ವಿವಾದಿತ ಭಾಗವು ಶ್ರದ್ಧಾಳ ಹತ್ಯೆಗೆ ಆಧರಿಸಿಲ್ಲ ! (ಅಂತೆ) – `ಸೋನಿ ಲಿವ್’ !

ಮುಂಬಯಿ – ಎಲ್ಲ ಹಂತದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಆದ ಟೀಕೆಯ ಬಳಿಕ `ಸೋನಿ ಲಿವ’ ಸಂಕೇತಸ್ಥಳದಲ್ಲಿ ಶ್ರದ್ಧಾ ವಾಲಕರ ಹತ್ಯೆಗೆ ಸಂಬಂಧಿಸಿದ ಸರಣಿಯಲ್ಲಿನ ಆಕ್ಷೇಪಾರ್ಹ ಭಾಗವನ್ನು ತೆಗೆದುಹಾಕಲಾಗಿದೆ. ಆದರೂ ಈ ಭಾಗ ಶ್ರದ್ಧಾ ವಾಲಕರ ಹತ್ಯೆಯ ಪ್ರಕರಣದ ಆಧಾರಿತವಾಗಿಲ್ಲವೆಂದು `ಸೋನಿ ಲಿವ’ ನಿಂದ ನೆಪವೊಡ್ಡಿದರೇ ಇನ್ನೊಂದೆಡೆ ಅವರು ದುಃಖವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಪ್ರೇಕ್ಷಕರ ಭಾವನೆಯನ್ನು ಗೌರವಿಸಿ ವಿವಾದಿತ ಭಾಗವನ್ನು ತೆಗೆದುಹಾಕಿರುವುದಾಗಿ `ಸೋನಿ ಲಿವ’ ನಿಂದ ಹೇಳಲಾಗಿದ್ದರೂ, ಪ್ರತ್ಯಕ್ಷದಲ್ಲಿ ಮಾತ್ರ ಈ ವಿಷಯದಲ್ಲಿ ಹಿಂದುತ್ವನಿಷ್ಠರಿಂದ ಸಲ್ಲಿಸಲಾಗುತ್ತಿದ್ದ ಒಂದು ಸರಳ ಮನವಿಯನ್ನು ಸ್ವೀಕರಿಸುವ ಸೌಜನ್ಯವನ್ನು ಕೂಡ `ಸೋನಿ ಲಿವ’ ನ ಮೂಲ ಕಂಪನಿಯಾಗಿರುವ `ಸೋನಿ ಪಿಕ್ಚರ್ಸ ನೆಟವರ್ಕ’ ನಿಂದ ತೋರಿಸಲಾಗಿಲ್ಲ. ಇದರಿಂದ `ಸೋನಿ ಲಿವ’ ದುಃಖ ವ್ಯಕ್ತಪಡಿಸುವುದು ಸುಲಭ ಮಾರ್ಗವೆಂದು ತೋರುತ್ತದೆ.

೧. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜನೇವರಿ 2ರಂದು ಹರಿಯಾಣಾ ರಾಜ್ಯದ ಗುರುಗ್ರಾಮದ `ಸೋನಿ ಪಿಕ್ಚರ್ಸ ನೆಟವರ್ಕ’ನ ಸೈಬರ ಸಿಟಿಯ ಕಚೇರಿಯಲ್ಲಿ ಈ ವಿಷಯದ ಕುರಿತು ಮನವಿ ಸಲ್ಲಿಸಲು ಸಮಿತಿಯ ವಕ್ತಾರರಾದ ಶ್ರೀ. ನರೇಂದ್ರ ಸುರ್ವೆ, ಹಿಂದುತ್ವನಿಷ್ಠ ಶ್ರೀ. ಸಂಜಯ ಚೋಪಡಾ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶ್ರೀ. ವೈದ್ಯನಾಥನ್ ಹೋಗಿದ್ದರು.

೨. ಈ ಸಂದರ್ಭದಲ್ಲಿ ಅಲ್ಲಿಯ ಅಧಿಕಾರಿಗಳು ಇದು `ಸೇಲ್ಸ ಆಫೀಸ್’ ಆಗಿದೆಯೆಂದು ಹೇಳುತ್ತಾ, ಭೇಟಿಯಾಗಲು ನಿರಾಕರಿಸಿದರು. ಜೊತೆಗೆ ಅವರು ಮನವಿಯನ್ನು ಮುಂಬಯಿಗೆ ಕೊಡುವಂತೆ ಹೇಳಿ ಕೈ ತೊಳೆದುಕೊಂಡರು. ಮನವಿಯನ್ನು ಸ್ವೀಕರಿಸಿ ಸಹಿ ಮತ್ತು ಮೊಹರು ಹಾಕಲು ವಿನಂತಿಸಿದಾಗ ಅದಕ್ಕೂ ನಿರಾಕರಿಸಿದರು ಎಂದು ಶ್ರೀ. ನರೇಂದ್ರ ಸುರ್ವೆಯವರು ದೈನಿಕ `ಸನಾತನ ಪ್ರಭಾತ’ ದ ಪ್ರತಿನಿಧಿಯೊಂದಿಗೆ ಮಾತನಾಡುವಾಗ ಮಾಹಿತಿಯನ್ನು ನೀಡಿದರು.

೩. `ಸೋನಿ ಪಿಕ್ಚರ್ಸ ನೆಟವರ್ಕ’ನ `ಸೋನಿ ಲಿವ’ ಸಂಕೇತಸ್ಥಳದಲ್ಲಿ `ಕ್ರೈಂ ಪಾಟ್ರೋಲ’ ಈ ಸರಣಿಯಲ್ಲಿ `ಅಹಮದಾಬಾದ- ಪುಣೆ ಮರ್ಡರ ಕೇಸ’ ನ 212 ನೇ ಅಂಕಣವನ್ನು ಡಿಸೆಂಬರ 27, 2022 ರಂದು ಪ್ರಸಾರ ಮಾಡಲಾಯಿತು. ಈ ಭಾಗವನ್ನು ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಲಕರ ಹತ್ಯೆಯ ಪ್ರಕರಣಕ್ಕೆ ಹೋಲುತ್ತಿರುವುದು ಗಮನಕ್ಕೆ ಬರುತ್ತಲೇ `ಸೋನಿ ಲಿವ’ ನ ವಿರುದ್ಧ ಸಾಮಾಜಿಕ ಮಾಧ್ಯಮದ ಮೇಲೆ ದೊಡ್ಡ ಪ್ರಮಾಣದಲ್ಲಿ ಟೀಕೆ ವ್ಯಕ್ತವಾಯಿತು. ಈ ಸಂಕೇತಸ್ಥಳವನ್ನು ಬಹಿಷ್ಕಾರ ಹಾಕುವಂತೆ ಸಾಮಾಜಿಕ ಮಾಧ್ಯಮದಿಂದ ಎಲ್ಲೆಡೆಯಿಂದ ಟೀಕೆಗಳು ಬರತೊಡಗಿದ ಕೂಡಲೇ `ಸೋನಿ ಲಿವ’ ಆಕ್ಷೇಪಾರ್ಹ ಭಾಗವನ್ನು ತೆಗೆದುಹಾಕಿ ಕೇವಲ ದುಃಖವನ್ನು ವ್ಯಕ್ತಪಡಿಸಿತು.

`ಪ್ರೇಕ್ಷಕರ ಭಾವನೆಯನ್ನು ಗಮನಿಸಿ ಭಾಗವನ್ನು ತೆಗೆದುಹಾಕಲಾಯಿತು’ (ಅಂತೆ) – `ಸೋನಿ ಲಿವ’ ನೆಪ

ಇದು ಕಾಲ್ಪನಿಕ ಕಥೆಯಾಗಿದ್ದು 2011 ರಲ್ಲಿ ನಡೆದ ಒಂದು ಹತ್ಯೆಯನ್ನು ಆಧಾರಿಸಿದೆ, ಈ ಕಥೆ ಮತ್ತು ಪ್ರಸಂಗವು ಇತ್ತೀಚಿನ ಯಾವುದೇ ಘಟನೆಗೆ ಸಂಬಂಧಿಸಿಲ್ಲ; ಆದರೆ ಪ್ರೇಕ್ಷಕರ ಭಾವನೆಯನ್ನು ಗಮನಿಸಿ ಈ ಭಾಗವನ್ನು ತೆಗೆದು ಹಾಕಲಾಗಿದೆ. ಇದರಿಂದ ಪ್ರೇಕ್ಷಕರ ಭಾವನೆಗಳಿಗೆ ನೋವನ್ನುಂಟು ಮಾಡಿದ್ದರೇ, ನಾವು ಮನಃ ಪೂರ್ವಕವಾಗಿ ದುಃಖವನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದು `ಸೋನಿ ಲಿವ’ ತನ್ನ ಹೇಳಿಕೆಯನ್ನು ಘೋಷಿಸಿದೆ.

ಸಂಪಾದಕೀಯ ನಿಲುವು

  • ಹಿಂದುತ್ವನಿಷ್ಠರಿಂದ ನೀಡಲಾದ ಮನವಿಯನ್ನು ಸ್ವೀಕರಿಸದೇ ಕೇವಲ ದುಃಖವನ್ನು ವ್ಯಕ್ತಪಡಿಸುವುದು ಸುಲಭ !
  • ಹಿಂದೂಗಳ ಭಾವನೆಗಳಿಗೆ ಸ್ವಲ್ಪವೂ ಬೆಲೆ ಕೊಡದೇ ಕೇವಲ ದುಃಖ ವ್ಯಕ್ತಪಡಿಸುವುದು ಸುಲಭವೆಂದು `ಸೋನಿ ಲಿವ’ ಸಂಕೇತಸ್ಥಳವನ್ನು ಹಿಂದೂಗಳು ಬಹಿಷ್ಕಾರ ಹಾಕಿ ಪಾಠ ಕಲಿಸಬೇಕು, ಅಲ್ಲದೇ ಸರಕಾರವೂ ಅದರ ಮೇಲೆ ತಕ್ಷಣವೇ ನಿರ್ಬಂಧ ಹೇರಬೇಕು !