5 ಮುಸಲ್ಮಾನ ಬಹುಸಂಖ್ಯಾತರಾಗಿರುವ ಮತಗಟ್ಟೆಗಳು ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಮೀಸಲು !

  • ಆಸ್ಸಾಂ ರಾಜ್ಯದಲ್ಲಿನ ಮತಗಟ್ಟೆಗಳ ಮರುವಿಂಗಡಣೆ !

  • ಮತಾಂಧ ಮುಸಲ್ಮಾನರಿಂದ ವಿರೋಧ !

  • ಬೊಡೊ ಸಮುದಾಯಕ್ಕಾಗಿ ಮತಗಟ್ಟೆಗಳ ಸಂಖ್ಯೆ ಹೆಚ್ಚಿದ್ದರಿಂದ ಬೊಡೊ ಸಂಘಟನೆಗೆ ಸಮಾಧಾನ !

ಗೌಹಾಟಿ (ಅಸ್ಸಾಂ) – ರಾಷ್ಟ್ರೀಯ ಚುನಾವಣಾ ಆಯೋಗವು ಅಸ್ಸಾಂ ರಾಜ್ಯದಲ್ಲಿನ ಲೋಕಸಭಾ ಹಾಗೂ ವಿಧಾನಸಭಾ ಮತಗಟ್ಟೆಗಳನ್ನು ಹೊಸ ರೂಪದಲ್ಲಿ ರಚಿಸಲಾಗಿದೆ. ಇದರಲ್ಲಿ ರಾಜ್ಯದಲ್ಲಿನ 14 ಲೋಕಸಭೆ ಹಾಗೂ 126 ವಿಧಾನಸಭಾ ಮತಗಟ್ಟೆಗಳು ಸೇರಿವೆ. ಇದರ ಅನ್ವಯ 1 ಲೋಕಸಭಾ ಹಾಗೂ 19 ವಿಧಾನಸಭಾ ಕ್ಷೇತ್ರಗಳ ಹೆಸರುಗಳನ್ನೂ ಬದಲಾಯಿಸಲಾಗಿದೆ. ಇವುಗಳಲ್ಲಿನ 5 ಮುಸಲ್ಮಾನ ಬಹುಸಂಖ್ಯಾತ ವಿಧಾನಸಭಾ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳು ಮುಸಲ್ಮಾನರ ಬದಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರಾಗಿರಬೇಕು. ಇದರಿಂದಾಗಿ ಇಲ್ಲಿಂದ ಯಾವುದೇ ಮುಸಲ್ಮಾನ ಅಭ್ಯರ್ಥಿಯು `ಜನಪ್ರತಿನಿಧಿ’ ಎಂದು ಆಯ್ಕೆಯಾಗಿ ಬರುವುದಿಲ್ಲ. ಇದರಿಂದಾಗಿ ಮತಾಂಧ ಮುಸಲ್ಮಾನರು ಆಕ್ರೋಶಗೊಂಡಿದ್ದಾರೆ ಎಂದು ವರದಿಯಾಗಿದೆ.

ಇನ್ನೊಂದು ಕಡೆಯಲ್ಲಿ ಬೊಡೊಲ್ಯಾಂಡ ಕ್ಷೇತ್ರದಲ್ಲಿನ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯು 11 ರಿಂದ 15 ವರೆಗೆ ಹೆಚ್ಚಿಸಲಾಗಿದೆ. ಬೊಡೊ ಸಮುದಾಯಕ್ಕೆ ಹೆಚ್ಚಿನ ಪ್ರತಿನಿಧಿತ್ವ ದೊರೆತಿದ್ದರಿಂದ ಅವರ ಸಂಘಟನೆಯು ಈ ಬಗ್ಗೆ ಸಮಾಧಾನವನ್ನು ವ್ಯಕ್ತಪಡಿಸಿದೆ. ಪಂಚಾಯತಿ ಹಾಗೂ ನಗರ ಮಟ್ಟದಲ್ಲಿನ ಮತದಾನ ಕ್ಷೇತ್ರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

1. ಚುನಾವಣಾ ಆಯೋಗವು, ರಾಜ್ಯದಲ್ಲಿನ ಒಟ್ಟೂ 19 ವಿಧಾನಸಭಾ ಹಾಗೂ 2 ಲೋಕಸಭಾ ಮತಗಟ್ಟೆಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲು ಇಡಲಾಗಿದೆ. ಹಾಗೆಯೇ 1 ಲೋಕಸಭಾ ಮತ್ತು 9 ವಿಧಾನಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿಗಳಿಗಾಗಿ ಮೀಸಲು ಇರುವವು. ಈ ಮೊದಲು ಪರಿಶಿಷ್ಟ ಪಂಗಡಗಳಿಗಾಗಿ ವಿಧಾನಸಭೆಯ 16 ಹಾಗೂ ಪರಿಶಿಷ್ಟ ಜಾತಿಗಳಿಗಾಗಿ 8 ಮತಗಟ್ಟೆಗಳು ಮೀಸಲು ಇದ್ದವು ಎಂದು ಹೇಳಿದೆ.

2. ಚುನಾವಣಾ ಆಯೋಗವು ಮಾಡಿದ ಈ ಬದಲಾವಣೆಯ ಅನ್ವಯ ಕೆಲವು ಮತಗಟ್ಟೆಗಳ ಹೆಸರುಗಳನ್ನೂ ಬದಲಾಯಿಸಲಾಗಿದೆ. ಇವುಗಳಲ್ಲಿ ಪ್ರಾಮುಖ್ಯವಾಗಿ ಮಾನಕಚಾರ ವಿಧಾನಸಭಾ ಕ್ಷೇತ್ರದ ಹೆಸರನ್ನು ಬದಲಾಯಿಸಿ ಬೀರಸಿಂಹ ಜರುವಾ, ದಕ್ಷಿಣ ಸಲಾಮಾರಾವನ್ನು ಮಾನಕಚಾರ, ಗೋಬರಧನವನ್ನು ಮಾನಸ, ದಕ್ಷಿಣ ಕರೀಮಗಂಜ ಮತಗಟ್ಟೆಯ ಹೆಸರನ್ನು ಬದಲಾಯಿಸಿ ಪಥ್ಥರಕಂಡಿ ಎಂದು ಮಾಡಲಾಗಿದೆ.

3. ಆಯೋಗವು ಜ್ಯಾರಿಗೊಳಿಸಿದ ವರದಿಯಲ್ಲಿ, ಒಟ್ಟೂ 1 ಸಾವಿರದ 200 ಅರ್ಜಿಗಳ ಬಗ್ಗೆ ವಿಚಾರ ಮಾಡಲಾಗಿದೆ. 1976 ರ ನಂತರ ಮೊದಲ ಬಾರಿಗೆ ಮತಗಟ್ಟೆಗಳ ವಿಂಗಡಣೆ ಮಾಡಲಾಗಿದೆ ಎಂದು ಹೇಳಲಾಗಿದೆ.

4. ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಈ ಸಂದರ್ಭದಲ್ಲಿ ಮಾತನಾಡುತ್ತ, ಜನರ ಮನವಿ ಹಾಗೂ ರಾಜ್ಯ ಸರಕಾರವು ನೀಡಿದ್ದ ಕೆಲವು ಅಭಿಪ್ರಾಯಗಳನ್ನು ಸ್ವೀಕರಿಸಿ ಈ ವಿಂಗಡಣೆ ಮಾಡಲಾಗಿದೆ. 2021 ರಲ್ಲಿ ನಡೆದ ಚುನಾವಣೆಯ ಸಮಯದಲ್ಲಿ ಭಾಜಪದ ಘೋಷಣಾ ಪತ್ರದಲ್ಲಿ ವಿಂಗಡಣೆಯ ಅಂಶವಿದೆ. ನಾವು ನಮ್ಮ ವಚನವನ್ನು ಪೂರ್ಣಗೊಳಿಸಿದ್ದೇವೆ, ಎಂದು ಹೇಳಿದರು.

5. ಅಸ್ಸಾಂನ ಬೊಡೊ ಸಮುದಾಯಕ್ಕಾಗಿ ಕಾರ್ಯ ಮಾಡುವ `ನಿಖಿಲ ಬೊಡೊ ವಿದ್ಯಾರ್ಥಿ ಸಂಸ್ಥೆ’, `ಬೊಡೊ ಜಾತೀಯ ಪರಿಷದ’, `ಬೊಡೊ ಸಾಹಿತ್ಯ ಸಭಾ’, ಬೊಡೊ ಕ್ಷೇತ್ರಿಯ ಪರಿಷದ’, ‘ದುಲಾರಾಯಿ ಬೊಡೊ ಹರಿಮು ಅಫಾದ’, `ದುಲಾರಾಯಿ ಬೊಥೊ ಮಹಾಸಭಾ’ ಹಾಗೂ `ಬೊಡೊ ಮಹಿಳಾ ಕಲ್ಯಾಣ ಪರಿಷದ’ ಈ ಸಂಘಟನೆಗಳು ಜಂಟಿಯಾಗಿ ಸುದ್ಧಿಗೋಷ್ಠಿ ಕರೆದು ವಿಂಗಡಣೆಯ ಬಗ್ಗೆ ಆನಂದವನ್ನು ವ್ಯಕ್ತಪಡಿಸಿವೆ.

ಸಂಪಾದಕೀಯ ನಿಲುವು

ಆಸ್ಸಾಂನಲ್ಲಿ ನುಸುಳುಕೊರರ ಸಂಖ್ಯೆಯು ಹೆಚ್ಚಿದೆ. ಆದ್ದರಿಂದ ಮತಾಂಧ ಮುಸಲ್ಮಾನ ಬಹುಸಂಖ್ಯಾತರಿರುವ ಮತಗಟ್ಟೆಗಳಿಂದ ತಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಯತ್ನದಲ್ಲಿರುತ್ತಾರೆ. ರಾಜ್ಯದ ಸುರಕ್ಷೆಯ ಮೇಲೆ ಇದರಿಂದ ನೇರವಾದ ಪರಿಣಾಮವಾಗುತ್ತಿದೆ. ಮತಗಟ್ಟೆಗಳ ಮರುವಿಂಗಡಣೆಯಿಂದ ಇದಕ್ಕೆ ಕಡಿವಾಣ ಬೀಳುವುದರಿಂದ ಮತಾಂಧ ಮುಸಲ್ಮಾನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಎಂಬುದನ್ನು ಗಮನದಲ್ಲಿಡಿ !