ಮುಸಲ್ಮಾನೇತರ ಹುಡುಗರಿಗೆ ಮದರಸಾದಿಂದ ಇಸ್ಲಾಮಿನ ಶಿಕ್ಷಣ ನೀಡಲಾಗುತ್ತಿದೆ!

ರಾಷ್ಟ್ರೀಯ ಬಾಲ ಅಧಿಕಾರ ಸಂರಕ್ಷಣಾ ಆಯೋಗದಿಂದ ರಾಜ್ಯ ಗಳಿಗೆ ವಿಚಾರಣೆ ನಡೆಸುವ ಆದೇಶ !

ನವದೆಹಲಿ -ರಾಷ್ಟ್ರೀಯ ಬಾಲ ಅಧಿಕಾರ ಸಂರಕ್ಷಣಾ ಆಯೋಗವು ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶ ಇವುಗಳಿಗೆ ನೋಟಿಸ್ ನೀಡಿ ಮದರಸಾಗಳಲ್ಲಿ ಶಿಕ್ಷಣ ಪಡೆಯುವ ಮುಸಲ್ಮಾನೆತರ ಮಕ್ಕಳ ವಿಸ್ತೃತ ವಿಚಾರಣೆ ನಡೆಸುವ ಆದೇಶ ನೀಡಿದೆ. ವಿಚಾರಣೆಯ ನಂತರ ಈ ಮಕ್ಕಳಿಗೆ ಸಾಮಾನ್ಯ ಶಾಲೆಗಳಲ್ಲಿ ಪ್ರವೇಶ ನೀಡುವುದಕ್ಕೆ ಕೂಡ ಆದೇಶ ನೀಡಿದೆ. ಇದರ ಜೊತೆಗೆ ರಾಜ್ಯದ ಮುಖ್ಯ ಸಚಿವರಿಗೆ ಮದರಸಾದ ನೋಂದಣಿ ಮಾಡಿಸಲು ಸಹ ಹೇಳಲಾಗಿದೆ.

ಮುಸಲ್ಮಾನೇತರ ಮಕ್ಕಳಿಗೆ ಸರಕಾರಿ ಅನುದಾನ ಇರುವ ಮದರಸಾದಲ್ಲಿ ಪ್ರವೇಶ ನೀಡಲಾಗುತ್ತಿದ್ದು ಅವರಿಗೆ ಶಿಷ್ಯ ವೇತನ ಕೂಡ ದೊರೆಯುತ್ತಿದೆ. ಇಲ್ಲಿ ಮುಸಲ್ಮಾನೇತರ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ. ಇದು ಸಂವಿಧಾನದ ಕಲಂ ೨೮(೩) ರ ನೇೆರ ಉಲ್ಲಂಘನೆ ಆಗಿದೆ ಎಂದು ಆಯೋಗವು ನೋಟಿಸಿಗೆ ನೀಡಿದ ಉತ್ತರದಲ್ಲಿ ತಿಳಿಸಿದೆ.

ಸಂಪಾದಕೀಯ ನಿಲುವು

ಈ ರಾಜ್ಯಗಳಿಗೆ ಸ್ವತಃ ಏಕೆ ತಿಳಿಯುವುದಿಲ್ಲ ? ಹಿಂದೂಗಳ ಸಂಘಟನೆಗಳು  ಸಹ ಇದರ ಕಡೆ ಗಮನ ನೀಡುವ ಅವಶ್ಯಕತೆ ಇದೆ. ಮುಸಲ್ಮಾನರಿಗೆ ಮದರಸಾದಿಂದ ಯಾವ ರೀತಿ ಧರ್ಮಶಿಕ್ಷಣ ಸಿಗುತ್ತದೆ ಹಾಗೆ ಹಿಂದೂಗಳಿಗೆ ಕೂಡ ಸಿಗುವುದಕ್ಕಾಗಿ ಹಿಂದೂಗಳ ಸಂಘಟನೆಗಳು ಇನ್ನು ಮುಂದೆ ಸಮರೋಪಾದಿಯಲ್ಲಿ ಪ್ರಯತ್ನಿಸುವುದು ಅವಶ್ಯಕವಾಗಿದೆ.