ಮುಝಾಫ್ಫರಪುರ್ (ಬಿಹಾರ)ದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಕರಣದಲ್ಲಿ ಪ್ರವಚನಕಾರ ಮೊರಾರಿ ಬಾಪುರವರ ವಿರುದ್ಧ ದೂರು ದಾಖಲು.

ಪ್ರಸಿದ್ಧ ಪ್ರವಚನಕಾರ ಮೊರಾರಿ ಬಾಪುರವರ ವಿರುದ್ಧ ಅಖಿಲ ಭಾರತವರ್ಷಿಯ ಯಾದವ್ ಮಹಾಸಭಾ’ದ ಅಧ್ಯಕ್ಷ ಜವಾಹರಲಾಲ್ ರಾಯ ಇವರು ದೂರು ನೀಡಿದ್ದಾರೆ. ಮುಖ್ಯ ನ್ಯಾಯದಂಡಾಧಿಕಾರಿ ಮುಖೇಶ ಕುಮಾರ ಇವರೆದುರು ಆಲಿಕೆ ನಡೆಸಲಾಗುವುದು.

‘ಚೀನಾದ ಸರಕುಗಳನ್ನು ಬಹಿಷ್ಕರಿಸುವ ಕರೆ ಸಂಪೂರ್ಣ ವಿಫಲ(ವಂತೆ) !’ – ಚೀನಾ ಹೇಳಿಕೆ

ಸಾಮಾನ್ಯ ಭಾರತೀಯರನ್ನು ಚೀನಾ ವಿರುದ್ಧ ಪ್ರಚೋದಿಸುವ ಮತ್ತು ಚೀನಾಕ್ಕೆ ಕಳಂಕ ತರುವ ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ. ಚೀನಾ ಉತ್ಪನ್ನಗಳು ಸಾಮಾನ್ಯ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ ಮತ್ತು ಅದನ್ನು ತೆಗೆದುಹಾಕಲು ಕಷ್ಟವಿದೆ. ಚೀನಾದ ಸರಕುಗಳನ್ನು ಬಹಿಷ್ಕರಿಸುವ ಕರೆ ಸಂಪೂರ್ಣ ವಿಫಲವಾಗಲಿದೆ, ಎಂದು ಚೀನಾದ ಸರಕಾರಿ ದಿನಪತ್ರಿಕೆ ‘ಗ್ಲೋಬಲ್ ಟೈಮ್ಸ್’ನ ಲೇಖನವೊಂದರಲ್ಲಿ ಹೇಳಿದೆ.

ಬಾಂಗ್ಲಾದೇಶದಲ್ಲಿ ಮತಾಂಧ ಪೊಲೀಸರ ಹಲ್ಲೆಯಿಂದ ಮೃತಪಟ್ಟ ಹಿಂದೂ ರೈತ

ಗೋಪಾಲಗಂಜ್‌ನ ಕೋಟಲಿಪಾರಾದಲ್ಲಿ ನಿಖಿಲ್ ಕರ್ಮಾಕರ್ ಎಂಬ ಓರ್ವ ರೈತನನ್ನು ಪೊಲೀಸರು ಥಳಿಸಿದ ಪರಿಣಾಮ ಆತನ ಬೆನ್ನುಮೂಳೆಯು ೩ ಸ್ಥಳಗಳಲ್ಲಿ ಮುರಿಯಿತು. ಸರ್ಕಾರಿ ಆಸ್ಪತ್ರೆಯಲ್ಲಿ ಆತನ ಮೇಲೆ ಚಿಕಿತ್ಸೆ ನಡೆಯುತ್ತಿರುವಾಗ ಮೃತಪಟ್ಟಿದ್ದಾನೆ. ಈ ಘಟನೆ ಜೂನ್ ೨ ರಂದು ನಡೆದಿದೆ.

ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದೆ ಎಂದ ಪಾಕ್ ನ ಸರಕಾರಿ ದೂರದರ್ಶನ

ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿರುವಾಗ ಪಾಕಿಸ್ತಾನವು ಅದರ ಕೆಲವು ಪ್ರದೇಶಗಳನ್ನು ಅಕ್ರಮವಾಗಿ ನಿಯಂತ್ರಣದಲ್ಲಿಟ್ಟುಕೊಂಡಿದೆ. ಇದು ಪಾಕ್ ಆಕ್ರಮಿತ ಕಾಶ್ಮೀರದ ಭಾಗವನ್ನು ಭಾರತದ ನಕ್ಷೆಯಲ್ಲಿ ತೋರಿಸಲಾಗುತ್ತದೆ, ಆದರೆ ಪಾಕ್ ಅದು ತನ್ನ ನಕ್ಷೆಯಲ್ಲಿ ತೋರಿಸುತ್ತದೆ.

ಕಳೆದ ೨೪ ಗಂಟೆಗಳಲ್ಲಿ ಕಾಶ್ಮೀರದಲ್ಲಿ ೯ ಉಗ್ರರ ಹತ್ಯೆ

ಜೂನ್ ೮ ರ ಬೆಳಿಗ್ಗೆ ಇಲ್ಲಿಯ ಪಿಂಜೋರಾ ಪ್ರದೇಶದಲ್ಲಿ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ೪ ಉಗ್ರರನ್ನು ಹತ್ಯೆ ಮಾಡಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ಭದ್ರತಾ ಪಡೆಗಳು ಒಟ್ಟು ೯ ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಜೂನ್ ೭ ರಂದು ಶೋಪಿಯಾನ್‌ನಲ್ಲೇ ರೆಬನ್‌ದಲ್ಲಿ ೫ ಭಯೋತ್ಪಾದಕರ ಹತ್ಯೆ ಮಾಡಲಾಗಿತ್ತು.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಶಿವಾಜಿ ರಾಜ್ಯಾಭಿಷೇಕ ದಿನ’ದ ನಿಮಿತ್ತ ‘ಆನ್‌ಲೈನ್’ದಲ್ಲಿ ವಿಶೇಷ ಸಂವಾದ !

ವೈಯಕ್ತಿಕ ಜೀವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಧರ್ಮಪಾರಾಯಣರಾಗಿದ್ದರು, ಅದೇರೀತಿ ಅವರ ರಾಜಧರ್ಮವು ಸನಾತನ ಹಿಂದೂ ಧರ್ಮದ ಮೌಲ್ಯಗಳನ್ನು ಆಧರಿಸಿಯೇ ಇತ್ತು. ಅವರು ‘ಸೆಕ್ಯುಲರ್‌ವಾದಿ’ ಅಲ್ಲ, ಬದಲಾಗಿ ಹಿಂದೂ ಧರ್ಮರಕ್ಷಕರಾಗಿದ್ದರು. ಶಿವಾಜಿ ಮಹಾರಾಜರ ರಾಜ್ಯಾಭಿಷೇಕ ಸಮಾರಂಭವನ್ನು ವೈದಿಕ ಪದ್ದತಿಯಿಂದ ಮಾಡಲಾಯಿತು.

ತಬಲಿಗೀಗಳ ವಿರುದ್ಧ ಆಗಿಂದಾಗಲೇ ಕ್ರಮ ಕೈಗೊಳ್ಳದಿದ್ದರೆ ಉತ್ತರಪ್ರದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು ! – ಯೋಗಿ ಆದಿತ್ಯನಾಥ, ಮುಖ್ಯಮಂತ್ರಿ, ಉತ್ತರ ಪ್ರದೇಶ

ತಬಲಿಗೀ ಜಮಾತಿನ ಸದಸ್ಯರ ವಿರುದ್ಧ ಅದೇ ಸಮಯದಲ್ಲಿ ಕ್ರಮ ಕೈಗೊಳ್ಳದೇ ಇರುತ್ತಿದ್ದರೆ, ಉತ್ತರ ಪ್ರದೇಶ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಹಿಂದಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಭದ್ರತಾ ಪಡೆಗಳನ್ನು ಅವಮಾನಿಸಿದ್ದಕ್ಕಾಗಿ ಏಕತಾ ಕಪೂರ್‌ನಿಂದ ಕ್ಷಮೆಯಾಚನೆ

ಏಕತಾ ಕಪೂರ್ ತಮ್ಮ ‘ಎಕ್ಸ್.ಎಕ್ಸ್.ಎಕ್ಸ್.-೨’ ಈ ‘ವೆಬ್ ಸಿರಿಜ್’ನಲ್ಲಿ ಅಕ್ಷೇಪಾರ್ಹ ದೃಶ್ಯದ ಪ್ರಕರಣದಲ್ಲಿ ಭಾರತೀಯ ಭದ್ರತಾ ಪಡೆಗಳಲ್ಲಿ ಕ್ಷಮೆಯಾಚಿಸುತ್ತಾ ಈ ದೃಶ್ಯಗಳನ್ನು ತೆಗೆದು ಹಾಕಿರುವ ಮಾಹಿತಿಯನ್ನು ನೀಡಿದ್ದಾರೆ. ಈ ದೃಶ್ಯದಲ್ಲಿ ಓರ್ವ ಸೇನಾಧಿಕಾರಿಯ ಹೆಂಡತಿಯನ್ನು ಇತರ ಪುರುಷರೊಂದಿಗೆ ಅಕ್ಷೇಪಾರ್ಹ ಸ್ಥಿತಿಯಲ್ಲಿ ತೋರಿಸಲಾಗಿದೆ.

ಶಾಜಾಪುರದ (ಮಧ್ಯಪ್ರದೇಶ) ಖಾಸಗಿ ಆಸ್ಪತ್ರೆಯೊಂದರಲ್ಲಿ ಹಣ ಪಾವತಿಸದ ವೃದ್ಧನನ್ನು ಕಟ್ಟಿಹಾಕಿದ ಆಸ್ಪತ್ರೆ ಸಿಬ್ಬಂದಿ !

ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೃದ್ಧ ನಾಗರಿಕರೊಬ್ಬರು ಶುಲ್ಕವನ್ನು ಪಾವತಿಸಲಿಲ್ಲವೆಂದು ಅವರನ್ನು ಕಟ್ಟಿಹಾಕಿರುವ ಘಟನೆ ಬೆಳಕಿಗೆ ಬಂದಿದೆ ‘ಈ ಪ್ರಕರಣಕ್ಕೆ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣರವರು ಭರವಸೆ ನೀಡಿದ್ದಾರೆ.

ಕಾಶ್ಮೀರದಲ್ಲಿ ೪ ಉಗ್ರರ ಹತ್ಯೆ

ಇಲ್ಲಿ ಜೂನ್ ೭ ರ ಬೆಳಿಗ್ಗೆ ಇಲ್ಲಿ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ೪ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಇನ್ನೂ ಕೆಲವು ಭಯೋತ್ಪಾದಕರು ಇಲ್ಲಿ ಅಡಗಿರುವ ಸಾಧ್ಯತೆ ಇರಬಹುದು ಎಂದು ಸಂಜೆಯ ತನಕ ಶೋಧ ನಡೆಯುತ್ತಿತ್ತು. ಇಲ್ಲಿನ ರೆಬನ್ ಗ್ರಾಮದಲ್ಲಿ ಚಕಮಕಿ ನಡೆದಿದೆ.