ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಡೆಮೊಕ್ರಟಿಕ್ ಪಕ್ಷದಿಂದ ಶ್ರೀ ದುರ್ಗಾದೇವಿಯ ವಿಡಂಬನೆ

ಮುಂದಿನ ತಿಂಗಳು ನಡೆಯಲಿರುವ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮೊಕ್ರಟಿಕ್ ಪಕ್ಷದ ಜೋ ಬಿಡನ್ ಸ್ಪರ್ಧಿಸಲಿದ್ದಾರೆ. ಭಾರತೀಯ ಮೂಲದ ಮಹಿಳೆಯ ಮಗಳು ಕಮಲಾ ಹ್ಯಾರಿಸ್ ಉಪಾಧ್ಯಕ್ಷ ಪದವಿಯ ಅಭ್ಯರ್ಥಿಯಾಗಿದ್ದಾರೆ. ಭಾರತದಲ್ಲಿ ಚುನಾವಣಾ ಪ್ರಚಾರದಲ್ಲಿ ಧರ್ಮದ ಆಧಾರದಲ್ಲಿ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಅತ್ಯಾಚಾರ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸಲಾಗುವುದು

ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಬದಲು ಮರಣದಂಡನೆ ನೀಡಲು ಬಾಂಗ್ಲಾದೇಶ ಸರಕಾರವು ತನ್ನ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಸಧ್ಯ ಸಂಸತ್ತಿನ ಅಧಿವೇಶನ ನಡೆಯುತ್ತಿಲ್ಲದ ಕಾರಣ ಸರಕಾರದಿಂದ ಸುಗ್ರೀವಾಜ್ಞೆ ಹೊರಡಿಸಲಾಗುವುದು.

ಚರ್ಚ್‌ನಲ್ಲಿ ಇಬ್ಬರು ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಬೆಳೆಸುತ್ತಿದ್ದ ಲೂಯಿಸಿಯಾನ ಚರ್ಚ್‌ನ ಪಾದ್ರಿಯ ಬಂಧನ

ಇಲ್ಲಿಯ ಪ್ರಸಿದ್ಧ ಲೂಯಿಸಿಯಾನ ಚರ್ಚ್‌ನ ಕ್ಲಾರ್ಕ್ ಎಂಬ ಹೆಸರಿನ ಓರ್ವ ಪಾದ್ರಿಯು ಚರ್ಚ್‌ನೊಳಗೆ ಇಬ್ಬರು ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಬೆಳೆಸುತ್ತಿರುವಾಗ ಸಿಕ್ಕಿಬಿದ್ದನಂತರ ಆತನನ್ನು ಹಾಗೂ ಇಬ್ಬರೂ ಮಹಿಳೆಯರನ್ನು ಬಂಧಿಸಲಾಗಿದೆ. ವ್ಯಕ್ತಿಯೊಬ್ಬರು ಇದನ್ನು ನೋಡಿದ ನಂತರ ಈ ಘಟನೆಯು ಬೆಳಕಿಗೆ ಬಂದಿದೆ.

ಪಾಕಿಸ್ತಾನದಲ್ಲಿ ಮತಾಂಧರಿಂದ ಹಿಂದೂ ದೇವಸ್ಥಾನ ಧ್ವಂಸ

ಸಿಂಧ್ ಪ್ರಾಂತ್ಯದ ಬದಿನ್ ಜಿಲ್ಲೆಯ ಕಡಿಯು ಘನೌರ್ ಪಟ್ಟಣದ ಶ್ರೀ ರಾಮದೇವ ಕಾದಿಯೋಘಂವರ ಈ ಹಿಂದೂ ದೇವಸ್ಥಾನವನ್ನು ಅಕ್ಟೋಬರ್ ೧೦ ರಂದು ಧ್ವಂಸ ಮಾಡಲಾಯಿತು. ದೇವಸ್ಥಾನದಲ್ಲಿದ್ದ ವಿಗ್ರಹಗಳನ್ನು ಒಡೆಯಲಾಗಿದೆ. ಈ ಪ್ರಕರಣದಲ್ಲಿ ಮೊಹಮ್ಮದ್ ಇಸ್ಮಾಯಿಲ್ ಶೈದಿಯನ್ನು ಬಂಧಿಸಲಾಗಿದೆ.

ಮಾತೆ ಶ್ರೀ ಲಕ್ಷ್ಮೀದೇವಿಯು ಆಂತರಿಕ ಸೌಂದರ್ಯಕ್ಕೆ ಪ್ರೇರಣೆ ನೀಡುತ್ತಾಳೆ ! – ಸಲಮಾ ಹಯೆಕ್

ಹಾಲಿವುಡ್‌ನ ಖ್ಯಾತ ನಟಿ ಸಲಮಾ ಹಯೆಕ್ ಇವರು ಸಾಮಾಜಿಕ ಮಾಧ್ಯಮವಾದ ‘ಇನ್‌ಸ್ಟಾಗ್ರಾಮ್’ನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು, ಮಾತೆ ಶ್ರೀ ಲಕ್ಷ್ಮೀದೇವಿಯು ಆಂತರಿಕ ಸೌಂದರ್ಯವನ್ನು ಪ್ರೇರಣೆ ನೀಡುತ್ತಾಳೆ ಎಂದು ಬರೆದಿದ್ದಾರೆ.

ಹಿಂದೂ ಧರ್ಮವನ್ನು ಭಯೋತ್ಪಾದನೆಗೆ ಜೋಡಿಸುವ ಪುಸ್ತಕಗಳನ್ನು ಹಿಂಪಡೆದ ಬ್ರಿಟಿಷ್ ಶಾಲೆ ಮತ್ತು ಪ್ರಕಾಶಕರು !

ಬ್ರಿಟನ್‌ನ ಒಂದು ಶಾಲೆಯ ಜಾಲತಾಣದಿಂದ ‘ಬ್ರಿಟಿಷ್ ಜಿ.ಸಿ.ಎಸ್.ಇ. ಧಾರ್ಮಿಕ ಸ್ಟಡೀಸ್ ವರ್ಕ್‌ಬುಕ್’ಅನ್ನು ತೆಗೆಯಲಾಗಿದೆ. ಅದೇ ರೀತಿ ಪ್ರಕಾಶಕರು ಪುಸ್ತಕವನ್ನು ಹಿಂತೆಗೆದುಕೊಂಡಿದ್ದಾರೆ. ಇಲ್ಲಿನ ಹಿಂದೂಗಳ ವಿರೋಧದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ಪುಸ್ತಕದಲ್ಲಿ ಹಿಂದೂಗಳನ್ನು ಭಯೋತ್ಪಾದಕರು ಎಂದು ಹೇಳಲಾಗಿತ್ತು.

ಯುದ್ಧಕ್ಕೆ ಸಿದ್ಧರಾಗಿರಿ ! – ಪಾಕ್‌ನ ಸೇನಾದಳ ಮುಖ್ಯಸ್ಥ ಬಾಜವಾರಿಂದ ಸೈನ್ಯಕ್ಕೆ ಆದೇಶ

ಯಾವುದೇ ಸವಾಲನ್ನು ಎದುರಿಸಲು ಪಾಕಿಸ್ತಾನ ಸೇನೆಯು ಸಿದ್ಧವಾಗಿದೆ. ನಮ್ಮ ದೇಶದ ಸಾರ್ವಭೌಮತ್ವದ ಮೇಲೆ ಆಕ್ರಮಣಕ್ಕೆ ಪ್ರಯತ್ನಿಸಿದರೆ ಅವರಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು. ಅದಕ್ಕಾಗಿ ಸೈನ್ಯವು ಸಿದ್ಧವಾಗಿರಬೇಕು, ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಜವಾ ಆದೇಶ ನೀಡಿದ್ದಾರೆ.

ಇಸ್ಲಾಂ ಧರ್ಮದ ಹದೀಸ್‌ನ ಸಾಲುಗಳನ್ನು ಹಾಡಿನಲ್ಲಿ ಬಳಸಿದ್ದಕ್ಕಾಗಿ ಪಾಪ್ ಗಾಯಕಿ ರಿಹಾನಾ ಇವಳಿಂದ ಕ್ಷಮೆಯಾಚನೆ

ಪ್ರಸಿದ್ಧ ಪಾಪ್ ಗಾಯಕಿ ರಿಹಾನಾಳು ತನ್ನ ಕಾರ್ಯಕ್ರಮವೊಂದರಲ್ಲಿ ಹಾಡಿದ ಹಾಡಿನಲ್ಲಿ ಇಸ್ಲಾಂ ಧರ್ಮದ ಅವಮಾನ ಆಗಿದ್ದ ಬಗ್ಗೆ ಕ್ಷಮೆಯಾಚಿಸಿದ್ದಾಳೆ. ಈ ಹಾಡಿನಲ್ಲಿ, ರಿಹಾನಾಳು ಇಸ್ಲಾಂ ಧರ್ಮದ ಹದೀಸ್‌ನ ಕೆಲವು ಸಾಲುಗಳನ್ನು ಬಳಸಿದ್ದಳು.

ಹಿಂದೂಗಳ ಬೇಡಿಕೆಗಾಗಿ ವಾವುನಿಯಾ (ಶ್ರೀಲಂಕಾ)ದಲ್ಲಿ ಹಿಂದೂಗಳ ಭವ್ಯ ಮೆರವಣಿಗೆ

ಶ್ರೀಲಂಕಾದಲ್ಲಿ ಹಿಂದುತ್ವನಿಷ್ಠ ನಾಯಕ ಶ್ರೀ. ಸಚಿತಾನಂದನಜಿ, ಶಿವಸೇನಾಯಿಯವರ ನೇತೃತ್ವದಲ್ಲಿ ಎಲ್ಲಾ ಹಿಂದೂ ಸಂಘಟನೆಗಳು ಸರಕಾರದ ಬಳಿ ೬ ಕಲಂನ ಬೇಡಿಕೆಗಳನ್ನು ಮಂಡಿಸಿ ಲಂಕಾದ ವಾವುನಿಯಾದಲ್ಲಿ ಭವ್ಯ ಮೆರವಣಿಗೆ ನಡೆಸಿದರು. ಸುಮಾರು ೨೫೦೦ ಹಿಂದೂಗಳು ಇದರಲ್ಲಿ ಭಾಗವಹಿಸಿದ್ದರು.

ಜಗತ್ತಿನಾದ್ಯಂತ ಇಸ್ಲಾಂ ಸಂಕಟದಲ್ಲಿದೆ ! – ಫ್ರಾನ್ಸ್‌ನ ರಾಷ್ಟ್ರಪತಿ ಎಮ್ಯಾನುಯೆಲ್ ಮ್ಯಾಕ್ರೊಂ

ಒಂದು ಧರ್ಮದಿಂದಾಗಿ ಇಡೀ ಜಗತ್ತು ಇಂದು ಗಂಡಾಂತರದಲ್ಲಿದೆ. ‘ನಮಗೆ ಕಟ್ಟರ(ಅಸಹಿಷ್ಣು/ ಛಲವಾದಿ) ಇಸ್ಲಾಮ್‌ವಾದಿಗಳೊಂದಿಗೆ ಹೋರಾಡಬೇಕಿದೆ’ ಎಂದು ಫ್ರೆಂಚ್‌ನ ರಾಷ್ಟ್ರಪತಿ ಇಮ್ಯಾನುಯೆಲ್ ಮ್ಯಾಕ್ರೋಂ ಒಂದು ಭಾಷಣದ ಮೂಲಕ ಕರೆ ನೀಡಿದರು. ಇದನ್ನು ‘ಎ.ಎಫ್.ಪಿ.’ ಈ ಸುದ್ದಿ ಸಂಸ್ಥೆಯು ವರದಿ ಮಾಡಿದೆ.