ಅಸ್ಸಾಂನಲ್ಲಿ ಹಿಂದೂ ಧರ್ಮ ಸ್ವೀಕರಿಸುವ ಮುಸ್ಲಿಂ ಮಹಿಳೆಗೆ ಕೊಲೆ ಬೆದರಿಕೆ !

ಮುಖ್ಯಮಂತ್ರಿಯಿಂದ ತನಿಖೆಗೆ ಆದೇಶ

ದಿಬ್ರುಗಡ (ಅಸ್ಸಾಂ) – ದಿಬ್ರುಗಡದ ಮಹಿಳಾ ವೈದ್ಯೆ ಅಲಿಮಾ ಅಖ್ತರ ಅವರು ಹಿಂದೂ ಧರ್ಮ ಸ್ವೀಕರಿಸಿದ ನಂತರ ಅವರ ಕುಟುಂಬ ಮತ್ತು ಧರ್ಮ ಸಹೋದರರಿಂದ ಕೊಲೆ ಬೆದರಿಕೆ ನೀಡಲಾಗುತ್ತಿದೆ ಎಂದು ಅಲಿಮಾ ಅವರು ಬಿಡುಗಡೆ ಮಾಡಿದ ವೀಡಿಯೊದಲ್ಲಿ ಮಾಹಿತಿ ನೀಡಿದ್ದಾರೆ. ಅಲಿಮಾ ಇವರು ಅಸ್ಸಾಂನ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ಈ ವೀಡಿಯೊವನ್ನು ಗಮನಿಸಿ ತಕ್ಷಣ ತನಿಖೆ ಮತ್ತು ಕ್ರಮಕೈಗೊಳ್ಳುವಂತೆ ಆದೇಶಿಸಿದ್ದಾರೆ.

1. ಅಲಿಮಾ ಅಖ್ತರ ಇವರು, ತನಗಿಂತ ದೊಡ್ಡವರಾಗಿದ್ದ ಮೌಲ್ವಿಯನ್ನು ಮದುವೆಯಾಗುವಂತೆ ಒತ್ತಡ ಹೇರಲಾಗಿತ್ತು. ಆದ್ದರಿಂದ ಅವರು ತೊರೆದರು ಎಂದು ಆರೋಪಿಸಿದ್ದಾರೆ.

2. ಮತ್ತೊಂದೆಡೆ, ಅಲಿಮಾ ಅವರ ಸಹೋದರ ವಕೀಲ ಖಾನೆ ತನ್ನ ಸಹೋದರಿ ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡುತ್ತಾ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಈ ಕುರಿತು ಅಸ್ಸಾಂನ ಪೊಲೀಸ್ ಮಹಾನಿರ್ದೇಶಕರು ಅಲಿಮಾ ಅವರ ವೀಡಿಯೊದ ಬಗ್ಗೆ ಖಾನ್ ಅವರಿಗೆ ಮಾಹಿತಿ ನೀಡಿದರು ಮತ್ತು ಅಲಿಮಾಗೆ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಖಾನ್ ಅವರಿಗೆ ತಿಳಿಸಿದರು.

3. ಪೊಲೀಸ್ ಮಹಾನಿರ್ದೇಶಕರ ಹೇಳಿಕೆಯ ಬಗ್ಗೆ ವಕೀಲ ಖಾನ್ ಅವರು ಮಾತನಾಡುತ್ತಾ, ನಾನು ಆ ವಿಡಿಯೋದಲ್ಲಿರುವ ಆಕೆಯ ಹೇಳಿಕೆಗಳನ್ನು ಒಪ್ಪುವುದಿಲ್ಲ. ಈ ಘಟನೆ ಬಗ್ಗೆ ತನಿಖೆಯಾಗಬೇಕು. ನನ್ನ ತಂಗಿಯನ್ನು ಹುಡುಕಿಕೊಡುವುದಾಗಿ ಪೊಲೀಸರು ಭರವಸೆ ನೀಡಿದ್ದರು; ಆದರೆ ಅದು ಪಾಲನೆಯಾಗುತ್ತಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂ-ಮುಸ್ಲಿಂ ಭಾಯಿ ಭಾಯಿ’ ಎಂದು ಹೇಳುವವರು ಮತ್ತು ಹಿಂದೂಗಳಿಗೆ ಸೆಕ್ಯುಲರಿಸಂ ಬಗ್ಗೆ ಉಪದೇಶ ನೀಡುವವರು ಇದರ ಬಗ್ಗೆ ಏನಾದರೂ ಹೇಳುತ್ತಾರೆಯೇ?