಾತ್ (ಹರಿಯಾಣ)ದಲ್ಲಿ ಮತಾಂಧರಿಂದ ‘ಮುಕ್ತಿಧಾಮ ಆಶ್ರಮದ ಮುಖ್ಯ ಮಹಂತ ರಾಮದಾಸ ಮಹಾರಾಜರ ಮೇಲೆ ದಾಳಿ

ಏಪ್ರಿಲ್ ೨೯ರಂದು ಇಲ್ಲಿನ ಪುನ್ಹಾನಾದಲ್ಲಿ‘ಮುಕ್ತಿಧಾಮ ಆಶ್ರಮದ ಮುಖ್ಯ ಮಹಂತರಾದ ರಾಮದಾಸ ಮಹಾರಾಜರ ಮೇಲೆ ಮತಾಂಧರು ಹಲ್ಲೆ ಮಾಡಿದ ಘಟನೆ ನಡೆದಿದೆ. ಇದರೊಂದಿಗೆ ‘ಸಾಧು ಹಾಗೂ ಸಂತರನ್ನು ಇಲ್ಲಿಂದ ಓಡಿಸಬೇಕು. ಅವರೇನಾದರೂ ಹೋಗದಿದ್ದಲ್ಲಿ, ಅವರನ್ನು ಬೆಂಕಿಯಲ್ಲಿ ಸುಟ್ಟು ಕೊಲ್ಲಬೇಕು ಎಂದು ಹೇಳುತ್ತ ಮತಾಂಧರು ಬೆದರಿಕೆಯೊಡ್ಡಿದ್ದಾರೆ.

ತಬಲೀಗಿ ಜಮಾತ್ ಉದ್ದೇಶಪೂರ್ವಕವಾಗಿ ಕೊರೋನಾವನ್ನು ಹಬ್ಬಿಸಿದರು, ಇದೊಂದು ಅಕ್ಷಮ್ಯ ಅಪರಾಧ ! ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ, ಉತ್ತರಪ್ರದೇಶ

ತಬಲೀಗಿ ಜಮಾತ್ ನವರ ಕೃತ್ಯವು ತುಂಬಾ ತಪ್ಪಾಗಿದೆ. ಅವರು ಸಮಯಕ್ಕೆ ಸರಿಯಾಗಿ ಆಡಳಿತವರ್ಗಕ್ಕೆ ಮಾಹಿತಿ ನೀಡಬೇಕಾಗಿತ್ತು; ಆದರೆ ಅವರು ಕೊರೋನಾವನ್ನು ಅಡಗಿಸಿಟ್ಟರು. ಅವರ ಹೇಳಿಕೆಯಿಂದಾಗಿ ಜನರಲ್ಲಿ ತಪ್ಪಾದ ಮಾಹಿತಿ ಹರಡಿತು. ಅನಂತರ ನೋಡನೋಡುತ್ತಾ ಅನೇಕರಿಗೆ ಕೊರೋನಾ ಸಂಕ್ರಮಿಸಿತು. ಅವರು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯವೆಂದರೆ ಇದೊಂದು ಅಕ್ಷಮ್ಯ ಅಪರಾಧವಾಗಿದೆ

ತಮಿಳುನಾಡು ಸರಕಾರದ ತೀರ್ಮಾನಕ್ಕೆ ಧರ್ಮಪ್ರೇಮಿಗಳ ಟ್ವೀಟ್ ಮೂಲಕ ತೀವ್ರ ವಿರೋಧ

ತಮಿಳುನಾಡು ಸರಕಾರವು ರಾಜ್ಯದಲ್ಲಿ ಸರಕಾರೀಕರಣಗೊಂಡಿರುವ ೩ ಸಾವಿರ ದೇವಾಲಯಗಳ ಪೈಕಿ ೪೭ ದೊಡ್ಡ ದೇವಾಲಯಗಳನ್ನು ಕೊರೋನಾದ ವಿರುದ್ಧ ಹೋರಾಡಲು ‘ಮುಖ್ಯಮಂತ್ರಿ ಸಹಾಯ ನಿಧಿ’ ಗೆ ಕೋಟಿಗಟ್ಟಲೆ ಹಣ ನೀಡಲು ಇತ್ತೀಚೆಗಷ್ಟೇ ಆದೇಶಿಸಿತು, ಮತ್ತೊಂದು ಕಡೆ ರಂಝಾನ್‌ನ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ೨ ಸಾವಿರ ೮೯೫ ಮಸೀದಿಗಳಿಗೆ ಬಿರ್ಯಾನಿಗಾಗಿ ೫ ಸಾವಿರ ೪೫೦ ಟನ್ ಅಕ್ಕಿಯನ್ನು ಉಚಿತವಾಗಿ ನೀಡಲಾಯಿತು.

ವ್ಯಾಸ ಮಹರ್ಷಿಗಳ ಶ್ಲೋಕ ಮತ್ತು ಅರ್ಥ

ಪರಾಶರ ಮುನಿಗಳ ಪುತ್ರ, ಪರಮ ಪುರುಷ, ವಿಶ್ವ ಮತ್ತು ದೇವರುಗಳ ಜ್ಞಾನದ ಉತ್ಪತ್ತಿ ಸ್ಥಾನ, ವಿದ್ಯೆ ಮತ್ತು ವಿಫುಲ ಬುದ್ಧಿಯನ್ನು ಹೊಂದಿರುವ, ವೇದ ಮತ್ತು ವೇದಾಂಗವನ್ನು ತಿಳಿದಿರುವ, ಚಿರಂಜೀವಿ, ಶಾಂತ ಹಾಗೂ ವಿಷಯಗಳ ಮೇಲೆ ವಿಜಯವನ್ನು ಹೊಂದಿರುವ, ಶುದ್ಧವಾದ ತೇಜ ಪ್ರಕಾಶಿಸುತ್ತಿರುವ, ಜ್ಞಾನವಂತನಾಗಿರುವ ಭಗವಾನ ವೇದವ್ಯಾಸರಿಗೆ ನಾನು ಸದಾ ಸರ್ವದಾ ಶರಣಾಗಿದ್ದೇನೆ.

ಪಾಕಿಸ್ತಾನದಿಂದ ನಕಲಿ ‘ಆರೋಗ್ಯ ಸೇತು ಆಪ್‌ನ ಮೂಲಕ ಭಾರತೀಯ ಸೈನಿಕರ ಮಾಹಿತಿಯನ್ನು ಕದಿಯಲು ಯತ್ನ !

ಪಾಕ್ ಗೂಡಾಚಾರ ಸಂಸ್ಥೆ ಐ.ಎಸ್.ಐ. ಭಾರತದಲ್ಲಿ ಕೊರೋನಾದ ಸಂದರ್ಭದಲ್ಲಿ ತಯಾರಿಸಲಾಗಿರುವ ‘ಆರೋಗ್ಯ ಸೇತು ಆಪ್‌ನಂತ ನಕಲಿ ಆಪ್ ತಯಾರಿಸಿದೆ. ಈ ಮೂಲಕ ಅವರು ಭಾರತೀಯ ಸೈನಿಕರ ಸಂಚಾರಿವಾಣಿಯನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂಬ ಮಾಹಿತಿ ಬೆಳಕಿಗೆ ಬಂದಿರುವುದರಿಂದ ಸೈನಿಕರು ಹಾಗೂ ಅರೆಸೇನಾ ಪಡೆಗಳಿಗಾಗಿ ಮಾರ್ಗದರ್ಶಕ ಸೂಚನೆಯನ್ನು ಜಾರಿಗೊಳಿಸಲಾಗಿದೆ.

ಸಾಧಕರಿಗೆ ಮಹತ್ವದ ಸೂಚನೆ

‘ಬಿರುಗಾಳಿ, ಭೂಕುಸಿತ, ಭೂಕಂಪ, ನೆರೆಹಾವಳಿ, ಸಂಚಾರ ನಿಷೇಧದಂತಹ ಆಪತ್ಕಾಲದ ಪರಿಸ್ಥಿತಿಗಳು ಯಾವುದೇ ಕ್ಷಣದಲ್ಲಿ ಉದ್ಭವಿಸಬಹುದು. ಇಂತಹ ಸ್ಥಿತಿಯಲ್ಲಿ ಅತ್ತರ್, ಕರ್ಪೂರ, ಊದುಬತ್ತಿ, ಗೋಮೂತ್ರ ಇತ್ಯಾದಿ ಸನಾತನದ ಸಾತ್ತ್ವಿಕ ಉತ್ಪಾದನೆಗಳು ದೊರೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ಸಾಧಕರು ಮುಂದಿನಂತೆ ಮಾನಸ-ಉಪಾಯಗಳನ್ನು ಮಾಡಬಹುದು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಜಗತ್ತಿನಲ್ಲಿ ಚಮತ್ಕಾರವೆಂಬುದು ಏನೂ ಇರುವುದಿಲ್ಲ. ಎಲ್ಲವೂ ಈಶ್ವರೇಚ್ಛೆ, ಕೆಟ್ಟ ಶಕ್ತಿ ಮತ್ತು ಪ್ರಾರಬ್ಧಕ್ಕನುಸಾರವೇ ನಡೆಯುತ್ತದೆ. ಆದರೆ ಬುದ್ಧಿಜೀವಿಗಳಿಗೆ ಇದು ತಿಳಿಯುವುದಿಲ್ಲ.

ಬೆಂಗಳೂರಿನಲ್ಲಿ ವೈದ್ಯಕೀಯ ತಂಡದ ಮೇಲೆ ದಾಳಿ ಮಾಡಿದ ೫೯ ಮತಾಂಧರ ಬಂಧನ

ಎಪ್ರಿಲ್ ೧೯ ರಂದು ಕೊರೋನಾ ಶಂಕಿತರ ಮಾಹಿತಿಯನ್ನು ಒಟ್ಟು ಮಾಡಲು ತೆರಳಿದ್ದ ವೈದ್ಯಕೀಯ ತಂಡದ ಮೇಲೆ ದಾಳಿ ಮಾಡಿದ ೫೯ ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿಯ ಪಾದರಾಯನಪುರ ಭಾಗದಲ್ಲಿ ಈ ದಾಳಿ ನಡೆದಿತ್ತು. ಪೊಲೀಸರು ಬಂಧಿಸಿದ್ದ ಮತಾಂಧರಲ್ಲಿ ಫಿರೋಜಾ ಹೆಸರಿನ ಓರ್ವ ಮಹಿಳೆಯೂ ಇದ್ದಾಳೆ. ಈ ಮಹಿಳೆಯೇ ಅಲ್ಲಿಯ ಮತಾಂಧರಿಗೆ ವೈದ್ಯಕೀಯ ತಂಡದ ವಿರುದ್ಧ ಪ್ರಚೋದಿಸಿದ್ದಳು.

ಪಾಲಘರನಲ್ಲಿ ಸಾಧುಗಳ ಹಂತಕರನ್ನು ಬಿಡುವುದಿಲ್ಲ !

ಈ ಪ್ರಕರಣವನ್ನು ಅಪರಾಧ ತನಿಖಾ ತಂಡ (ಸಿ.ಐ.ಡಿ ಮೂಲಕ) ತನಿಖೆಯನ್ನು ಮಾಡಲಾಗುವುದು. ಹಲ್ಲೆ ಮಾಡಿದವರಲ್ಲಿ ಯಾರನ್ನೂ ಬಿಡುವುದಿಲ್ಲ, ಎಂಬ ಎಚ್ಚರಿಕೆಯನ್ನು ಮುಖ್ಯಮಂತ್ರಿ ಉದ್ಧವ ಠಾಕರೆ ಇವರು ನೀಡಿದರು. ಎಪ್ರಿಲ್ ೨೦ ರಂದು ಸಾಮಾಜಿಕ ಮಾಧ್ಯಮಗಳ ಮೂಲಕ ಜನರೊಂದಿಗೆ ಚರ್ಚೆಯನ್ನು ಮಾಡುತ್ತಿರುವಾಗ ಈ ಮೇಲಿನ ಹೇಳಿಕೆಯನ್ನು ನೀಡಿದರು.