ಸಂವಿಧಾನವನ್ನು ಸಾಕ್ಷಿಯಾಗಿರಿಸಿ ಪ್ರತಿಜ್ಞೆ ಮಾಡುವ ಯಾವುದೇ ವ್ಯಕ್ತಿ ಎಂದಿಗೂ ಸಮಾನ ನಾಗರಿಕ ಕಾನೂನನ್ನು ವಿರೋಧಿಸುವುದಿಲ್ಲ !

ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರ ಸ್ಪಷ್ಟನೆ

ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್

ನವದೆಹಲಿ -ಸಂವಿಧಾನವನ್ನು ಸಾಕ್ಷಿಯಾಗಿರಿಸಿ ಪ್ರತಿಜ್ಞೆ ಮಾಡಿರುವ ಯಾವುದೇ ವ್ಯಕ್ತಿ ಸಮಾನ ನಾಗರೀಕ ಕಾನೂನನ್ನು ವಿರೋಧಿಸುವುದಿಲ್ಲ, ಎಂದು ಕೇರಳದ ರಾಜ್ಯಪಾಲ ಆರೀಫ್ ಮಹಮ್ಮದ್ ಖಾನ್ ಅವರು ಆಜ್ ತಕ್ ವಾರ್ತಾ ವಾಹಿನಿಗೆ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಉತ್ತರಿಸುವಾಗ ಸ್ಪಷ್ಟವಾದ ಅಭಿಪ್ರಾಯ ಮಂಡಿಸಿದರು.

ಸಮಾನ ನಾಗರಿಕ ಕಾನೂನು, ಇದು ವಿವಾಹ, ಪದ್ಧತಿ ಅಥವಾ ಪರಂಪರೆ ಇದಕಷ್ಟೇ ಸೀಮಿತವಾಗಿಲ್ಲ, ಇದು ಸಮಾನ ನ್ಯಾಯದ ಬಗ್ಗೆ ಇದೆ. ಇಬ್ಬರೂ ಪತ್ನಿಯರನ್ನು ಮಾಡಿಕೊಳ್ಳಲು ಮತಾಂತರ ಮಾಡಲಾಗುತ್ತದೆ. ಇಂತಹ ಕೆಲವು ಪ್ರಕರಣಗಳು ಇವೆ. ಇಲ್ಲಿ ಸಮಾನತೆ ಕಾಣುವುದಿಲ್ಲ ಎಂದು ಅವರು ಹೇಳಿದರು. ಅವರು ತಮ್ಮ ಮಾತು ಮುಂದುವರಿಸಿ, ಭಾರತದಲ್ಲಿ ಬುರ್ಖಾಧರಿಸಲು ನಿಷೇಧ ಇಲ್ಲ, ಆದರೆ ಶಾಲೆ ಅಥವಾ ಮಹಾವಿದ್ಯಾಲಗಳಿಗೆ ಅವರ ಕೆಲವು ನಿಯಮಗಳು ಇರಬಹುದು. ಆದ್ದರಿಂದ ಇಲ್ಲಿ ಹಿಜಾಬ್ ( ಸ್ತ್ರೀಯರು ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳಲು ಉಪಯೋಗಿಸುವ ವಸ್ತ್ರ) ಧರಿಸಲು ಕೆಲವು ನಿಯಮಗಳಿರಬಹುದು. ಯಾರಿಗೆ ಹಿಜಾಬ್ ಧರಿಸುವುದಿದೆ ಅವರು ಯಾವ ಮಹಾವಿದ್ಯಾಲಯದಲ್ಲಿ ಅದಕ್ಕೆ ಅನುಮತಿ ಇದೆ ಅಲ್ಲಿ ಅವರು ಹೋಗಬಹುದು ಎಂದೂ ರಾಜ್ಯಪಾಲರು ಈ ಸಮಯದಲ್ಲಿ ಹೇಳಿದರು.