ಲಷ್ಕರ್-ಎ-ತೋಯಬಾ ಮತ್ತು ಹಿಜಬುಲ್ ಮುಜಾಹಿದ್ದೀನ್ ಸ್ವಾತಂತ್ರ್ಯ ದಿನದಂದು ಆತ್ಮಾಹುತಿ ದಾಳಿಗೆ ನಡೆಸಿದ್ದರು ಸಿದ್ಧತೆ

ಪಠಾಣಕೋಟನಿಂದ ಬಂಧಿಸಲ್ಪಟ್ಟ ಲಷ್ಕರ್-ಎ-ತೋಯಬಾದ ಅಮೀರ್ ಹುಸೇನ್ ವಾನಿ ಮತ್ತು ವಾಸಿಮ ಹಸನ್ ವಾನಿಯ ವಿಚಾರಣೆ ನಡೆಸುತ್ತಿದ್ದಾರೆ. ಅವರು ನೀಡಿದ ಮಾಹಿತಿಯ ಪ್ರಕಾರ ಲಷ್ಕರ್-ಎ-ತೋಯಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಆಗಸ್ಟ್ ೧೫ ರಂದು ಆತ್ಮಾಹುತಿ ದಾಳಿ ನಡೆಸಲು ಸಿದ್ಧತೆ ನಡೆಸಿದ್ದಾರೆ.

‘ಪ್ಲೇಸಸ್ ಆಫ್ ವರ್ಶಿಪ್’ ಗೆ ವಿರೋಧಿಸುವ ಹಿಂದೂಗಳ ಅರ್ಜಿ ವಿರುದ್ಧ ‘ಜಮಿಯತ್ ಉಲೆಮಾ-ಎ-ಹಿಂದ್’ನಿಂದ ಅರ್ಜಿ ಸಲ್ಲಿಕೆ

ಕಾಶಿ ಮತ್ತು ಮಥುರಾ ದೇವಸ್ಥಾನ ಪ್ರಕರಣದಲ್ಲಿ ‘ಪ್ಲೇಸಸ್ ಆಫ್ ವರ್ಶಿಪ್’ನ ೧೯೯೧ ರ ಕಾಯ್ದೆಯ ವಿರುದ್ಧ ‘ವಿಶ್ವ ಭದ್ರ ಪುರೋಹಿತ ಮಹಾಸಂಘ’ವು ಸಲ್ಲಿಸಿದ್ದ ಅರ್ಜಿಯ ವಿರುದ್ಧ ‘ಜಮಿಯತ್ ಉಲೆಮಾ-ಎ-ಹಿಂದ್’ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ‘ಜಮಿಯತ್’ ತನ್ನ ಅರ್ಜಿಯಲ್ಲಿ, ‘ನ್ಯಾಯಾಲಯವು ಮಹಾಸಂಘದ ಅರ್ಜಿಯಿಂದ ನೋಟಿಸ್ ನೀಡಬಾರದು. ಈ ಪ್ರಕರಣದಿಂದ ದೇಶದ ಜಾತ್ಯತೀತಕ್ಕೆ ಧಕ್ಕೆಯಾಗಬಹುದು’ ಎಂದು ಹೇಳಿದೆ.

ಭಾರತೀಯ ಸಮಾಜದ ಭಾವನೆಗಳನ್ನು ನೋಯಿಸುವ ಟಿ.ವಿ. ಧಾರಾವಾಹಿಗಳನ್ನು ನಿಯಂತ್ರಿಸಲು ಕಠಿಣ ಕಾನೂನುಗಳನ್ನು ರೂಪಿಸಿ ! – ಸಂಸ್ಕಾರ ಭಾರತಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾದ ‘ಸಂಸ್ಕೃತ ಭಾರತಿ’ಯ ಅಖಿಲ ಭಾರತ ಪ್ರತಿನಿಧಿ ಕಾರ್ಯನಿರ್ವಾಹಕ ಸಭೆಯು ದೂರದರ್ಶನದಲ್ಲಿನ ಧಾರಾವಾಹಿಯಿಂದ ದ್ವೇಷಪೂರಿತ ಹಿಂಸಾಚಾರ, ಲೈಂಗಿಕತೆ, ನಗ್ನತೆ ಮತ್ತು ಭಾರತೀಯ ಸೈನಿಕರ ಬಗ್ಗೆ ಅವಮಾನಕರ ‘ವಿಡಿಯೋ’ ಮಾಲಿಕೆ (ವೆಬ್ ಸಿರಿಸ್)ಗಳನ್ನು ಪ್ರಸಾರ ಮಾಡುವ ಬಗ್ಗೆ ತೀವ್ರವಾಗಿ ಖಂಡಿಸಿದೆ.

ಪೂಂಚ್ (ಜಮ್ಮು-ಕಾಶ್ಮೀರ) ದಲ್ಲಿ ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಒಬ್ಬ ಸೈನಿಕ ಹುತಾತ್ಮ

ಪೂಂಚ್‌ನ ಕಿರ್ಣಿ ಸೆಕ್ಟರ್‌ನ ಶಾಹಪುರ್ ಬಳಿ ಪಾಕ್ ಸೈನಿಕರು ಕದನವಿರಾಮ ಉಲ್ಲಂಘಿಸುತ್ತ ಮಾಡಿದ ಗುಂಡಿನ ದಾಳಿಯಲ್ಲಿ ಓರ್ವ ಸೈನಿಕ ಹುತಾತ್ಮರಾದರೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ಮತ್ತು ಮೊರ್ಟಾರನ್ನು ಉಪಯೋಗಿಸುತ್ತ ಪಾಕಿಸ್ತಾನವು ಭಾರತೀಯ ಸೈನಿಕರ ಚೌಕಿಗಳನ್ನು ನಾಶ ಮಾಡಲು ಪ್ರಯತ್ನಿಸಿತು;

ಗುವಾಹಟಿ (ಅಸ್ಸಾಂ) ನಲ್ಲಿ ಕ್ಷುಲ್ಲಕ ಕಾರಣದಿಂದಾಗಿ ಮತಾಂಧರಿಂದ ಹಿಂದೂ ಯುವಕನ ಕತ್ತು ಸೀಳಿ ಹತ್ಯೆ

ಗುವಾಹಟಿ (ಅಸ್ಸಾಂ) ಯಲ್ಲಿ ಹಿಂದೂ ಯುವಕ ರಿತುಪರ್ಣ ಪೆಗು ಎಂಬವರ ಕತ್ತು ಸೀಳಿ ಹತ್ಯೆ ಮಾಡಿದ ಪ್ರಕರಣದಲ್ಲಿ ಪೊಲೀಸರು ದುಲಾಲ್ ಅಲಿ, ಇಬ್ರಾಹಿಂ ಅಲಿ, ಇಬ್ರಾಹಿಂ ಇವನ ತಾಯಿ ಮನೋವರ್ ಖಾತುನ್, ಹುಸೇನ್ ಅಲಿ ಮತ್ತು ಅರಮಾನ್ ಅಲಿ ಈ ಮತಾಂಧರನ್ನು ಬಂಧಿಸಿದ್ದಾರೆ. ಒಂದು ಖುರ್ಚಿಯ ಮೇಲಿನ ವಾಗ್ವಾದದಿಂದಾಗಿ ಈ ಕೊಲೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಶಿವಾಜಿ ರಾಜ್ಯಾಭಿಷೇಕ ದಿನದ ನಿಮಿತ್ತ ‘ಆನ್‌ಲೈನ್ದಲ್ಲಿ ವಿಶೇಷ ಸಂವಾದ !

ವೈಯಕ್ತಿಕ ಜೀವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಧರ್ಮಪಾರಾಯಣ ರಾಗಿದ್ದರು, ಅದೇರೀತಿ ಅವರ ರಾಜ ಧರ್ಮವು ಸನಾತನ ಹಿಂದೂ ಧರ್ಮದ ಮೌಲ್ಯಗಳನ್ನು ಆಧರಿಸಿಯೇ ಇತ್ತು. ಅವರು ‘ಸೆಕ್ಯುಲರ್‌ವಾದಿ ಅಲ್ಲ, ಬದಲಾಗಿ ಹಿಂದೂ ಧರ್ಮರಕ್ಷಕರಾಗಿದ್ದರು. ಶಿವಾಜಿ ಮಹಾರಾಜರ ರಾಜ್ಯಾಭಿಷೇಕ ಸಮಾರಂಭವನ್ನು ವೈದಿಕ ಪದ್ದತಿಯಿಂದ ಮಾಡಲಾಯಿತು.

ತೆಲಂಗಾಣ ಬಿಜೆಪಿ ಶಾಸಕ ಟಿ. ರಾಜಾಸಿಂಗ್ ಗೃಹಬಂಧನದಲ್ಲಿ !

ರಾಜ್ಯದಲ್ಲಿ ಕೊರೋನಾ ಕೈ ಮೀರಿ ಹೋಗುತ್ತಿರುವ ಪರಿಸ್ಥಿತಿಯ ಬಗ್ಗೆ ಗಮನ ಹರಿಸಲು ಮುಖ್ಯಮಂತ್ರಿಯವರ ಭೇಟಿಯಾಗಲು ಕೋರಿದ್ದ ತೆಲಂಗಾಣದ ಪ್ರಖರ ಹಿಂದುತ್ವನಿಷ್ಠ ಹಾಗೂ ಬಿಜೆಪಿ ಶಾಸಕ ಶ್ರೀ. ಟಿ. ರಾಜಾ ಸಿಂಗ್ ಅವರನ್ನು ಪೊಲೀಸರು ಗೃಹ ಬಂಧನದಲ್ಲಿರಿಸಿದರು.

ಪಾಕ್‌ನಲ್ಲಿ ಹಿಂದೂವಿನ ಸುಡುತ್ತಿರುವ ಚಿತೆಯ ಮೇಲೆ ಮತಾಂಧ ಮುಸಲ್ಮಾನರಿಂದ ನೀರು ಸುರಿದು ನಂದಿಸುವ ಪ್ರಯತ್ನ !

ದಾದು ನಗರದಲ್ಲಿ ಓರ್ವ ಹಿಂದೂ ವ್ಯಕ್ತಿಯ ಮೃತದೇಹದ ಅಂತಿಮಕ್ರಿಯೆ ಮಾಡಲು ಮತಾಂಧ ಮುಸಲ್ಮಾನರು ವಿರೋಧಿಸಿದ್ದಾರೆ. ಮತಾಂಧ ಮುಸಲ್ಮಾನರು ಸುಡುತ್ತಿರುವ ಚಿತೆಯ ಮೇಲೆ ನೀರು ಸುರಿದು ನಂದಿಸಲು ಪ್ರಯತ್ನಿಸಿದರು.

ಕುಲಗಾಮ್ (ಜಮ್ಮು – ಕಾಶ್ಮೀರ) ನಲ್ಲಿ ನಡೆದ ಚಕಮಕಿಯಲ್ಲಿ ಇಬ್ಬರು ಉಗ್ರರ ಹತ್ಯೆ

ಕುಲಗಾಮ್‌ನಲ್ಲಿ ಜೂನ್ ೧೩ ರಂದು ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಕೆಲವು ಭಯೋತ್ಪಾದಕರು ಈ ಪ್ರದೇಶದಲ್ಲಿ ಅಡಗಿದ್ದಾರೆ ಎಂಬ ಭದ್ರತಾ ಪಡೆಗಳಿಗೆ ಮಾಹಿತಿ ಬಂದ ನಂತರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಈ ಸಮಯದಲ್ಲಿ ಭಯೋತ್ಪಾದಕರು ಸೈನಿಕರ ಮೇಲೆ ಗುಂಡು ಹಾರಿಸಿದ್ದಾರೆ. ಅದಕ್ಕೆ ಸೈನಿಕರು ಪ್ರತ್ಯುತ್ತರ ನೀಡಿದರು.

ತಮ್ಮ ರಕ್ಷಣೆಗಾಗಿ ಕಾಶ್ಮೀರಿ ಹಿಂದೂಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿ !

ಭಯೋತ್ಪಾದನೆ ವಿರುದ್ಧ ಹೋರಾಡಲು ಕಾಶ್ಮೀರ ಕಣಿವೆಯಲ್ಲಿರುವ ಹಿಂದೂ ಅಲ್ಪಸಂಖ್ಯಾತರಿಗೆ ತಮ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸಬೇಕು, ಎಂದು ಜಮ್ಮು ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್.ಪಿ. ವೇದ ಇವರು ಆಂಗ್ಲ ಸುದ್ದಿವಾಹಿನಿಯೊಂದರಲ್ಲಿ ಮಾತನಾಡುತ್ತಾ ಹೇಳಿದರು. ಕಾಶ್ಮೀರಿ ಹಿಂದೂಗಳಾದ ಪಂಚಾಯತಿ ಅಧ್ಯಕ್ಷ ಅಜಯ ಪಂಡಿತಾ ಅವರನ್ನು ಜಿಹಾದಿ ಉಗ್ರರು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಅವರು ಈ ಸಲಹೆ ನೀಡಿದರು.