ಯಜ್ಞದ ಪ್ರಥಮಾವತಾರವಾಗಿರುವ ‘ಅಗ್ನಿಹೋತ್ರದ ವೈಜ್ಞಾನಿಕ ಸಂಶೋಧನೆ !

೧೨ ಮಾರ್ಚ್ ೨೦೨೩ ರಂದು ‘ವಿಶ್ವ ಅಗ್ನಿಹೋತ್ರ ದಿನವಿದೆ. ಈ ನಿಮಿತ್ತ…

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ತ್ರಿಕಾಲಜ್ಞಾನಿ ಸಂತರು ಇನ್ನು ಮುಂದೆ ಭೀಕರ ಆಪತ್ಕಾಲ ವಿರಲಿದೆ ಮತ್ತು ಅದರಲ್ಲಿ ಜಗತ್ತಿನ ಅನೇಕ ಜನರು ನಾಶವಾಗುವರು ಎಂದು ಹೇಳಿದ್ದಾರೆ. ಆಪತ್ಕಾಲದಲ್ಲಿ ಮೂರನೇ ಮಹಾಯುದ್ಧವು ಭುಗಿಲೇಳುವುದು. ಎರಡನೇ ಮಹಾಯುದ್ಧ ಕ್ಕಿಂತ ಈಗ ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳ ಬಳಿಯಿರುವ ಮಹಾಸಂಹಾರಕ ಅಣ್ವಸ್ತ್ರಗಳನ್ನು ಪರಸ್ಪರರ ಮೇಲೆ ಪ್ರಯೋಗಿ ಸಲಾಗುವುದು. ಈ ಯುದ್ಧದಿಂದ ಬದುಕುಳಿಯ ಬೇಕಾದರೆ ಅದಕ್ಕಾಗಿ ಅಣ್ವಸ್ತ್ರಗಳನ್ನು ವಿಫಲಗೊಳಿಸುವ ಮತ್ತು ಅದರಿಂದ ಬರುವ ವಿಕಿರಣಗಳನ್ನು ನಾಶಗೊಳಿಸುವ ಪ್ರಭಾವಿ ಉಪಾಯವೂ ಬೇಕು. ಅದಕ್ಕಾಗಿ ಋಷಿಮುನಿಗಳು ಯಜ್ಞದ ಪ್ರಥಮಾವತಾರವಾಗಿರುವ ‘ಅಗ್ನಿಹೋತ್ರ ಎಂಬ ಉಪಾಯವನ್ನೂ ಹೇಳಿದ್ದಾರೆ. ಈ ಉಪಾಯವು ಮಾಡಲು ಅತ್ಯಂತ ಸುಲಭ ಮತ್ತು ಕಡಿಮೆ ಸಮಯದಲ್ಲಾಗುವ ಹಾಗೂ ಪ್ರಭಾವಿ ಪರಿಣಾಮವನ್ನು ದೊರಕಿಸಿಕೊಡುವಂತಹ ಉಪಾಯವಾಗಿದೆ. ಇದರಿಂದ ವಾತಾವರಣವು ಚೈತನ್ಯಮಯವಾಗುತ್ತದೆ ಮತ್ತು ರಕ್ಷಾಕವಚವೂ ಲಭಿಸುತ್ತದೆ. (ಆಧಾರ – ಸನಾತನದ ಗ್ರಂಥ ‘ಅಗ್ನಿಹೋತ್ರ)

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

ಕರ್ನಾಟಕದ ‘ಶಕ್ತಿದರ್ಶನ ಯೋಗಾಶ್ರಮದ ಸಂಸ್ಥಾಪಕರಾದ ಪ.ಪೂ. ದೇವಬಾಬಾರವರು ೭.೨.೨೦೧೭ ರಂದು ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮಕ್ಕೆ ಸದಿಚ್ಛೆಯಿಂದ ಭೇಟಿ ನೀಡಿದರು. ಆಗ ಅವರು ಆಶ್ರಮದಲ್ಲಿ ಅಗ್ನಿಹೋತ್ರ ಮಾಡುವ ಇಚ್ಛೆ ವ್ಯಕ್ತಪಡಿಸಿದರು. ಅದಕ್ಕನುಸಾರ ಆಶ್ರಮದಲ್ಲಿ ಅಂದು ಸಾಯಂಕಾಲ ಅವರು ತಮ್ಮ ಶಿಷ್ಯನಿಂದ ಅಗ್ನಿಹೋತ್ರ ಮಾಡಿಸಿಕೊಂಡರು. ‘ಅಗ್ನಿಹೋತ್ರ ಮಾಡುವುದ ರಿಂದ ವಾತಾವರಣದ ಮೇಲೆ ಏನು ಪರಿಣಾಮವಾಗುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯದಿಂದ ಒಂದು ಪರೀಕ್ಷಣೆ ಮಾಡಲಾಯಿತು. ಈ ಪರೀಕ್ಷಣೆಗೆ ‘ಯು.ಎ.ಎಸ್. (ಯೂನಿವರ್ಸಲ್ ಔರಾ ಸ್ಕ್ಯಾನರ್) ಎಂಬ ಉಪಕರಣ ವನ್ನು ಬಳಸಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆ ಮತ್ತು ಅವುಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳು

ಅಗ್ನಿಹೋತ್ರ ಮಾಡುವ ಮೊದಲು ಮತ್ತು ಮಾಡಿದ ನಂತರ ಅಗ್ನಿಹೋತ್ರದ ಪಾತ್ರೆ (ಹವನ ಕುಂಡ) ಯನ್ನು ‘ಯು.ಎ.ಎಸ್. ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು.

೧ ಅ. ಅಗ್ನಿಹೋತ್ರದ ನಂತರ ಅಗ್ನಿಹೋತ್ರದ ಪಾತ್ರೆಯ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗುವುದು : ಅಗ್ನಿಹೋತ್ರದ ಪಾತ್ರೆಯಲ್ಲಿ ನಕಾರಾತ್ಮಕ ಊರ್ಜೆ ಕಂಡು ಬರಲಿಲ್ಲ. ಅಗ್ನಿಹೋತ್ರದ ಪಾತ್ರೆಯಲ್ಲಿ ಪ್ರಾರಂಭದಲ್ಲಿ ಕಡಿಮೆ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯಿತ್ತು, ಆದರೆ ಅದಕ್ಕೆ ಪ್ರಭಾ ವಲಯವಿರಲಿಲ್ಲ. (ಆ ಸಂದರ್ಭದಲ್ಲಿ ‘ಔರಾ ಸ್ಕ್ಯಾನರ್ವು ೯೦ ಡಿಗ್ರಿ ಕೋನ ತೋರಿಸಿತು. ಸ್ಕ್ಯಾನರ್ ೧೮೦ ಡಿಗ್ರಿ ಕೋನದಲ್ಲಿ ತೆರೆದರೆ ಮಾತ್ರ ಪ್ರಭಾವಲಯ ಅಳೆಯಲು ಸಾಧ್ಯವಾಗುತ್ತದೆ.) ಅಗ್ನಿಹೋತ್ರ ಮಾಡಿದ ನಂತರ ಅಗ್ನಿಹೋತ್ರದ ಪಾತ್ರೆಯ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು. ಅದರ ಪ್ರಭಾವಲಯ ೧.೭೦ ಮೀಟರ್ ಬಂದಿತು.

ಸೌ. ಮಧುರಾ ಕರ್ವೆ

೨. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ಬಗ್ಗೆ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ಅಗ್ನಿಹೋತ್ರದ ನಂತರ ಅಗ್ನಿಹೋತ್ರದ ಪಾತ್ರೆಯ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗುವುದರ ಕಾರಣ : ಅಗ್ನಿಹೋತ್ರವು ಯಜ್ಞದ ಎಲ್ಲಕ್ಕಿಂತ ಮೊದಲ, ಸಮಗ್ರ ಮತ್ತು ಆಚರಿಸಲು ಸುಲಭ ಹಾಗೂ ಸಹಜ ರೂಪವಾಗಿದೆ. ಅಗ್ನಿಹೋತ್ರದಿಂದ ವಾತಾವರಣದಲ್ಲಿನ ರಜ-ತಮ ಕಣಗಳ ವಿಘಟನೆಯಾಗಿ ವಾತಾವರಣವು ಶುದ್ಧ ಮತ್ತು ಚೈತನ್ಯಮಯವಾಗುತ್ತದೆ. ಹಾಗೆಯೇ ಅಗ್ನಿಹೋತ್ರ ಮಾಡುವ ವ್ಯಕ್ತಿಯ ಸುತ್ತಲೂ ರಕ್ಷಾಕವಚ ನಿರ್ಮಾಣವಾಗುತ್ತದೆ. ಅಗ್ನಿಹೋತ್ರದ ಪಾತ್ರೆ ಯಲ್ಲಿ ಗೋಮಯದ (ಗೋವಿನ ಸಗಣಿಯ) ಬೆರಣಿಯ ಸಣ್ಣ ತುಂಡುಗಳನ್ನಿಟ್ಟು, ಅದರ ಮೇಲೆ ಸ್ವಲ್ಪ ಹಸುವಿನ ತುಪ್ಪವನ್ನು ಹಾಕಿ ಅಗ್ನಿಯನ್ನು ಪ್ರಜ್ವಲಿಸಲಾಗುತ್ತದೆ. ಅದರಲ್ಲಿ ತುಪ್ಪ ಮಿಶ್ರಿತ ಚಿಟಿಕೆಯಷ್ಟು ಅಖಂಡ (ಪೂರ್ಣ) ಅಕ್ಕಿಯನ್ನು ಮಂತ್ರ ಪೂರ್ವಕವಾಗಿ ೩ ಸಲ ಆಹುತಿ ನೀಡಲಾಗುತ್ತದೆ. ಈ ಸಾತ್ತ್ವಿಕ ಘಟಕಗಳಲ್ಲಿ ದೇವತೆಗಳ ತತ್ತ್ವಗಳನ್ನು ಆಕರ್ಷಿಸಿ ಪ್ರಕ್ಷೇಪಿಸುವ ಕ್ಷಮತೆಯಿರುತ್ತದೆ. ಅಗ್ನಿಹೋತ್ರದಿಂದ ದೇವತೆಗಳ ತತ್ತ್ವವು ಆಕರ್ಷಿಸಲ್ಪಟ್ಟು ಅದು ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತದೆ. ಇದರಿಂದ ವಾತಾವರಣವು ಶುದ್ಧ ಮತ್ತು ಪವಿತ್ರವಾಗುತ್ತದೆ. ಈ ಪರೀಕ್ಷಣೆಯಲ್ಲಿ ಸಂತರ ಶಿಷ್ಯನು ಅಗ್ನಿಹೋತ್ರ ಮಾಡಿದಾಗ ವಾತಾವರಣದಲ್ಲಿ ತುಂಬಾ ಪ್ರಮಾಣದಲ್ಲಿ ಚೈತನ್ಯ ನಿರ್ಮಾಣವಾಯಿತು. ಅಗ್ನಿಹೋತ್ರದ ಪಾತ್ರೆಯ ಮೇಲೆ ಅದರ ಒಳ್ಳೆಯ ಪರಿಣಾಮವಾದುದರಿಂದ ಅಗ್ನಿಹೋತ್ರದ ನಂತರ ಅಗ್ನಿಹೋತ್ರದ ಪಾತ್ರೆಯಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗಿರುವುದು ಪರೀಕ್ಷಣೆಯಿಂದ ಕಂಡುಬಂದಿತು.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೧.೩.೨೦೧೯)

ವಿ-ಅಂಚೆ : [email protected]

ಮನೆಮನೆಯಲ್ಲಿ ಅಗ್ನಿಹೋತ್ರ, ಯಜ್ಞಯಾಗ ಮತ್ತು ಹೋಮ-ಹವನ ಇತ್ಯಾದಿ ಕರ್ಮಗಳನ್ನು ಮಾಡುವುದು ಆವಶ್ಯಕ

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

‘ಮನೆಮನೆಯಲ್ಲಿ ನಡೆಯುವ ಅಗ್ನಿಹೋತ್ರ, ಬ್ರಹ್ಮಯಜ್ಞಕರ್ಮ, ಯಜ್ಞಯಾಗ ಇತ್ಯಾದಿ, ಹಾಗೆಯೇ ಅದರಂತಹ ಹೋಮಹವನ ಮುಂತಾದ ಕರ್ಮಗಳನ್ನು ಸಮಷ್ಟಿ ಸಾಧನೆಯೆಂದು ಮಾಡಿದಲ್ಲಿ ವಾಯು ಮಂಡಲದಲ್ಲಿ ಆಯಾ ಸಮಯದಲ್ಲಿ ತೇಜದ ಸ್ತರದಲ್ಲಿ ಮಂತ್ರಗಳ ಸಹಾಯದಿಂದ ಉಂಟಾದ ಘನೀ ಕರಣವು ಆವಶ್ಯಕವಿದ್ದಾಗ ಗುರಾಣಿಯಂತಾಗುತ್ತದೆ. ಇದು ಅಣುಬಾಂಬಿನ ಕಾರ್ಯವಿಧಾನದಿಂದ ಪ್ರಕ್ಷೇಪಿತ ವಾಗುವ ಮಹಾಭಯಂಕರ ಸೂಕ್ಷ್ಮ ವಿಕಿರಣಗಳನ್ನು ಎದುರಿಸಿ ಅವುಗಳೊಂದಿಗೆ ಹೋರಾಡಿ ಅವುಗಳನ್ನು ನಾಶಗೊಳಿಸುವುದು. ಏಕೆಂದರೆ ಯಜ್ಞಯಾಗಗಳಿಂದ ನಿರ್ಮಾಣವಾಗುವ ಊರ್ಜೆಯು ಸೂಕ್ಷ್ಮತರ ಸ್ತರದಲ್ಲಿ ಕಾರ್ಯ ಮಾಡುವಂತಹದ್ದಾಗಿರುವುದರಿಂದ ಅದು ಸೂಕ್ಷ್ಮರೂಪದಲ್ಲಿ ಕಾರ್ಯನಿರತವಾಗಿರುವ ರಜ-ತಮಾತ್ಮಕವಾದ ವಿಕಿರಣರೂಪದ ಕಿರಣಗಳನ್ನು ನಾಶಗೊಳಿಸಿ ಮನುಕುಲದ ರಕ್ಷಣೆ ಮಾಡುವುದು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ