ಚೆನ್ನೈನ ವರಸಿದ್ಧಿ ವಿನಾಯಗರ್ ದೇವಸ್ಥಾನದಲ್ಲಿ ೧೦೮ ತೆಂಗಿನಕಾಯಿ ಒಡೆದಿದ್ದರಿಂದ ಕಮಲಾ ಹ್ಯಾರಿಸ್ ಇವರಿಗೆ ಇಲ್ಲಿಯವರೆಗೆ ಚುನಾವಣೆಯಲ್ಲಿ ಗೆಲುವು

ಅಮೇರಿಕಾದಲ್ಲಿ ಮುಂಬರುವ ಸಾರ್ವಜನಿಕ ಚುನಾವಣೆಯಲ್ಲಿ ಡೆಮೊಕ್ರಾಟಿಕ್ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಾಯಡೆನ ಇವರು ಉಪಾಧ್ಯಕ್ಷ ಸ್ಥಾನಕ್ಕಾಗಿ ಭಾರತೀಯ ಸಂಜಾತೆ ಸಿನೆಟರ ಕಮಲಾ ಹ್ಯಾರಿಸ್‌ನನ್ನು ಆರಿಸಿದ್ದಾರೆ. ಕಮಲಾನ ಬಗ್ಗೆ ಆಕೆಯ ಚಿಕ್ಕಮ್ಮ ಸರಳಾ ಗೋಪಾಲನ್ ಇವರು ಕಮಲಾದ ಇಲ್ಲಿಯವರೆಗಿನ ಚುನಾವಣೆಯಲ್ಲಿನ ಗೆಲುವಿನ ರಹಸ್ಯವನ್ನು ಒಂದು ಸಂದರ್ಶನದಲ್ಲಿ ಹೇಳಿದರು.

ಜಗತ್ತಿನಾದ್ಯಂತ ತಂಬಾಕು ಸೇವನೆಯಿಂದಾಗಿಗುವ ರೋಗಿಗಳ ಪೈಕಿ ಶೇ. ೭೦ ರಷ್ಟು ರೋಗಿಗಳು ಭಾರತದಲ್ಲಿದ್ದಾರೆ

‘ಬಿಎಮ್‌ಸಿ ಮೆಡಿಸಿನ್’ ಈ ನಿಯತಕಾಲಿಕೆಯಲ್ಲಿ ಈ ಶೋಧನೆಯು ಪ್ರಕಟಿಸಿದೆ. ತಂಬಾಕುವಿನ ಉತ್ಪಾದನೆ ಹಾಗೂ ಮಾರಾಟದ ಮೇಲೆ ನಿಷೇಧ ಹೇರುವ ಬಗ್ಗೆ ಸೂಚನೆಯನ್ನು ಈ ಶೋಧನೆಯಲ್ಲಿ ಮಾಡಲಾಗಿದ್ದು ‘ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಿದರೇ ತಂಬಾಕು ಸೇವಿಸುವ ಪ್ರಮಾಣ ಕಡಿಮೆ ಆಗುವುದು ಹಾಗೂ ಕೊರೋನಾದ ಸೋಂಕು ಹರಡುವುದನ್ನು ತಡೆಗಟ್ಟಬಹುದು’, ಎಂಬುದು ತಿಳಿದುಬಂದಿದೆ.

ಚೀನಾದಲ್ಲಿ ಕೊರೋನಾದಿಂದ ಗುಣಮುಖನಾಗಿದ್ದ ರೋಗಿಗಳಿಗೆ ಪುನಃ ಕೊರೋನಾದ ಸೋಂಕು

ಚೀನಾದ ಹುಬೈ ಪ್ರದೇಶದಲ್ಲಿ ವಾಸವಾಗಿರುವ ೬೮ ವರ್ಷದ ಮಹಿಳೆಯು ೬ ತಿಂಗಳ ಹಿಂದೆಯೇ ಕೊರೋನಾದಿಂದ ಮುಕ್ತವಾಗಿದ್ದರು. ಆಕೆಗೆ ಪುನಃ ಕೊರೋನಾದ ಸೋಂಕು ಆಗಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಇನ್ನೋರ್ವ ವ್ಯಕ್ತಿಯು ವಿದೇಶದಿಂದ ಮರಳಿದ ನಂತರ ಕೊರೋನಾದ ಸೋಂಕು ತಗಲಿತ್ತು. ನಂತರ ಆತನೂ ಕೊರೋನಾದಿಂದ ಮುಕ್ತರಾಗಿದ್ದರು.

ಇದೇ ಪ್ರಥಮ ಬಾರಿಗೆ ನ್ಯೂಯಾರ್ಕ್ಸ್‌ನ ‘ಟೈಮ್ಸ್ ಸ್ಕ್ವೇರ್’ನಲ್ಲಿ ಭಾರತದ ಸ್ವಾತಂತ್ರ್ಯ ದಿನ ನಿಮಿತ್ತ ಧ್ವಜಾರೋಹಣ

ಇಲ್ಲಿಯ ಪ್ರಸಿದ್ಧ ‘ಟೈಮ್ಸ್ ಸ್ಕ್ವೇರ್’ನಲ್ಲಿ ಭಾರತದ ೭೪ ನೇ ಸ್ವಾತಂತ್ರ್ಯದಿನ ಧ್ವಜಾರೋಹಣ ನೆರವೇರಲಿದೆ. ಇದೇ ಮೊದಲ ಬಾರಿ ಈ ರೀತಿಯಲ್ಲಿ ನಡೆಯಲಿದೆ. ಈ ಹಿಂದೆ ಆಗಸ್ಟ್ ೫ ರಂದು ಆಯೋಜಿಸಲಾಗಿದ್ದ ಶ್ರೀರಾಮಜನ್ಮಭೂಮಿಯ ಮೇಲಿನ ಶ್ರೀರಾಮಮಂದಿರದ ಭೂಮಿಪೂಜೆಯ ದಿನದಂದೂ ಕೂಡ ‘ಟೈಮ್ಸ್ ಸ್ಕ್ವೇರ್’ನಲ್ಲಿ ಶ್ರೀರಾಮಮಂದಿರದ ಚಿತ್ರವನ್ನು ಪ್ರದರ್ಶಿಸಲಾಗಿತ್ತು.

ರಶಿಯಾ ಸರಕಾರದಿಂದ ಕೊರೋನಾ ವಿರುದ್ಧದ ಲಸಿಕೆಗೆ ಮಾನ್ಯತೆ ರಾಷ್ಟ್ರಾಧ್ಯಕ್ಷ ಪುತಿನ್‌ನ ಮಗಳಿಗೂ ನೀಡಲಾಯಿತು ಲಸಿಕೆ!

ರಶಿಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ್ ಪುತಿನ್ ಇವರು ಕೊರೋನಾ ರೋಗಾಣುವಿನ ವಿರುದ್ಧ ಲಸಿಕೆಗೆ ಮಾನ್ಯತೆ ನೀಡಿದ್ದಾರೆ. ಆದ್ದರಿಂದ ಲಸಿಕೆಗೆ ಮಾನ್ಯತೆಯನ್ನು ನೀಡುವ ರಶಿಯಾ ಜಗತ್ತಿನ ಮೊದಲನೇಯ ದೇಶವಾಗಿದೆ. ‘ನನ್ನ ಇಬ್ಬರು ಮಗಳಿಗೂ ಇದರ ಲಸಿಕೆಯನ್ನು ನೀಡಲಾಗಿದೆ’, ಎಂದು ಪುತಿನ ಹೇಳಿದ್ದಾರೆ. ರಶಿಯಾದ ‘ಗಾಮಾಲಿಯಾ ಇನ್‌ಸ್ಟಿಟ್ಯುಟ್ ಆಫ್ ಆಪಿಡೆಮಿಯೊಲಾಜಿ’ ಹಾಗೂ ‘ಮೈಕ್ರೊಬಯೋಲಾಜಿ’ ಇವು ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.

ಚೀನಾದ ೨ ಸಾವಿರದ ೫೦೦ ‘ಯೂ-ಟ್ಯೂಬ್ ಚಾನೆಲ್’ಗಳನ್ನು ತೆಗೆದುಹಾಕಿದ ಗೂಗಲ್

ಗೂಗಲ್ ಸಂಸ್ಥೆಯು ಚೀನಾದ ೨ ಸಾವಿರದ ೫೦೦ ಕ್ಕೂ ಹೆಚ್ಚು ‘ಯೂ-ಟ್ಯೂಬ್ ಚಾನೆಲ್’ಗಳನ್ನು ತೆಗೆದು ಹಾಕಿದೆ. ಎಪ್ರಿಲ್ ಮತ್ತು ಜೂನ್ ಈ ಕಾಲಾವಧಿಯಲ್ಲಿ ಈ ‘ಚಾನೆಲ್ಸ್’ಗಳನ್ನು ತೆಗೆದು ಹಾಕಿದೆ; ಆದರೆ ಗೂಗಲ್ ಅವುಗಳ ಹೆಸರುಗಳನ್ನು ಮಾತ್ರ ಬಹಿರಂಗಪಡಿಸಿಲ್ಲ. ತಂತ್ರಜ್ಞಾನ ಕ್ಷೇತ್ರದಲ್ಲಿನ ತಜ್ಞರು ನೀಡಿದ ಮಾಹಿತಿಗನುಸಾರ, ‘ದಾರಿ ತಪ್ಪಿಸುವ ಮಾಹಿತಿ ಹಾಗೂ ತಪ್ಪಾದ ಅಂಶಗಳನ್ನು ಹಬ್ಬಿಸುತ್ತಿರುವ ಈ ‘ಚಾನೆಲ್ಸ್’ ತೆಗೆಯಲಾಗಿದೆ.

ಚೀನಾದಿಂದ ದೆಹಲಿ ತನಕ ಹೊಡೆಯಬಲ್ಲ ಅಣ್ವಸ್ತ್ರವಾಹಕ ಕ್ಷಿಪಣಿಯ ಪರೀಕ್ಷಣೆ

ಚೀನಾವು ‘ಡಿಎಫ್-೨೬’ ಹಾಗೂ ‘ಡಿಎಫ್-೧೬’ ಈ ಅಣ್ವಸ್ತ್ರವಾಹಕ ಕ್ಷಿಪಣಿಗಳ ಪರೀಕ್ಷಣೆಯನ್ನು ಮಾಡಿದೆ. ಈ ಕ್ಷಿಪಣಿಗಳು ದೆಹಲಿಯ ತನಕ ಹೊಡೆಯಬಹುದು. ‘ಡಿಎಫ್-೨೬’ ಈ ಕ್ಷಿಪಣಿಯು ೪ ಸಾವಿರ ಕಿ.ಮೀ. ತನಕ ಹೊಡೆಯಬಹುದು.

ಇಸ್ಲಾಮೀ ದೇಶ ಪಾಕಿಸ್ತಾನದ ಮಂತ್ರಿ ಶೇಖ ರಶೀದ್ ಇವರ ದ್ಷೇಷಭರಿತ ಮಾತುಗಳು

ಜಗತ್ತಿನ ಭೂಪಟದಿಂದ ಈಗ ಒಂದು ಅತ್ಯಂತ ಹಳೆಯ ಜಾತ್ಯತೀತ ರಾಷ್ಟ್ರವನ್ನು ತೆಗೆದುಹಾಕಲಾಗಿದೆ. ಭಾರತ ಈಗ ಹಿಂದುತ್ವನಿಷ್ಠ ದೇಶವಾಗಿದೆ. ಅದು ಈಗ ‘ರಾಮನಗರ’ ಆಗಿದೆ, ಎಂದು ಪಾಕಿಸ್ತಾನದ ಮಂತ್ರಿ ಶೇಖ್ ರಶೀದ್ ಅಹ್ಮದ್ ಇವರು ಒಂದು ‘ವಿಡಿಯೋ’ ಪ್ರಸಾರ ಮಾಡುವ ಮೂಲಕ ತಮ್ಮ ದ್ವೇಷವನ್ನು ಪ್ರಕಟಿಸಿದ್ದಾರೆ.

ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ಕಾಂಬೋಡಿಯಾದಲ್ಲಿ ಹೆಣ್ಣುಮಕ್ಕಳು ಶಾರ್ಟ್ ಸ್ಕರ್ಟ್ ಮತ್ತು ಪಾರದರ್ಶಕ ಉಡುಪುಗಳನ್ನು ತೊಡುವುದು ನಿಷೇಧಕ್ಕೊಳಗಾಗಲಿದೆ

ಪೂರ್ವ ಏಷ್ಯಾದಲ್ಲಿನ ಕಾಂಬೋಡಿಯಾ ದೇಶವು ಹೆಣ್ಣುಮಕ್ಕಳು ಶಾರ್ಟ್ ಸ್ಕರ್ಟ್ ಅಥವಾ ಪಾರದರ್ಶಕ ಉಡುಪುಗಳನ್ನು ಧರಿಸುವುದನ್ನು ಮತ್ತು ಹುಡುಗರು ಶರ್ಟ್ ಹಾಕಿಕೊಳ್ಳದೇ ಇರುವುದನ್ನು ನಿಷೇಧಿಸಲಿದೆ. ಇದರ ಬಗ್ಗೆ ಕಾಂಬೋಡಿಯಾದ ಸಂಸತ್ತಿನಲ್ಲಿ ಪ್ರಸ್ತಾವನೆಯನ್ನು ಮಂಡಿಸಲಾಗಿದೆ.

ಬಕ್ರೀದ್ ದಿನದಂದು ಪಾಕಿಸ್ತಾನದಲ್ಲಿ ಅಜ್ಞಾತರಿಂದ ಹಿಂದೂ ವ್ಯಾಪಾರಿಯ ಹತ್ಯೆ

ಬಕ್ರಿದ್‌ದಂದು ಪಾಕಿಸ್ತಾನದ ಖೇರಪುರದಲ್ಲಿ ಅಜ್ಞಾತರಿಂದ ಓರ್ವ ಹಿಂದೂ ವ್ಯಾಪಾರಿಯ ಹತ್ಯೆ ಮಾಡಲಾಯಿತು. ರಾಜಾ ಕಿಶನ್ ಚಂದ ಎಂದು ಆತನ ಹೆಸರಾಗಿತ್ತು. ಕಿಶನ ತಮ್ಮ ಮನೆಗೆ ಮರಳುತ್ತಿರುವಾಗ ಅವರ ಮೇಲೆ ಆಕ್ರಮಣ ಮಾಡಿದರು. ಅದರಲ್ಲಿ ಅವರು ಮೃತಪಟ್ಟರು. ಪಾಕಿಸ್ತಾನದ ಒಂದೇ ಒಂದು ದಿನಪತ್ರಿಕೆಯು ರಾಜಾ ಕಿಶನ ಚಂದರವರ ಹತ್ಯೆಯ ವಾರ್ತೆಯನ್ನು ಪ್ರಸಾರ ಮಾಡಲಿಲ್ಲ.