ಮಾಲ್ಡೀವ್ಸ್ ಒಪ್ಪಿಗೆ ಇಲ್ಲದ ಕಾರಣ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ೧೯ ನೇ ಸಾರ್ಕ್ ಶೃಂಗಸಭೆ ರದ್ದು

೧೯ ನೇ ಸಾರ್ಕ್ ಶೃಂಗಸಭೆಯನ್ನು ಪಾಕಿಸ್ತಾನದಲ್ಲಿ ನಡೆಸಲು ಪ್ರಸ್ತಾಪಿಸಲಾಗಿತ್ತು; ಆದರೆ ಈ ಪ್ರಸ್ತಾಪವನ್ನು ತಡೆಯುವಲ್ಲಿ ಮಾಲ್ಡೀವ್ಸ್ ಭಾರತದ ಪರವಾಗಿ ನಿಂತಿತು. ಇದಕ್ಕೂ ಮುನ್ನ ೨೦೧೬ ರಲ್ಲಿ ಸಾರ್ಕ್ ಶೃಂಗಸಭೆಯನ್ನು ಮುಂದೂಡಲಾಗಿತ್ತು. ಆ ವರ್ಷ ಪಾಕಿಸ್ತಾನದಲ್ಲಿ ಸಮ್ಮೇಳನದ ಆಯೋಜಕವಾಗಿತ್ತು; ಆದರೆ ಪಾಕಿಸ್ತಾನ ಪ್ರಾಯೋಜಿತ ಉಗ್ರರು ಭಾರತೀಯ ಸೈನ್ಯದ ಮೇಲೆ ‘ಉರಿ ದಾಳಿ’ ನಡೆಸಿದರು.

ಪಾಕಿಸ್ತಾನವು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದ ನಾಗರಿಕರನ್ನು ಪ್ರಾಣಿಗಳಂತೆ ನೋಡಿಕೊಳ್ಳುತ್ತಿದೆ !

ಪಾಕಿಸ್ತಾನವು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದ ಜನರನ್ನು ಪ್ರಾಣಿಗಳಂತೆ ನೋಡಿಕೊಳ್ಳುತ್ತಿದೆ. ಪಾಕಿಸ್ತಾನ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ ಮತ್ತು ನಮ್ಮ ಧ್ವನಿಯನ್ನು ಅದುಮಿಡಲು ಪ್ರಯತ್ನಿಸುತ್ತಿದೆ; ಆದರೆ ನಮ್ಮ ಧ್ವನಿ ಕೇಳಿಕೊಳ್ಳಬಹುದು, ಎಂಬ ವಿಶ್ವಾಸ ನಮಗಿದೆ, ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ಅಲ್ಲಿಯ ಕಾರ್ಯಕರ್ತ ಸಜ್ಜಾದ್ ರಾಜಾ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ೧೭೧ ಹಿಂದೂಗಳ ಸಾಮೂಹಿಕ ಮತಾಂತರ !

ಪಾಕಿಸ್ತಾನದ ಮಾನವಹಕ್ಕುಗಳ ಕಾರ್ಯಕರ್ತ ರಹತ್ ಆಸ್ಟಿನ್ ಇವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಅಹಸಾನ್-ಉಲ್-ತಾಲೀಮ್ ಈ ಮದರಸಾವು ಕರಾಚಿ ನಗರದಲ್ಲಿ ನಡೆದ ಒಂದು ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ೧೭೧ ಹಿಂದೂಗಳನ್ನು ಮತಾಂತರಗೊಳಿಸಲಾಗಿದೆ, ಎಂದು ಮಾಹಿತಿ ನೀಡಿದ್ದಾರೆ.

ಡೆಮಾಕ್ರಟಿಕ್ ಪಕ್ಷವು ೧೪ ಭಾರತೀಯ ಭಾಷೆಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡಿದೆ

ಅಮೆರಿಕಾದ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕಾಗಿ ಡೆಮಾಕ್ರಟಿಕ್ ಪಕ್ಷವು ೧೪ ಭಾರತೀಯ ಭಾಷೆಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡಿದೆ. ಈ ಎಲ್ಲಾ ಜಾಹೀರಾತುಗಳು ಡಿಜಿಟಲ್ ರೂಪದಲ್ಲಿವೆ. ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯು ನವೆಂಬರ್ ೩ ರಂದು ನಡೆಯಲಿದ್ದು ಜೊ ಬಾಯಡೆನ್ ಇವರು ಡೆಮಾಕ್ರಟಿಕ್ ಪಕ್ಷದ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ನೇಪಾಳದ ಹಿತಕ್ಕಾಗಿ ನೇಪಾಳವನ್ನು ಮತ್ತೊಮ್ಮೆ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ ! – ಕಮಲ ಥಾಪಾ, ಮಾಜಿ ಉಪ ಪ್ರಧಾನಿ

ನೇಪಾಳದ ಹಿತದೃಷ್ಟಿಯಿಂದ ನೇಪಾಳವನ್ನು ಮತ್ತೊಮ್ಮೆ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು, ಎಂದು ನೇಪಾಳದ ‘ರಾಷ್ಟ್ರೀಯ ಪ್ರಜಾತಂತ್ರ ಪಕ್ಷ’ ದ ನಾಯಕ ಮತ್ತು ನೇಪಾಳದ ಮಾಜಿ ಉಪ ಪ್ರಧಾನಿ ಕಮಲ್ ಥಾಪಾ ಇವರು ಸೆಪ್ಟೆಂಬರ್ ೧೯ ರಂದು ನಡೆದ ‘ಸಂವಿಧಾನ ದಿನಾಚರಣೆಯ’ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಕೊರೋನಾದ ಎರಡನೇ ಅಲೆಯ ಸಂಕೇತದಿಂದ ಬ್ರಿಟನ್‌ನಲ್ಲಿ ಮತ್ತೆ ಸಂಚಾರ ನಿಷೇಧ ಜಾರಿಗೊಳಿಸಲಾಗಿದೆ

ಕೊರೋನಾ ಸೋಂಕು ತಡೆಗಟ್ಟದಿದ್ದರೆ, ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ನಾವು ದೊಡ್ಡ ಪ್ರಮಾಣದ ನಿರ್ಬಂಧಗಳನ್ನು ವಿಧಿಸುವ ಹಕ್ಕನ್ನು ಕಾಯ್ದಿರಿಸಿದ್ದೇವೆ. ಜೀವನಶೈಲಿಯ ಬದಲಾವಣೆ ಮತ್ತು ಹೊಸ ಕ್ರಮಗಳನ್ನು ಜಾರಿಗೊಳಿಸಿದರೆ, ಕಟ್ಟುನಿಟ್ಟಾದ ನಿರ್ಬಂಧ ಹೇರುವ ಸನ್ನಿವೇ? ಬರುವುದಿಲ್ಲ. ಇದನ್ನು ‘ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ.

ಜಗತ್ತನ್ನು ಕರೋನಾದ ಕಂದಕಕ್ಕೆ ತಳ್ಳಿರುವ ವುಹಾನ್‌ನಲ್ಲಿನ ಎಲ್ಲ ವಹಿವಾಟುಗಳು ಮೊದಲಿನಂತೆಯೇ ಮುಂದುವರೆದಿದೆ

ಜಗತ್ತನ್ನು ಕರೋನಾದ ಕಂದಕಕ್ಕೆ ತಳ್ಳಿರುವ ಚೀನಾದ ನಗರವಾದ ವುಹಾನ್‌ನಲ್ಲಿನ ಎಲ್ಲಾ ವಹಿವಾಟುಗಳು ಸಾಮಾನ್ಯ ಸ್ಥಿತಿಗೆ ಮರಳಿದೆ. ವುಹಾನ್‌ನಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ‘ನೈಟ್‌ಕ್ಲಬ್’ಗಳೂ ಸಹ ಆರಂಭವಾಗಿವೆ. ವಿಶೇಷವೆಂದರೆ ಇಲ್ಲಿ ಯಾವುದೇ ನಾಗರಿಕರು ‘ಮಾಸ್ಕ್’ ಧರಿಸುವುದಿಲ್ಲ ಮತ್ತು ಸಾಮಾಜಿಕ ಅಂತರವನ್ನೂ ಪಾಲಿಸುತ್ತಿಲ್ಲ.

ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಮೇಲಾಗುವ ಅತ್ಯಾಚಾರಗಳಲ್ಲಿ ಶೇ. ೮೨ ರಷ್ಟು ತಂದೆ, ಸಹೋದರ, ಚಿಕ್ಕಪ್ಪ, ಅಜ್ಜ ಇವರಿಂದಲೇ !

ಪಾಕಿಸ್ತಾನದ ಆಡಳಿತಾರೂಡ ಪಕ್ಷ ‘ತಹರಿಕ-ಎ-ಇಂಸಾಫ್’ನ ಕಾರ್ಯಕರ್ತೆ ಶಂದಾನಾ ಗುಲಜರ ಇವರು ಪಾಕಿಸ್ತಾನ ಸರಕಾರದ ಬಳಿ ದೇಶದಲ್ಲಿ ಆಗುತ್ತಿರುವ ಅತ್ಯಾಚಾರಗಳ ಮೂಲವನ್ನು ಹುಡುಕುವಂತೆ ಆಗ್ರಹಿಸಿದ್ದಾರೆ. ಅವರು, ‘ದೇಶದ ಶೇ. ೮೨ ರಷ್ಟು ಅತ್ಯಾಚಾರದ ಘಟನೆಯಲ್ಲಿ ಸಂತ್ರಸ್ತೆಯ ಮನೆಯ ಸದಸ್ಯರೇ ಉದಾ. ತಂದೆ, ಸಹೋದರ, ಅಜ್ಜ ಅಥವಾ ಚಿಕ್ಕಪ್ಪನೇ ಆಕೆಯ ಮೇಲೆ ಅತ್ಯಾಚಾರ ಮಾಡುತ್ತಾರೆ’ ಎಂದು ಹೇಳಿದರು.

‘ಡೆಹರಾಡುನ್ ಹಾಗೂ ನೈನಿತಾಲ್ ಕೂಡಾ ನಮ್ಮದು (ಅಂತೆ) !

ನೇಪಾಳದಲ್ಲಿಯ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದಿಂದ ‘ಯುನಿಫೈಡ್ ನೇಪಾಳ ನ್ಯಾಶನಲ್ ಫ್ರಂಟ್’ ಈ ಸಂಘಟನೆಯೊಂದಿಗೆ ‘ಗ್ರೇಟರ್ ನೇಪಾಳ’ ಹೆಸರಿನ ಒಂದು ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಅದರಲ್ಲಿ ಭಾರತದ ಈ ಮೇಲಿನ ಭಾಗಗಳೊಂದಿಗೆ ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಬಿಹಾರ ಹಾಗೂ ಸಿಕ್ಕಿಮ್ ಈ ರಾಜ್ಯಗಳ ಅನೇಕ ಭಾಗ ತಮ್ಮದೆಂದು ಹೇಳಿಕೊಂಡಿದೆ.

ಪಾಕಿಸ್ತಾನದ ಸಿಂಧ್‌ನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ, ಮತಾಂತರ ಮತ್ತು ನಿಕಾಹ

ಸಿಂಧ್ ಪ್ರಾಂತ್ಯದಲ್ಲಿನ ಮೊರಿ ಎಂಬಲ್ಲಿ ೯ ನೇ ತರಗತಿಯಲ್ಲಿ ಕಲಿಯುತ್ತಿರುವ ೧೪ ವರ್ಷದ ಅಪ್ರಾಪ್ತೆ ಹಿಂದೂ ಹುಡುಗಿ ಪರಶ ಕುಮಾರಿಯನ್ನು ಅಬ್ದುಲ್ ಸಬೂರ್‌ನು ಅಪಹರಿಸಿ ಬಲವಂತವಾಗಿ ಮತಾಂತರಿಸಿ ನಂತರ ಆಕೆಯೊಂದಿಗೆ ನಿಕಾಹ ಮಾಡಿರುವ ಘಟನೆ ನಡೆದಿದೆ.